ಪುಟ:Mrutyunjaya.pdf/೩೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬೨ ಮೃತ್ಯುಂಜಯ

   ರಾ ಮಂದಿರದ ಮುಖ್ಯ ಅರ್ಚಕ ಸಮಾಧಾನದ ನಿಟ್ಟುಸಿರು ಬಿಟ್ಟ.
    *       *         *         *                                                                   ಹೆಖ್ವೆಟ್ ನನ್ನು ರಾಜಗೃಹದತ್ತ ತೆರಳಲು ಬಿಟ್ಟು ಹೇಪಾಟ್ ತನ್ನ ಏಕಾಂತದ ಕೊಠಡಿಗೆ ಮರಳಿದ. ಅಲ್ಲಿ ತನ್ನ ಆಪ್ತ ಸಹಾಯಕ ದೇವಸೇವಕನಿಗೆ ಅವನೆಂದ :

“ಟೆಹುಟಿಯನ್ನು ಬರಹೇಳು.” ಆ ಕೆಲಸ ಸುಲಭವಾಯಿತು. ಟೆಹುಟಿ ತಾನೇ ದೇವಮಂದಿರದತ್ತ ಬರತೊಡಗಿದ್ದ, ಬಕಿಲನೊಂದಿಗೆ. ಆತನಿಗೆ ಸ್ವಲ್ಪ ಕಸಿವಿಸಿ. ನೀರಾನೆ ಪ್ರಾಂತದ ಬಂಡಾಯ ರಾಜಕೀಯ ಚೌಕಮಣೆ ಆಟದ ರಂಗಮಧ್ಯಕ್ಕೇ ಅವನನ್ನು ತಳ್ಳಿತ್ತು. ಆತ ಇಷ್ಟನ್ನು ತರ್ಕಿಸಿದ್ದ: ಒಂದೋ ಅಮಾತ್ಯನ ಅವಕೃಪೆಗೆ ತಾನು ಗುರಿಯಾಗಿ ಈಗಿನ ಹುದ್ದೆಯನ್ನು ಕಳೆದುಕೊಳ್ಳಬಹುದು; ಸಣ್ಣ ಹುದ್ದೆಗೆ ನಿಯೋಜಿತನಾಗ ಬಹುದು. ಇಲ್ಲವೆ, ಅರಮನೆ ಗುರುಮನೆಗಳ ಸೆಣಸಾಟದಲ್ಲಿ ಆಮಾತ್ಯ ಪದ ಚ್ಯುತನಾಗಿ, ತಾನು ಆ ಸ್ಥಾನವನ್ನು ಏರಬಹುದು....ನೀರಾನೆ ಪ್ರಾಂತದಿಂದ ಹಿಂತಿರುಗಿದ ಟೆಹುಟಿ ತಾನು ಮಹಾ ಅರ್ಚಕನ ಪಕ್ಷಪಾತಿ ಎಂಬುದನ್ನು ಬಹಿ ರಂಗಗೊಳಿಸಿದ. ಅಮಾತ್ಯ ಅವನನ್ನು ಆಗಲೆ ದಂಡಿಸುವ ಗೋಜಿಗೆ ಹೋಗದೆ ಜನಗಣತಿಯ ಉಸ್ತುವಾರಿಗಾಗಿ ಉತ್ತರಕ್ಕೆ ಕಳುಹಿದ.ಟೆಹುಟಿಗೆ ಘರ್ಷಣೆ ಬೇಗನೆ ನಡೆಯಲೆಂಬ ಆಸೆ. ಆದರೆ ಹೇಪಾಟ್ ಹೇಳಿದ್ದ: “ಪೂರ್ವಸಿದ್ಧತೆ ಇಲ್ಲದೆ ನಾವು ದುಡುಕಬಾರದು.” ಈಶಾನ್ಯ ಗಡಿಯಲ್ಲಿದ್ದ ಸೈನ್ಯಠಾಣ್ಯಕ್ಕೆ ಮಹಾ ಅರ್ಚಕ ಭೇಟಿ ನೀಡಿದ್ದು, ಅಲ್ಲಿ ಅಮನ್ ದೇವತೆಯ ಉತ್ಸವ ನಡೆ ಸಿದ್ದು ಆ ಪೂರ್ವ ಸಿದ್ಧತೆಯ ಒಂದಂಗ ಎಂದು ಟೆಹುಟಿ ಬಲ್ಲ.ಬಂಟನೊಡನೆ ಆತ ನುಡಿದ:"ಮಹಾ ಆರ್ಚಕ ನಿಧಾನಿ.ಆದರೆ ಭಾರೀ ದೊಡ್ಡ ಮನುಷ್ಯ. ನಿನ್ನನ್ನು ನೀರಾನೆ ಪ್ರಾಂತಕ್ಕೆ ಪ್ರಾಂತಪಾಲನಾಗಿ ನೇಮಿಸಿದಾಗಲೇ ನನಗೆ ಮನಶ್ಶಾಂತಿ.” (ತನ್ನ ಒಡೆಯ ಟೆಹುಟಿ ನೇಮಕದ ಆ ಮಾತನ್ನು ಅದಕ್ಕೂ ಹಿಂದೆ ಹಲವು ಸಲ ಹೇಳಿದ್ದ. ಆರಂಭದಲ್ಲಿ ಬಕಿಲ ಅದನ್ನು ಹಾಸ್ಯೋಕ್ತಿ ಎಂದು