ಪುಟ:Mrutyunjaya.pdf/೩೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



  ೩೬೧                         ಮೃತ್ಯುಂಜಯ                                  
  

ಹೆಖ್ವೆಟ್ ಧ್ವನಿಯಲ್ಲಿ ವಿನಯ ತುಂಬಿ ನುಡಿದ :

“ఇంಥ ಮಾತನ್ನು ಈ ವೃದ್ಧ ಕೇಳಬಾರದು.ಧಾರ್ಮಿಕ ಜಿಜ್ಞಾಸೆ ಇಲ್ಲಿ ನಡೀತಿತ್ತು ಅನ್ನೋದು ಎಲ್ಲರಿಗೂ ಗೊತ್ತಿದೆ. ಮಹಾ ಅರ್ಚಕರ ವಿಷಯದಲ್ಲಿ ತೋರುವ ಭಯಭಕ್ತಿ, ಪ್ರೇಮ ಆದರ ಯಾವುದಕ್ಕೂ ಚ್ಯುತಿ ಉಂಟಾಗಿಲ್ಲ. ಈ ಸಂಜೆಯೇ ಹೊರಡೋಣವೇ? ಬೆಳಗಾಗುವುದಕ್ಕೆ ಮುಂಚೆಯೇ ರಾಜಧಾನಿ ಸೇರಬಹುದು.”

ಕರೆಯಲು ಅಮಾತ್ಯನೇ ಬಂದಿದ್ದರೆ ಚೆನ್ನಾಗಿರ್ತಿತ್ತು .ಬದలు ಅತ್ಯಂತ ಹಿರಿಯ ಸರುಸದಸ್ಯ ಬಂದ. ಇಷ್ಟಾದರೂ ಆಯಿತಲ್ಲ. ತಾನು ನಡೆಸುವ ಹೋರಾಟದ ಮುಂದಿನ ಘಟ್ಟ ತಲಪಲು ಮೆಂಫಿಸಿಗೆ ಮರಳಲೇಬೇಕು. ಹಗ್ಗ ವನ್ನು ಎಷ್ಟು ಬೇಕೋ ಅಷ್ಟೇ ಜಗ್ಗುವುದು ಜಾಣತನ....ಯೋಚಿಸುತ್ತ ಹೇಪಾಟ್ ನ ಮುಖದ ಸ್ನಾಯುಗಳು ತುಸು ಸಡಿಲಿದುವು.ಆತನೆಂದ:

“ನೀವು ಇವತ್ತೇ ಹೋಗಬಹುದು. ನಾನು ನಾಳೆ ಬರ್ತೇನೆ.”

ಹೆಖ್ವೆಟ್ ನಸುನಕ್ಕ.

“ಇಬ್ಬರೂ ನಾಳೆಯೇ ಹೋಗೋಣ. ನಿಮ್ಮ ನಾವೆ ಮುಂದೆ. ಅದರ ಹಿಂದೆ ನಾನು....” ಇಷ್ಟು ಹೇಳಿ ಆತ ಎದ್ಡುನಿಂತು, ಹೇಪಾಟ್ ನತ್ತ ಹೆಜ್ಜೆ ఇరిಸಿ, ಮಂಡಿ ಯೂರಿ ಮಹಾ ಅರ್ಚಕನ ಅಧಿಕಾರ ದಂಡವನ್ನು ಚುಂಬಿಸಿ ಏಳುತ್ತ, ಮೆలు ದನಿಯಲ್ಲಿ “ಕೋಪ ಇಳಿಯಿತಾ ಗುರುವೆ?” ಎಂದ. ಹೇಪಾಟ್ ನಿಟ್ಟುಸಿರು బిಟ್ಟ. ತೀವ್ರ ಗತಿಯ ಆ ಸಂಭಾಷಣೆ ಸೆರ್ಕೆಟ್ ಗೆ ಪೂರ್ತಿ ಅರ್ಥವಾಗಿರಲಿಲ್ಲ. ಆದರೂ ಆತ ಸಂತೃಪ್ತ. ಹೆಖ್ವೆಟ್ ನ ಹಿಂದೆಯೇ ತಾನೂ ಧಾವಿಸಿ ಮಹಾ ಅರ್ಚಕನ ಅಧಿಕಾರ ದಂಡಕ್ಕೆ ಮುತ್ತು ಕೊಟ್ಟ. ಅವನ ಹಿಂದೆಯೇ ಇತರರೂ ಸಾಲುಗಟ್ಟಿದರು. ಹೇಪಾಟ್ ಎದ್ದು ಅಧಿಕಾರದಂಡ ಸಹಿತವಾಗಿ ಬಲತೋಳನ್ನೆತ್ತಿ, "ಪೆರೋನ ಆಯುರಾರೋಗ್ಯ ವರ್ಧಿಸಲಿ,"ಎಂದ. ಹೆಖ್ವೆಟ್, “ವರ್ಧಿಸಲಿ,” ಎಂದಷ್ಟೇ ನುಡಿದು, ತನ್ನ ನಗೆಯನ್ನು ಹತ್ತಿಕ್ಕಿದ.