ಪುಟ:Mrutyunjaya.pdf/೩೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೭೪ ಮೃತ್ಯುಂಜಯ "ನನ್ನ నిದ್ರೆಯ ಮೇಲೆ ನಿನಗೆ ಕಣ್ಣು!"

ఆಮೆರಬ್ ಎದ್ದ. ಹೆಖ್ವೆಟನ ತೋಳನ್ನು ಆತ್ಮೀಯತೆಯಿಂದ ಮುಟ್ಟಿದ. ಸ್ವರ ತಗೆಸಿ ಕೇಳಿದ:

" ಹೇಪಾಟ್ ಏನಾದರೂ ಶರತ ಹಾಕಬಹುದು ಅಂತೀಯಾ?”

 ಹೆಖ್ವೆಟ್ ಎದ್ದು, ಹುಬ್ಬು ಹಾರಿಸಿ, ತಲೆಯನ್ನು ಹಿಂದಕ್ಕೂ ಮುಂದಕ್ಕೂ ಆಡಿಸುತ್ತ ಆಮೆರಬಾನ ಜತೆ ಬಾಗಿಲಿನತ್ತ ನಡೆಯುತ್ತ ಅಂದ :

" ದೇಶದ ಅಮಾತ್ಯ ನೀನು. ರಾಜಕೇಯ ಊಹೆ-ತರ್ಕ ನೀನೇ ಮಾಡ್ಬೇಕು.” "ನನ್ನ ಮೇಲೆ ಇನ್ನೂ ಸಿಟ್ಟೆ?" "ಸಿಟ್ಟೂ ಇಲ್ಲ, ಏನೂ ಇಲ್ಲ, ಇಲ್ಲದ್ದು ಹರಟ್ಬೇಡ. ಹೇಪಾಟ್ ಸುಲಭವಾಗಿ ಮಣಿಯೋದಿಲ್ಲ-ನೆನಸಿಟ್ಕೊ." " ನಾಳೆ ಪೆರೋ ಭೇಟಿಗೆ ಹೇಷಾಟ್‍ನನ್ನು ಕರಕೊಂಡ್ಬಂದ್ಮೇಲೆ ನೀನು ಅಲ್ಲೇ ಇರ್ಬೆಕು...” "ಸರಿಯಪ್ಪ, ಈ ವಿನಮ್ರ ಸೇವಕ ಆಗೋದಿಲ್ಲ ಅನ್ತಾನಾ?”

ಅಮಾತ್ಯ ದೀರ್ಘವಾಗಿ ಉಸಿರೆಳೆದುಕೊಂಡ.
 ಮಹಾ ಅರ್ಚಕ ರಾಜಧಾನಿಗೆ ಮರಳಿದ ಸುದ್ದಿ ತಿಳಿದಾಗ ಪೆರೋ ಪೇಪಿ ಅಂತಃಪುರದಲ್ಲಿ ತನ್ನ ಅಚ್ಚುಮೆಚ್ಚಿನ ದಾಸಿಯೋಂದಿಗೆ ಚೌಕಮಣೆ ಆಟ ಆಡುತ್ತ ಕುಳಿತಿದ್ದ. ಆತ ಆಟ ನಿಲ್ಲಿಸಿ ಮೈ ಕೈ ಮುರಿದು, ಮುಖವರಳಿಸಿ, ದಾಸಿಯನ್ನು ಬರಸೆಳೆದು ತಬ್ಬಿಕೊಂಡ.
ಸ್ವಲ್ಪ ಹೊತ್ತಿನಲ್ಲಿ ಅಮಾತ್ಯನ ದೂತ ಬಂದ : “ಹೆಖ್ವೆಟರನ್ನು ಭೇಟಿ ಯಾಗಿ ವಿಷಯ ತಿಳಿದು ರಾತ್ರೆ ಸನ್ನಿಧಿಗೆ ಬರ್ತೆನೆ-ಅಂದ್ರು,” ಎಂದ.

ಮತ್ತೂ ಸ್ವಲ್ಪ ಹೊತ್ತಾದಾಗ ಒಬ್ಬಳು ಪರಿಚಾರಿಕೆ ಬಂದು ನುಡಿದಳು; "ಮಹಾರಾಣಿಯವರು ಇಲ್ಲೇ ಹೊರಗೆ ಹೋಗಿ ಬರ್ತಾರಂತೆ.” ಪೆರೋ ತನ್ನ ಪ್ರೀತಿಯ ದಾಸಿಯ ಕಡೆ ನೋಡಿದ. ನೋಟದಿಂದಲೇ ಇಂಗಿತವನ್ನು ಅರಿಯುವ ಆ ಜಾಣೆ ಪರಿಚಾರಿಕೆಗೆ ಆದೇಶವಿತ್ತಳು.