ಪುಟ:Mrutyunjaya.pdf/೩೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯಂಜಯ ೩೪೯

   " ಏಳು. ನಾನು ಇಲ್ಲಿಂದ ಹೋಗೋ ವರೆಗೂ ನನ್ನ ಮಗ್ಗುಲಲ್ಲೇ 

ಇರು."

   ಸೆರ್ಕೆಟ್ ಎದ್ದು, ವಿನಮ್ರನಾಗಿ ತಿಳಿಸಿದ :
   “ ಎಷ್ಟು ಹೊತ್ತಿಗಾದರೂ ಸರಿ, ಹೆಖ್ವ್ ಟ್ ಮಂದಿರಕ್ಕೆ ಬರಬಹುದು------- 
ಅಂತ ಮಧ್ಯಾಹ್ನವೇ ಹೇಳಿಕಳಿಸಿದ್ರು.”
   " ನಿನ್ನೆಯೇ ನಾನು ಯಾಕೆ ಬರಲಿಲ್ಲ ಅಂತ ಯೋಚನೆಗೆ ಈಡಾದರೇನೋ? 

ಸದ್ಯದಲ್ಲಿ ಅಖಂಡ ಪೂಜೆ ಯಾವುದೂ ಇಲ್ಲವಲ್ಲ....”

    "ಇಲ್ಲಾಂತ ಕಾಣ್ತದೆ.”
    "ಹಾಗಾದರೆ ಏನೂ ಅವಸರವಿಲ್ಲ. ನಿಧಾನವಾಗಿ ನಾಳೆ ನೋಡಿದ ರಾಯ್ತು"
    "ಹಾಗೇಂತ ಹೇಳಿ ಕೇಳಿಸಲೆ?" 
    "ಏನೂ ಬೇಡ. అల్లಯ್ಯ, ಪುನಃ ಮರೆತೆಯಲ್ಲ! ಪಾನೀಯ ಉಪಾ 

ಹಾರ....”

    * ಕ್ಷಮಿಸಿ ! ಏನಾದರೂ ಪಾನೀಯ ಉಪಾಹಾರ..?” 
    “ ಬೇಡ. ಕತ್ತಲಾಗ್ತ ಬಂತು. ಭೋಜನಕ್ಕೆ ಮುಂಚೆ ಈಗೇನೂ 

ಬೇಡ. ಒಳ್ಳೆ ಅಡುಗೆಯವನನ್ನು ಗೊತ್ತು ಮಾಡಿದೀಯಾ?”

    "ಹೂಂ."
    " ಶಿಷ್ಟಾಚಾರ ಗೊತ್ತಿರೋ ದಾಸಿಯರು?” 
    “ ಇಬ್ಬರಿದ್ದಾರೆ."
    “ ನನ್ನ ಪರಿವಾರದವರ ವಾಸ್ತವ್ಯಕ್ಕೆ ಏರ್ಪಾಟು ಮಾಡಿ ಬಾ. ಹಾಗೆಯೇ, ನನ್ನ ಲಿಪಿಕಾರರನ್ನು ಒಳಗೆ ಕಳಿಸು. ಲೇಖನ ಸಾಮಗ್ರಿ ತಗೊಂಡು ಬರಲಿ.”
    "ಆಗಲಿ."
    ತನ್ನ ಕಾವಲುಭಟನ ಈಟ ಹೆಖ್ವ್ ಟ್ಗೆ ಬಾಗಿಲಲ್ಲಿ ಕಾಣಿಸಿತು.ಸೆರ್ಕೆಟ್ ಹೊರಹೋದೊಡನೆ ಆವರಿಸತೊಡಗಿದ್ದ ಒಂಟಿತನದ ಭಾವನೆಯನ್ನು, ಆ ಈಟ ಹೊಡೆದೋಡಿಸಿತು. ಸೆರ್ಕೆಟ್ ಅಂಗಳಕ್ಕಿಳಿದ ಕೂಡಲೇ ಹೆಖ್ವ್ ಟ್ ನ ಆಪ್ತ ಸೇವಕ ಒಳಹೋದ. ತನ್ನ ಒಡೆಯನ ಅಣತಿಯಂತೆ ರಾಜಗೃಹದಲ್ಲಿ ದೀಪಗಳು ಸಾಕಷ್ಟಿವೆಯೆ ಎಂದು ವಿಚಾರಿಸಿದ. ಒಂದೆರಡು ದೀಪಗಳಲ್ಲಿ ಎಣ್ಣೆ ಇರ