ಪುಟ:Mrutyunjaya.pdf/೩೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ " ನಿನ್ನ ಕೆಳಗೆ ಬೇಹಿನವರು ಎಷ್ಟು ಜನ ಇದ್ದಾರೆ ಮಗೂ?" " ಇಬ್ಬರು." " ಅವರು ಏನು ಹೇಳ್ತಾರೆ?" " ಅವರಿಬ್ಬರೂ ಇಲ್ಲೇ ಇದ್ರು." " ಸರಿಹೋಯ್ತು ! " ಎಂದು ಹೆಖ್ವೆಟ್ ಕನಿಕರದ ನೋಟದಿಂದ ಸೆರ್ಕೆಟ್ ನನ್ನು ನೋಡಿದ.

  ಅಳು ಬರುವಂತಾಯಿತು, ಸೆರ್ಕೆಟ್ ಗೆ ಉಮ್ಮಳವನ್ನು ಪ್ರಯತ್ನ ಪೂರ್ವಕವಾಗಿ ಆತ ಹತ್ತಿಕ್ಕಿದ.
  ತನ್ನ ಲಿಪಿಕಾರನನ್ನು ಕರೆದು ಹೆಖ್ವೆಟ್ ಹೇಳಿದ:

" ರಾ ಮಂದಿರಕ್ಕೆ ಹೋಗಿ, ಮಹಾ ಅರ್ಚಕರು ನಾಳೆ ಬೆಳಿಗ್ಗೆ ಎಷು ಹೊತ್ತಿಗೆ ರಾಜಧಾನಿಗೆ ಹೊರಡ್ತಾರೆ ಅಂತ ಕೇಳ್ಕೊಂಡ್ಬಾ." " ಹೂಂ. ಸ್ವಾಮಿ." " ಅದೂ ಇದೂ ಮಾತಾಡ್ತಾ ಅಲ್ಲಿ ನಿಂತ್ಕೋಬೇಡ. ತಕ್ಷಣ ಬಂದ್ಬಿಡು." " ಹೂ೦."

  ಲಿಪಿಕಾರ ಹೊರಟ ಬಳಿಕ, ತನ್ನ ದೋಣಿಕಾರರನ್ನು ಕರೆಸಿ ಹೆಖ್ವೆಟ್ ಆದೇಶವಿತ್ತ :

" ರಾತ್ರೆ ಬೇಗನೆ ಮಲಕೊಳ್ಳಿ, ನಸುಕಿನಲ್ಲೇ ಎದ್ಬಿಡಿ." " ಹೂಂ. ಒಡೆಯ."

  ರಾಜಕಾರ್ಯ ತೃಪ್ತಿಕರವಾಗಿಯೇ ಮುಕ್ತಾಯಗೊಂಡಿತ್ತು. ಮಹಾ ಅರ್ಚಕ ಮನಸ್ಸು ಬದಲಿಸಬಹುದೆಂಬ ಶಂಕೆ ಹೆಖ್ವೆಟ್ ಗೆ ಇರಲಿಲ್ಲ. ಅಷ್ಟೊಂದು ಜನರ ಮುಂದೆ ನಡೆದ ಮಾತುಕತೆ....ಈಗ ಅಪಸ್ತರ ತೆಗೆದರೆ ರಾ ಮಂದಿರದ ಅರ್ಚಕ ಏನೆಂದಾನು? ದೇವಸೇವಕ ಗಣ ಏನೆಂದೀತು ?
  ಪಡಸಾಲೆಗೆ ಬಂದು ಪೀಠದ ಮೇಲೆ ಕುಳಿತು, ತೆರೆದ ಹೆಬ್ಬಾಗಿಲಿನಿಂದ ಕಾಣಿಸುತ್ತಿದ್ದ ನಿರ್ಜನ ಬೀದಿಯನ್ನು ಹೆಖ್ವೆಟ್ ದಿಟ್ಟಿಸಿದ. ರಾಜಧಾನಿಯ ಕಲರವ ಒಗ್ಗಿ ಹೋಗಿದ್ದ ಅವನಿಗೆ ಆನ್ ನಗರಿ ಕುಗ್ರಾಮದಂತೆ ಕಾಣಿಸುತ್ತಿತ್ತು.

ಅವನ ಲಿಪಿಕಾರ ಮರಳಿದ.