ಪುಟ:Mrutyunjaya.pdf/೩೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



                         ಮೃತ್ಯುಂಜಯ                             ೩೬೩

ಭಾವಿಸಿದ್ದ. ಕ್ರಮೇಣ ಪದೇ ಪದೇ ಕಿವಿಗೆ ಬಿದ್ದಾಗ, ಯಾಕಾಗಬಾರದು ?.... ಎನಿಸಿತು. ಮುಂದೆ, ತಾನು ನಿಜವಾಗಿಯೂ ఆ ಹುದ್ದೆಗೆ ಅರ್ಹ_ಎಂಬ ಭಾವನೆ ಅವನಲ್ಲಿ ಬಲವಾಯಿತು.
ಅಷ್ಟೇ ಅಲ್ಲ, “ನೀನು ಐಗುಪ್ತದ ಸೇನಾನಿಯಾಗೋದಕ್ಕೂ ಯೋಗ್ಯ,” ಎಂದ ಟೆಹುಟಿ, ಒಮ್ಮೆ.ಧುಮುಧುಮಿಸಿದ ಭಾವನೆಗಳನ್ನು ಹತ್ತಿಕ್ಕಲಾಗದೆ ಬಕಿಲನ ಒಂದು ಕಣ್ಣು ಅತ್ತಿತು.
ಅಂದಿನಿಂದ ಬಕಿಲ ಟೆಹುತಟಿಯ ಬೆನ್ನಿಗೆ ಅಂಟಿದ ನೆರಳಾದ.)
ಟೆಹುಟಿ ಒಳಬಂದೊಡನೆ ಹೇಪಾಟ್ ಕೇಳಿದ :
“ಎಲ್ಲಿ ಬಕಿಲ ?"
“ಹೊರಗಿದ್ದಾನೆ.”
"ಅವನನ್ನೂ ಕರಿ."
....ಅವರಿಬ್ಬರಿಗೂ ಮಹಾ ಆರ್ಚಕ ತಿಳಿಸಿದ : ಈಶಾನ್ಯ ಗಡಿಯ ಸೈನ್ಯಠಾಣ್ಯಕ್ಕೆ ಟೆಹುಟಿ ಹೋಗಬೇಕು. ಹೌದು, ಬಕಿಲನನ್ನು ಕರೆದು ಕೊಂಡು. ರಾಜಧಾನಿಯಿಂದ ಸಂದೇಶ ಬರುವ ತನಕ ಅಲ್ಲಿರಬೇಕು.
ಟೆಹುಟಿಗೆ ತಿಳಿಯುವ ಬಯಕೆ. ಯಾರ ಸಂದೇಶ ?
ಮಹಾ ಅರ್ಚಕ :
“ನನ್ನ ಸಂದೇಶ ಬಂದರೆ ಸೇನಾನಿ ಅಮೆನೊಮೆಪೆಟ್ ಎಲ್ಲ ದಂಡಿನೊಡನೆ ಹೊರಟು ಬರಲಿ. ನೀವೂ ಬನ್ನಿ. ಅಮಾತ್ಯನ ಸಂದೇಶ ಬಂದರೆ ಆತ ಎಷ್ಟು ಜನರನ್ನು ಕರೇತಾನೋ ಅವರು ಬರಲಿ.ಜತೆಯಲ್ಲಿ ನೀವೂ ಹೊರಟು ಬನ್ನಿ.”
ಟೆಹುಟಿ ಸ್ವರ ತಗ್ಗಿಸಿ ಕೇಳಿದ:
“ರಾಜಿ ಮಾತುಕತೆ ನಡೆಯೋ ಸಾಧ್ಯತೆ ಇದೆಯೆ ?”
“ಮಾತುಕತೆ ಯಶಸ್ವಿಯಾಗಲೂಬಹುದು, ವಿಫಲವಾಗಲೂ ಬಹುದು. ಒಡಂಬಡಿಕೆ ಏರ್ಪಟ್ಟರೂ-ನೆನಪಿಟ್ಕೊ-ಅದು ತಾತ್ಕಾಲಿಕ."
"ದಂಡು ?"
“ಟೆಹುಟಿ ನೀನಿನ್ನೂ ಎಳಸು. ಸದ್ಯಕ್ಕೆ ರಾಜಿ ಎಂದಾದರೆ ನೀರಾನೆ ಪ್ರಾಂತದ ಮೇಲೆ ಏರಿಹೋಗೋದಕ್ಕೆ ಕಡಿಮೆ ಜನರು ಸಾಕು. ಆ ಕೆಲಸ