ಪುಟ:Mrutyunjaya.pdf/೩೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೫೬ ಮೃತ್ಯುಂಜಯ

     ಊರಿನ   ಚಿಕ್ಕವರು    ದೊಡ್ಡವರು    ಪ್ರಾಂಗಣದ     ಕಟಕಟೆಯಾಚೆ   ನೆರೆಯ     ತೊಡಗಿದರೆ.    ನಗರಾಧಿಕಾರಿ    ಅವರ   ಬಳಿ   ಸಾರಿ   "ಹೋಗಿ!    ಹೋಗಿ!"        ಎಂದರೂ ಅವರು ಕೇಳಲಿಲ್ಲ.

ಅಂಗಳದಲ್ಲೇ ನಿಂತ ಹೆಖ್ವೆಟ್'ನನ್ನು ಉದ್ದೇಶಿಸಿ ಮುಖ್ಯ ಅರ್ಚಕ ಅಂದ:

     “ಇವತ್ತೇ  ರಾಜಧಾನಿಗೆ  ವಾಪಸಾಗ್ತೀರೇನೋ?”
     "ವಿಷಯ  ನಿಮಗೆ ಗೋತ್ತಿದೆ."
     -ನಿಷ್ಟುರವಾಗಿ ಹೆಖ್ವೆಟ್ ನುಡಿದ.
     “ಹ್ಞ....ಆದರೆ—”
     "ನಾವು   ಬಂದಿರೋದು  ದೇವದರ್ಶನಕ್ಕೆ   ಹಾಗೂ    ಮಹಾ    ಅರ್ಚಕರ        ಭೇಟಿಗೆ. ಒಂದು   ನೆರವೇರಿತು.   ಇನ್ನೊಂದಕ್ಕಾಗಿ    ಕಾಯ್ತೇವೆ.     ಆದಾದ              ಮೇಲೆ  ಪಯಣದ  ಯೋಚನೆ.  ರಾಜಕಾರ್ಯ,    ಅವಸರ    ಸಲ್ಲದು.”
    “ಮಹಾ   ಆರ್ಚಕರು  ಪೂಜೆ  ಮುಗಿಸಿ   ಹೊರಬರೋ   ತನಕ    ನನ್ನ    ವಸತೀಲಿ ವಿಶ್ರಾಂತಿ  ತಗೋಬಹುದಲ್ಲ.”
   “ಓಹೋ,    ಭೋಜನದ    ಹೊತ್ತಿಗಾದರೂ     ಮಹಾ ಅರ್ಚಕರು   ಏಳ        ಬಹುದು   ಅಲ್ಲವಾ ?”
   “ಅದಕ್ಕೂ  ಮೊದಲೇ  ಹೊರಗೆ  ಬರ್ತಾರೆ. ರಾ ನೆತ್ತಿಗೆ ಬರೋದಕ್ಮುಂಚೆ,ಯಾವಾಗಲೂ  ಗರ್ಭಗುಡಿಯ  ಬಾಗಿಲು ಹಾಕ್ತೇವೆ."
   "ನಿಜ,  ನಿಜ.  ದೇವರಿಗೂ    ವಿಶ್ರಾಂತಿ   ಬೇಡವೆ?  ಬಾ  ಮಗು  ಸೆರ್ಕೆಟ್,       ಇವರ  ವಸತಿಗೆ   ಹೋಗೋಣ." 
   ಮಂದಿರದ   ಸಮೀಪದಲ್ಲಿಯೇ   ಇತ್ತು   ಮುಖ್ಯ    ಅರ್ಚಕನ   ಮನೆ      ಪೀಠ    ಗಳು,   ಒರಗು    ದಿಂಬುಗಳು,   ಭಿತ್ತಿ    ಚಿತ್ರಗಳು,   ಸೇವಕರಂತೆ    ಅತ್ತಿತ್ತ   ಓಡಾಡು ತ್ತಿದ್ದ   ಕಿರಿಯ   ದೇವಸೇವಕರು....
   ಹೆಖ್ವೆಟ್  ನಸುನಕ್ಕು  ಒಂದು   ಪೀಠದ   ಮೇಲೆ  ಕುಳಿತುಕೊಳ್ಳುತ್ತ ಅಂದ :
                 “ರಾನ ಬಡತನದಿಂದ ನಿಮಗೆ ತೊಂದರೆಯಾದಂತಿಲ್ಲ ಅರ್ಚಕರೇ !”