ಪುಟ:Mrutyunjaya.pdf/೩೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೩೫೭

ಮುಖ್ಯ ಅರ್ಚಕನೆಂದ:
“ ಭಕ್ತರ ವಿಶ್ವಾಸ. ಎಲ್ಲ ಅನುಕೂಲಗಳನ್ನು ಒದಗಿಸಿ ಕೊಟ್ಟಿದ್ದಾರೆ.”
“ ನಿಜ ನಿಜ. ಭಕ್ತರಿದ್ದರೆ ದೇವರು, ದೇವರಿದ್ದರೆ ಅರ್ಚಕ.” 
ಮುಖ್ಯ ಅರ್ಚಕ ಸೆರ್ಕೆಟ್ ನನ್ನು ಕರೆದು ಹೇಳಿದ:

“ ನಾನು ಮಂದಿರಕ್ಕೆ ಹೋಗ್ತೇನೆ. ಏನಾದರೂ ಬೇಕಾದರೆ ಒಳಗೆ ಹೇಳಿ, ತಂದುಕೊಡ್ತಾರೆ." ಆ ಮಾತು ಕಿವಿಗೆ ಬಿದ್ದ ಹೆಖ್ವೆಟ್ ಅಂದ; "ನನಗೆ ಹೇಪಾಟ್ ಬೇಕು.ಯಾರು ತಂದುಕೊಡ್ತೀರಿ?" ಮುಖ್ಯ ಅರ್ಚಕ ನಕ್ಕು, “ನಾನು ಕರಕೊಂಡ್ಬರ್ತೇನೆ." ”ಎಂದು ಹೇಳಿ, ಹೊರಟು ಹೋದ. ಗರ್ಭಗುಡಿಯತ್ತ ಮುಖ್ಯ ಅರ್ಚಕ ಬಂದುದನ್ನು ಹೆಜ್ಜೆ ಸಪ್ಪಳದಿಂದಲೇ ಗುರುತಿಸಿ, ಕಣ್ಣು ಮುಚ್ಚಿಕೊಂಡೇ ಹೇಪಾಟ್ ಕೇಳಿದ: “ಹೋದನೋ ?” "ನನ್ನ ಮನೇಲಿ ಬಿಟ್ಟುಬಂದೆ, ಎಷ್ಟು ತಡವಾದರೂ ನಿಮ್ಮನ್ನು

ನೋಡಿಯೇ ಹೋಗ್ತಾನಂತೆ."

"ಸೆತ್ ! ಉಣ್ಣಿ__ಉಣ್ಣಿ !" ಮೌನ. ('ಮಂದಿರಕ್ಕೆ ಬಂದೊಡನೆಯೇ ತಾನು ಕಾಣಲು ಸಿಗದಿದ್ದುದ ರಿಂದ ಹೆಖ್ವೆಟ್ ಗೆ ಸ್ವಲ್ಪಮಟ್ಟಿಗೆ ಮುಖಭಂಗವಾದಂತಾಯಿತು.') (ಒಳಮನಸ್ಸಿನ ಹೊರಮೈ: 'ಏನಿದೆಯೋ ಬೊಗಳಿ ತೊಲಗಲಿ !' ತೀರಾ ಒಳಗೆ: ಮನಸ್ತಾಪದ ಪರಿಹಾರಕ್ಕೆ ಏನು ಸಲಹೆ ತಂದಿರುವನೋ.') ಮತ್ತೂ ಸ್ವಲ್ಪ ಹೊತ್ತು ರಾ ಮಹಿಮಾಸ್ತೋತ್ರವನ್ನು ಪಠಿಸುತ್ತ ಹೇಪಾಟ್ ಕುಳಿತ. ಬಳಿಕ ಎದ್ದು ಮಂಡಿಯೂರಿ, 'ಮಹತ್ಸಾಧನೆಗಳಿಗೆ ಈ ದೀನ ಸೇವಕನನ್ನು ನಿನ್ನ ಸಾಧನವಾಗಿ ಬಳಸಿಕೋ' ಎಂದು ಮನಸ್ಸಿನಲ್ಲೆ ಪ್ರಾರ್ಥಿಸಿ,ಮುಖ್ಯ ಅರ್ಚಕನಿಗೆಂದ: "ಗರ್ಭಗುಡಿಯ ಬಾಗಿಲು ಹಾಕಿಕೊಳ್ಳಿ." ಹೇಗೆ ಹಬ್ಬಿತ್ತೊ ಸುದ್ದಿ ? 'ಏನೋ ಗಲಾಟೆಯಂತೆ. ರಾಜಧಾನಿಯಿಂದ ಬಂದ ಅಧಿಕಾರಿಗೂ ಮಹಾ ಅರ್ಚಕರಿಗೂ ವಾಗ್ವಾದವಂತೆ; ಊರಿನ ಜನ ಮಂದಿರದದಿಕ್ಕಿಗೆ ನಡೆಯತೊಡಗಿದರು. ನಗರಿಯ ಹತ್ತು ಮಂದಿ ಕಾವಲು