ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮೃತ್ಯುಂಜಯ
೩೫೩
ಯವರ ಕಟ್ಟಪ್ಪಣೆಯಾಗಿದೆ....")
ತನ್ನ ಪರಿವಾರ ಅಂಗಳದಲ್ಲಿರುವುದು ಖಚಿತವಾದ ಮೇಲೆ ಹೆಖ್ವೆಟ್ ಅಳುಕೆಂಬುದೇ ತನಗರಿಯದು ಎಂಬಂತೆ, ತಲೆಯನ್ನು ತೂಗಿ ತೂಗಿ ಆಡಿಸುತ್ತ, ಹೋರಗೆ ಬಂದ. ಅಪರಿಚಿತ ಸ್ಥಳದ ಕತ್ತಲು ತನ್ನನ್ನು ಪರಚಿ ದಂತಾಯಿತು. ಆಕಾಶದ ಕಡೆಗೊಮ್ಮೆ ದೃಷ್ಟಿಬೀರಿ, ಕೆಲ ನಕ್ಷತ್ರಗಳನ್ನು ಕಂಡು ಅಷ್ಟಕ್ಕೇ ತೃಪ್ತನಾಗಿ, ಒಳಕ್ಕೆ ಮರಳಿದ. ಇರುಳಿನ ಭೋಜನದ ಘಮಘಮ ಪಡಸಾಲೆಯನ್ನು ವ್ಯಪಿಸಿತ್ತು. ....ರಾತ್ರೆ ಕೊಠಡಿ ತಲಪುತ್ತಲೇ ತೂಕಡಿಕೆ. ಶಿಷ್ಟಾಚಾರ ಅರಿತಿದ್ದ ದಾಸಿ ಬಂದಳು. ಅನುಭವಿ. “ನಾಳೆ ಬರಲಾ?" ಎಂದಲು, ಮುದುಕನನ್ನ ಕಂಡು. ತನ್ನ ಕಾರ್ಯಕ್ರಮ ಅನಿಶ್ಚಿತವಾಗಿದ್ದರೂ ನಿದ್ದೆಗಣ್ಣಿನಲ್ಲಿ ಹೆಖ್ವೆಟ್ "ಹೂಂ." ಎಂದ. * * * * ಮಾರನೆಯ ಬೆಳಿಗ್ಗೆ, ಸೂರ್ಯು ಕೆಲವು ಮಾರೆತ್ತರ ಮೇಲೆ ಬಂದ ಬಳಿಕ, ಹಖ್ವೆಟ್ ರಾ ಮಂದಿರಕ್ಕೆ ಹೊರಟ. ಜತೆಯಲ್ಲಿ ಸೆರ್ಕೆಟ್, ಲಿಪಿಕಾರ, ಆಪ್ತ ಸೇವಕ, ಅಂಗರಕ್ಷಕ, ದೋಣಿಕಾರ, ಅಂಬಿಗರ. ಹಿಂದೆ ಮುಂದೆ ಆಡುತ್ತ ಸಾಗಿದ್ದ ತಲೆ, ಅತ್ತಿತ್ತ ಹೊರಳುತ್ತಿದ್ದ ಕಣ್ಣುಗಳು. ಎತ್ತರದ ಆ ನಿತ್ರಾಣ ಜೀವಿಯನ್ನು ದಾರಿಯುದ್ದಕ್ಕೂ ಎಡಬಲಗಳೀದ ಎಲ್ಲರೂ ಕುತೂಹಲದಿಂದ ನೋಡುವವರೇ . ಸೆರ್ಕೆಟ್ ಒಮ್ಮೊಮ್ಮೆ ಹೆಖ್ವೆಟ್ನ ಮುಂದೆ ಇರುತ್ತಿದ್ದ; ಒಮ್ಮೋಮ್ಮೆ ಹಿಂದೆ ನಿಲ್ಲುತ್ತಿದ್ದ, ಮಹಾ ಅರ್ಚಕ ಹೇಪಾಟ್ಗೆ ಸಿಟ್ಟು ಬಂದಿತ್ತು . ಮಹಾಮಂದಿರದ ಮುಖ್ಯ ಅರ್ಚಕನೆದುರು ಅವನು ಕೂಗಾಡಿದ : “ನಿನ್ನೆ ಸಂಜೆ ಬರಲಿಲ್ಲ, ರಾತ್ರೆ ಬರಲಿಲ್ಲ, ಬಡ ಮುದುಕ ವಿಶ್ರಾಂತಿ ತಗೊಂಡ. ಒಪ್ಪೋಣ. ಬೆಳಿಗ್ಗೆ ಪೂಜಾವೇಳೆಗಾದರೂ ಯಾಕೆ ಮುಖ ತೋರಿಸಲಿಲ್ಲ ಇವನು? ಸರು ಸಭೆಯ ಅತ್ಯಂತ ಹಿರಿಯ ಸಲಹೆಗಾರ ಅಂತ ಅಹಂಕಾರ! ಇಂಥವರಿಂದಾಗಿಯೇ ಐಗುಪ್ತ ದೇಶ ಅಸ್ವಸ್ಥವಾಗಿರುವುದು!” ೨೩