ಪುಟ:Mrutyunjaya.pdf/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೬

ಮೃತ್ಯುಂಜಯ

ಪ್ಟಾ, ರಾಜಧಾನಿ ಮೆಂಫಿಸಿನ ಮಹಾದೇಗುಲ ಅವನದು. ಯಾವುದು ಸತ್ಯ
___ಇದೊ ? ಅದೊ ? ರಾನ ವಾಸ ಆಕಾಶದಲ್ಲಿ, ಪ್ಟಾನಿಗಿಂತ ಅವನೇ
ದೊಡ್ಡವನಿರಬಹುದು.
ನೆಫಿಸ್ ಕೇಳಿದಳು :
"ಏನು ಯೋಚಿಸ್ತಿದೀಯಾ ?"
"ದೇವರ ವಿಷಯ."
"ಗುಡ್ಡ ಹತ್ತಬೇಕು. ಹೊರಡೋಣವಾ ?"
ಆ ಮಾತು ಕಿವಿಗೆ ಬಿದ್ದ ಅಂಧ ಗಾಯಕನೆಂದ:
"ಹ್ಞ. ಹೊರಡ್ಬೌದು. ಸ್ವಲ್ಪ ಮುಂಚೆ ಹೋಗಿ ದೇವರ ಗೋರಿ
ಹತ್ತಿರದ ದಿಬ್ಬದ ಮೇಲೆ ಜಾಗ ಹಿಡೀರಿ. ಅಲ್ಲಿಂದ ಚೆನ್ನಾಗಿ ಕಾಣಿಸ್ತದೆ."
"ಎಲ್ಲರೂ ಏಳಿ ಹಾಗಾದರೆ," ಎಂದ ಮೆನೆಪ್ಟಾ.
ಖಿವವ ತುಂಬಿದ ತೊಗಲಿನ ಚೀಲ ಮುಕ್ಕಾಲು ಪಾಲು ಬರಿದು.
ನೀರಿನ ಚೀಲದಲ್ಲಿ ಇನ್ನೂ ಅರ್ಧದಷ್ಟಿತ್ತು. ಹೊರಲು ಇದ್ದದ್ದು ಒಂದೇ
ಬುತ್ತಿ ಗಂಟು. ಉಳಿದುವೆಲ್ಲ ಅವರವರು ಕೊಂಡಿದ್ದ ವಸ್ತುಗಳ ಪುಟ್ಟ
ಗಂಟುಗಳು.
ಯಾತ್ರಿಕರು ಎದ್ದು ನಡೆಯತೊಡಗಿದರು. ಅವರಲ್ಲೊಬ್ಬ ಗಾಯಕನನ್ನು
ಅನುಕರಿಸುತ್ತ ರಾಗವೆಳೆದ :
"ಯೋ ಯೋ ಯೋ"
ಎರಡು ಸಾಲುಗಳನ್ನೂ ಹಾಡಿದ:
"ಒಸರಿಸ ದೇವ ನಮೋ
ಪರಲೋಕದ ಒಡೆಯ ನಮೋ"....
ಕಡಿದಾದ ದಾರಿಯಲ್ಲಿ ಸಾಗುತ್ತ ಆ ಯಾತ್ರಿಕರಲ್ಲಿ ಹಲವರು ತಾವೂ
ಅಂದರು :
"ಯೋ ಯೋ ಯೋ."

****

ದಿಬ್ಬದ ಮಗ್ಗುಲಲ್ಲಿ ಜನರ ಗುಂಪು ನೆರೆದಿತ್ತು. ನಾಮಫಲಕಗಳನ್ನು
ಬರೆಸುತ್ತಿದ್ದವರು ಕೆಲವರು; ನೋಡುತ್ತ ನಿಂತಿದ್ದವರು ಹಲವರು. ಒಬ್ಬ