ಪುಟ:Mrutyunjaya.pdf/೩೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ಮೇಲೆದ್ದು ಅಮನ್ ದೇವತೆಯನ್ನು ಇರಿಸಿದ್ದ ಗೋಡೆಗೂಡಿನೆದುರು ಬಹಳ ಹೊತ್ತು ಮೂಕನಾಗಿ ಅವನು ನಿಂತ.

  • * * *

ಮೆಂಫಿಸಿನ ದೋಣಿಕಟ್ಟೆಯಲ್ಲಿ ಮಹಾ ಅರ್ಚಕನನ್ನು ಮತ್ತೆ ಮಾತನಾಡಿಸುವುದು ಅಗತ್ಯವೆಂದು ಹೆಖ್ವೆಟ್ಗೆ ತೋರಲಿಲ್ಲ. ರಾಜಧಾನಿ ಸಮೀಪಿಸುತ್ತಿದ್ದಂತೆ ಆತ ದೋಣಿಕಾರನಿಗೆಂದ : “ಅವರು ಮೊದಲು ಇಳಿದು ಹೋಗಲಿ, ನಮ್ಮದು ಸ್ವಲ್ಪ ನಿಧಾನವಾಗಲಿ." ದೋಣಿಕಟ್ಟೆಯಲ್ಲಿ ಸಂಭಾಷಣೆ ಮಹಾ ಅರ್ಚಕನಿಗೂ ಬೇಕಾಗಿರಲಿಲ್ಲ. ಅವನೆಂದ : " ಹೆಖ್ವೆಟ್ನ ನಾವೆ ಹತ್ತಿರ ಬಂತಾ?” ಹಿಂದಕ್ಕೆ ಹೊರಳಿ ನೋಡಿ ದೋಣಿಕಾರನೆಂದ : “ ಅವರು ಹುಟ್ಟು ಹಾಕೋದು ನಿಲ್ಲಿಸಿದ್ದಾರೆ. ಬರೇ ಹಾಯಿ ವೇಗ.” "ಒಳ್ಳೇದಾಯ್ತು. ನಾವು ಸ್ವಲ್ಪ ಮುಂಚೆ ಕಟ್ಟೆ ಸೇರೋಣ.” "ಆಗಲಿ." ದೋಣಿಕಾರನ ಕೈಸನ್ನೆ ಕಂಡೊಡನೆಯೇ ಅಂಬಿಗರು ಹುಟ್ಟು ಹಾಕುವುದನ್ನು ತೀವ್ರಗೊಳಿಸಿದರು. ಹಿಂದಿನ ಅಪರಾಹ್ನವೇ ಅಮಾತ್ಯನ ನಿರ್ದೇಶದಂತೆ ಅರಮನೆಯಿಂದ ಎರಡು ಪಲ್ಲಕಿಗಳು ದೋಣಿಕಟ್ಟೆಗೆ ಬಂದಿದ್ದುವು. ಹೆಖ್ವೆಟ್ನ ರಾಯಭಾರಕ್ಕೆ ಸಂಬಂಧಿಸಿ ತುಸು ಅನಿಶ್ಚಯತೆ ಇದ್ದೇ ಇತ್ತು. ಆದರೂ ಪಲ್ಲಕಿಗಳು ಕಟ್ಟೆಯಲ್ಲಿಯೇ ಇರುವುದು ಮೇಲು ಎಂದು ಅಮಾತ್ಯನಿಗೆ ಕಂಡಿತ್ತು. ಬೋಯಿಗಳಿಗೆ ಇರುಳಲ್ಲಿ ಗೂಡಾರದ ಆಶ್ರಯ. ಹಗಲು ಅಲ್ಲಿ ಇಲ್ಲಿ ನೆರಳಲ್ಲಿ ನಿದ್ದೆ. ಸರದಿಯಲ್ಲಿ ಅರಮನೆಯ ಆವರಣಕ್ಕೆ ಹೋಗಿ, ಊಟ. ಅಧಿಕಾರ ದಂಡವನ್ನೂರಿ ಹಾಯಿ ಕಂಬದ ಮುಂದುಗಡೆ ಒಂದು ಪೀಠದ ಮೇಲೆ ನೆಟ್ಟಿಗೆ ನಿಂತಿದ್ದ ಮಹಾ ಅರ್ಚಕನ ದೋಣಿ ಕಣ್ಣಿಗೆ ಬಿದ್ದೊಡನೆ, "ಬಂತು!” ಎಂದು ಒಬ್ಬ ಕೂಗಿ ನುಡಿದ. ಕಟ್ಟೆಯ ಮೇಲೆ ಅಲ್ಲಲ್ಲಿ ಇದ್ದ