ಪುಟ:Mrutyunjaya.pdf/೩೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ ೩೭೫ " ಬಾಗಿಲೆಳೆದುಕೋ. ದೂತರು ಯಾರಾದರೂ ಬಂದರೆ, ಮಹಾಪ್ರಭು ಹೊರಗೆ ಕಾಣಿಸಿಕೊಳ್ಳುವ ತನಕ ಕಾದಿರಲಿ."

ಪೆರೋನತ್ತ ತಿರುಗಿ ಆಕೆ ಕೇಳಿದಳು 

" ಆಟ ? . " ನನ್ನನ್ನು ನೀನು ಸೋಲಿಸಲಾರೆ." " ಯಾವತ್ತಾದರೂ ನಾನು ಗೆದ್ದಿದೇನಾ ?”

 ಅರಸ ನಕ್ಕು ಚೌಕಮಣೆಯ ಕಾಯಿಗಳನ್ನು ಅಂಗೈಯಿಂದ ಬದಿಗೆ ಸರಿಸಿ, ಎದ್ದು, ಪಲ್ಲಂಗದತ್ತ ನಡೆದ. ದಾಸಿ ಮದಿರೆ ತರಲು ಧಾವಿಸಿದಳು.
 ಅಂತಃಪುರಕ್ಕೆ ಬಂದ ಪೆರೋ ತನ್ನ ಪ್ರೀತಿಪಾತ್ರ ದಾಸಿಯ ಬಳಿಗೆ ಹೋದುದು ತಿಳಿದೊಡನೆ, ಮಹಾರಾಣಿ ನೆಫರಟೀಮ್ ಅರಮನೆಯ ಮಂದಿರದ ಅರ್ಚಕ ಇನೇನಿಯನ್ನು ಕರೆಸಿದಳು. ಇಂಥ ಕರೆ ಇನೇನಿಗೆ ಹೊಸದಲ್ಲ. ಏನಾದರೂ ಸಮಾಲೋಚನೆಗಾಗಿ, ತಿಂಗಳಿಗೆ ಒಮ್ಮೆಯಾದರೂ ಅರಸಿ ಅವನನ್ನು ಬರಮಾಡಿಕೊಳ್ಳುತ್ತಿದ್ದಳು. ಒಮ್ಮೊಮ್ಮೆ ಆತ ತಾನಾಗಿಯೇ ರಾಣಿಯ ಭೇಟಿಗೆ ಹೋಗುವುದೂ ಇತ್ತು.
 ಆಕೆ ಅಂದಳು :

" ಅಯ್ಯನವರು ಚೆನ್ನಾಗಿದ್ದೀರಾ? ನಿಮ್ಮನ್ನು ನೋಡಿ ಬಹಳ ದಿವಸ ఆಯ್ತು."

 ಇನೇನಿ ನೆಲಕ್ಕೆ ಹಾಸಿದ್ದ ರತ್ನಗಂಬಳಿಯ ಮೇಲೆ ಕುಳಿತುಕೊಂಡು, ನಗುನಗುತ್ತ ಉತ್ತರವಿತ್ತ :

" ಮಹತ್ವದ ಘಟನೆಗಳು ಅರಮನೆಯಲ್ಲಿ ನಡೀತಿರುವಾಗ ಭೇಟಿಗೆ ಬಂದು ಸನ್ನಿಧಿಗೆ ತೊಂದರೆ ಕೊಡಬಾರದು ಅಂದ್ಕೊಂಡೆ." " ನಿಮ್ಮ ಹುಚ್ಚಪ್ಪ ಹೇಗಿದ್ದಾನೆ?” " ಮುಂಚಿನಷ್ಟು ಉಗ್ರವಾಗಿಲ್ಲ, ಮಹಾರಾಣಿ.” " ಆ ನೀರಾನೆ ಪ್ರಾಂತದ ನಾಯಕನ ಜತೆ ಯಾರಾದರೂ ಇದ್ದಾರಾ?” " ಯಾರೂ ಇಲ್ಲ, ಅಂದರೆ ಅಂಗರಕ್ಷಕರಿದ್ದಾರೆ, ಅನ್ನಿ.” " ಹೊತ್ತು ಹೋಗೋದು ಕಷ್ಟವಾಗ್ರಿರಬೇಕು.” " ಬಂಧನದಲ್ಲಿರೋ ವನ್ಯಮೃಗದ ಹಾಗೆ ಅತ್ತ ಇತ್ತ ನಡೀತಾ ಇರ್ತಾನೆ.”