ಪುಟ:Mrutyunjaya.pdf/೩೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.




    ೩೬೦                                           ಮೃತ್ಯುಂಜಯ

“ಶಾಪಕ್ಕೆ ತುತ್ತಾಗಿ ಗತಪ್ರಾಣನಾದೇನು ಎಂಬ ಭಯ ನನಗಿಲ್ಲ, ಕಾಲ ಕಳೆದ ಹಾಗೆ ಎಲ್ಲರೂ ಮುದುಕರಾಗ್ತಾರೆ, ಗೋರಿಪ್ರವೇಶ ಯಾರಿಗೂ ತಪ್ಪಿದಲ್ಲ, ಸಾವಿಗೆ ಹೆದರಿ ಕರ್ತವ್ಯಚ್ಯುತನಾಗಲೇ ? ದೇವಸಮಾನರಾದ ಪೆರೋನ ಸೇವೆಯಲ್ಲಿ ಈಗಲೇ ದೇಹವಿಡುವುದಕ್ಕೂ ನಾನು ಸಿದ್ಧ!” "ದೇವಸೇವೆಗಿಂತ ಪೆರೋ ಸೇವೆಯೇ ಹೆಚ್ಚಿನದು ಎಂದು ನೀವು ಭಾವಿಸಿದ ಹಾಗಿದೆ" “ಐಗುಪ್ತದಲ್ಲಿ ಪ್ರಾಚೀನ ಕಟ್ಟೆಳೆಯ ಪ್ರಕಾರ ದೇವರು ಬೇರೆಯಲ್ಲ, ಪೆರೋ ಬೇರೆಯೆಲ್ಲ.ಹದೆ ಮಹಾ ಅರ್ಚಕರೇ ?” “ಕಟ್ಟಳೆಗೆ ಅನುಗುಣವಾಗಿ ವರ್ತನೆ ಇರಬೇಕು. ಅದಿಲ್ಲದೆ ಹೋದರೆ ಕಟ್ಟಳೆ ಅರ್ಥಶೂನ್ಯವಾಗ್ತದೆ.” "ಕಟ್ಟಳೆಗಳ ಪಾಲನೆಯಲ್ಲಿ ಪೆರೋ ಪೇಪಿ ಅಸಮಾನರು. ಆದ್ದರಿಂದಲೇ ಸೆಡ್ ಉತ್ಸವದ ದಿನ ನಿರ್ಣಯಕ್ಕೆ ಅವರು ಮಹಾ ಅರ್ಚಕರ ದಾರಿ ನೋಡ್ತಿದ್ದಾರೆ.” "ಮಹಾ ಅರ್ಚಕ ಅನಗತ್ಯ ಅಂತ ಇನ್ನೂ ಯಾರೂ ಭಾವಿಸಲ್ಲವಲ್ಲ. ಸಮಾಧಾನದ ಸಂಗತಿ !” “ಯಾಕೆ ಈ ವ್ಯಂಗ್ಯ ? ನಿಮಗೆ ತಿಳೀದೆ ? ಐಗುಪ್ತದ ಸಮಾಜ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಪಾತ್ರವುಂಟು. ಯಾವ ಪಾತ್ರವೂ ಅನಗತ್ಯವಲ್ಲ.” "ಸಾಕು ವ್ಯರ್ಥಾಲಾಪ. ಹೇಳಬೇಕಾದ್ದನ್ನು ತಿಳಿಸಿ ನೀವು ಹೊರಡಬಹುದು. ” “ನಾನೊಬ್ಬನೇ ಅಲ್ಲ, ಹೊರಡುವವರು ನಾವು.” "ಏನರ್ಥ ಆ ಮಾತಿಗೆ ?" "ಅರ್ಥ ನೀವು ಬಲ್ಲಿರಿ. ನಿಮ್ಮನ್ನು ಕರಕೊಂಡು ಬರಬೇಕೂಂತ ರಾಜಾಜಯಾಗಿದೆ." "ಹೆಡೆಮುರಿ ಕಟ್ಟಿ ?" ಹೇಪಾಟ್ ನ ಸಿಟ್ಟು ಅವನನ್ನೇ ದಹಿಸುತ್ತಿತ್ತು. ತಾನು ಶಕ್ತಿಗುಂದುತ್ತಿದ್ದೇನೆ ಎಂದು ಅವನಿಗೆ ತೋರಿತು. ಅದನ್ನು ಗಮನಿಸಿದ್ದ ಸೂಕ್ಷ್ಮಮತಿ