ಪುಟ:Mrutyunjaya.pdf/೩೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪೮ ಮೃತ್ಯುಂಜಯ ಮುದುಕ ಎಲ್ಲವನ್ನೂ ಬಲ್ಲವನು ಎನಿಸಿತು ಸೆರ್ಕೆಟ್ ಗೆ. "ಹೌದು...ಆ ದಂಡಿಗೆ ಆಹಾರಧಾನ್ಯ ಸರಬರಾಜು ಆಗೋದು ನಮ್ಮ ನಗರಿಯ ಮೂಲಕ. ಇಲ್ಲಿ ದೋಣಿಗಳಿಂದ ಇಳಿಸಿ ಕತ್ತೆಗಳ ಮೇಲೆ ಹೇರಿಸ್ಕೊಂಡು ಹೋಗ್ಬೇಕು. ಅದರ ಉಸ್ತುವಾರಿಗೇಂತ ಅಮೆನೆಮೊಪೆಟ್ ಒಮ್ಮೆ ಇಲ್ಲಿಗೆ ಬಂದಿದ್ದ ಹಾಗೆ ಬಂದವನನ್ನು ಮಹಾ ಅರ್ಚಕರು ಕರೆಸ್ಕೊಂಡು ಮಾತಾಡಿದ್ರು.” “ ಅಥವಾ. ಉಸ್ತುವಾರಿಗೋಸ್ಕರ ಬಾ ಅಂತ ಅವರೇ ಹೇಳಿ ಕಳಿಸಿದರೊ?” “ ಏನೋಪ್ಪ.” " ಅಂತೂ ಆ ಭೇಟಿ ಆದ್ಮೇಲೆ ಹೇಪಾಟ್ ದಂಡು ನೋಡೋಕೆ ಹೋದರು ಅಲ್ಲವಾ ? " "ಹ್ಞ,ಹೌದು." ಎಷ್ಟೋ ಸಿಕ್ಕುಗಂಟುಗಳು ಬಿಚ್ಚಿಕೊಂಡು, ಪರಿಸ್ಥಿಯ ರೂಪುರೇಖೆಗಳು ಹೆಖ್ವೆಟ್ ಗೆ ನಿಚ್ಚಳವಾಗಿ ಕಂಡುವು. ಸಂತೃಪ್ತಿಯ ಮುಗುಳುನಗೆ ಒಣ ತುಟಿಗಳ ಮೇಲೆ ಮೂಡಿತು.ನೋಟವನ್ನು ಮೃದುಗೊಳಿಸಿ ಆತ ಸೆರ್ಕೇಟ್ ನತ್ತ ನೋಡಿದ. " ಅಲ್ಲಪ್ಪ .ಎಷ್ಟು ಹೊತ್ತಾಯ್ತು ನಾನು ಬಂದು!ಪಾನೀಯ ಉಪಾಹಾರ ಏನಾದರೂ ಬೇಕಾ ಅಂತ ನೀನು ಕೇಳಲೇ ಇಲ್ಲವಲ್ಲ!” "ಕ್ಷಮಿಸಿ! ವಿಚಾರಣೆ ಶುರು ಮಾಡಿದಿರಿ .ಮುಗೀಲಿ ಅಂತ...." "ವಿಚಾರಣೆ ನಡೆಸೋ ವಿಶೇಷಾಧಿಕಾರ ನನಗಿದೆ ನಿಜ.ಹಾಗೇಂತ ಹೇಪಾಟ್ ನಿನಗೆ ತಿಳಿಸಿರಬೇಕು ಅಲ್ಲವಾ?" " ಅವರಲ್ಲ. ರಾ ಮಂದಿರದ ಮುಖ್ಯ ಅರ್ಚಕರು.” "ಎರಡೂ ಒಂದೇ...ನೀನು ದೇಶದ ಒಂದು ಮೂಲೇಲಿದ್ದೀಯಾ.ಇಂಥಿಂಥ ಕೆಲಸ ನೀನು ಮಾಡಬೇಕೂಂತ ಕಟ್ಟುನಿಟಾಗಿ ಯಾರೂ ನಿನಗೆ ಹೇಳಿಯೇ ఇల్ల. ಅಂದ ಮೇಲೆ , ಅಜ್ಞಾನದ ಕಾರಣ ಯಾವುದೋ ಕೆಲಸ ನೀನು ಮಾಡದೇ ಇದ್ದರೆ,ಅದು ತಪ್ಪು ಹ್ಯಾಗಾಗ್ತದೆ?" ಸೆರ್ಕೆಟ್ ನ ಮುಖ ಗೆಲುವಾಯಿತು.ಹೆಖ್ವೇಟ್ ನೆದುರು ಆತ ಮೈಚಾಚಿ ನಮಿಸಿದ.