ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮೃತ್ಯುಂಜಯ
೩೫೪ ಆನ್ ನಗರಿಯ ದೀರ್ಘಕಾಲದ ವಾಸ್ತವ್ಯದಲ್ಲಿ ತನ್ನನ್ನು ಯಾರೋ ಅಣ ಕಿಸಿದಂತೆ ಮಹಾ ಅರ್ಚಕನಿಗೆ ಕಂಡುದು ಆ ದಿನವೇ. ಸೂರ್ಯಕಿರಣಗಳು ವಿಪುಲವಗಿ ಗರ್ಭಗುಡಿಯನ್ನು ಹೊಕ್ಕು , ಹೊಸ ವಸನ ಧರಿಸಿದ್ದ ಆಳೆತ್ತರದ ರಾ ಮೂರ್ತಿಯನ್ನು ಬೆಳಗಿದವು . ಹೇಪಾಟ್ ದೇವರ ಮುಂದೆ ಕುಳಿತು ಮೌನ ಪಾರ್ಥನೆಯಲ್ಲಿ ಮಗ್ನನಾದ. ಸ್ವಲ್ಪ ಸಮಯದ ಬಳಿಕ ಕಣ್ಣು ತೆರದ , "ಆತ ಬಂದರೆ ಪ್ರಸಾದ ಕೊಟ್ಟು ಕಳಿಸ್ಬಿಡಿ," ಎಂದು ಮುಖ್ಯ ಅರ್ಚಕನಿಗೆ ಹೇಳಿ, ಪುನಃ ಧ್ಯಾನಾ ಸಕ್ತನಾದ. ಹೆಖ್ವೆಟ್ನ ತಂಡದವರು ಮಂದಿರದ ಪವಿತ್ರ ಕೊಳದಲ್ಲಿ ಪಾದಗಳನ್ನು ತೊಳೆದು, ತಲೆಗಳಿಗೂ ಮೈಗಳಿಗೂ ನೀರಹನಿಗಳನ್ನು ಚಿಮುಕಿಸಿ ಕೊಂಡರು. ಹೆಖ್ವೆಟ್ ಪರಿವಾರ ಮಂದಿರದತ್ತ ಹೊರಟ ಸುದ್ದಿ ಮುಖ್ಯ ಅರ್ಚಕನಿಗೆ ತಲಪಿತು. (ಧಾನಸ್ಥಿತಿಯಲ್ಲಿದ್ದರೂ ಪಿಸುದನಿಯ ಆ ಸಂದೇಶ ಹೇಪಾಟ್ನ ಕಿವಿಗೂ ತಟ್ಟಿತು; ಅವನ ಧ್ಯಾನಾಸಕ್ತಿ ಮತ್ತಷ್ಟು ಗಾಢವಾಯಿತು.) ಮುಖ್ಯ ಅರ್ಚಕ ಅಂದುಕೊಂಡ : “ಈಗ ಪವಿತ್ರ ಕೊಳ ತಲಪಿರಬಹುದು: ಅಲ್ಲಿಂದ ಈ ಕಡೆಗೆ ಬರ್ತಾರೆ.” ಆತ ಮಂದಿರದ ಪ್ರವೇಶದ್ವಾರದೆದುರು ನಿಂತ. ಸೆರ್ಕೆಟ್ ಮುಂದಾಗಿ ಓಡಿ ಬಂದು, “ಬರ್ತರ್ದರೆ” ಎಂದ. ಮಹಾ ಅರ್ಚಕ ಗರ್ಭಗುಡಿಯಲ್ಲಿ ದೇವರೆದುರು ಧ್ಯಾನಾಸಕ್ತನಾಗಿರುವು ದನ್ನು ಆತ ಗಮನಿಸಿದ. ಯಾವ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸದೆ ಮುಖ್ಯ ಅರ್ಚಕನ ಮಗ್ಗುಲಿಗೆ ಸರಿದೆ.
ಹಖ್ವೆಟ್ ದ್ವಾರವನ್ನು ಸಮೀಪಿಸಿ, ಮುಖ್ಯ ಆರ್ಚಕನನ್ನು ನೋಡಿ ತುಸು ತಲೆ ಆಡಿಸಿ, "ಪೆರೋನ ಆಯುರಾರೋಗ್ಯ ವರ್ಧಿಸಲಿ!" ಎಂದು. ಉಳಿ ದವರು ಅರ್ಚಕನಿಗೆ ತಲೆ ಬಗ್ಗಿಸಿ ನಮಿಸಿದರು. ತೋಳನ್ನೆತ್ತಿ ಅವರೆಲ್ಲರನ್ನೂ ಆಶೀರ್ವದಿಸಿ ಆಚರ್ಕನೆಂದ: "ಪೆರೋನ ಆಯುರಾರೋಗ್ಯ ವರ್ಧಿಸಲಿ!"
ಬಾಗಿಲನ್ನು ದೂರದಿಂದಲೇ ಪರೀಕ್ಷಕ ನೋಟದಿಂದ ನೋಡಿದ್ದ ಹೆಖ್ವೆಟ್ ಹೇಳಿದ: