ಪುಟ:Mrutyunjaya.pdf/೩೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ೩೭೬ ಮೃತ್ಯುಂಜಯ

       (ಸೊಗಸಾಗಿ ಬಣ್ಣಿಸಿದೆನೆಂದು ಇನೇನಿಗೆ ಹಿಗ್ಗು.)
   ಮಹಾರಾಣಿ ಕುಳಿತಿದ್ದ ಆಸನದ ಬಲಮಗ್ಗುಲಲ್ಲಿ ಮುಗ್ಗಾಲುಪೀಠದ ಮೇಲೆ ಬಂಗಾರದಲ್ಲಿ ಎರಕ ಹುಯ್ದಿದ್ದ ಸಿಂಹವಿತ್ತು. ಆಕೆ ಅದರ ಮೈ ದಡವಿದಳು.
    " ಸೆಡ್ ಉತ್ಸವಕ್ಕೇಂತ ಬಂದವನಿಗೆ ಈ ಗತಿಯಾಯ್ತು. ನಿಮ್ಮದೇನು ಅಂಬೋಣ?” ಇವತ್ತೋ ನಾಳೆಯೋ   

ಮಹಾ ಅರ್ಚಕರು ಬಂದ್ದಿಡ್ತಾರೆ, ಅಲ್ಲವಾ?"

    "ಅವರು ಬೇಗನೆ ಬರಲಿ ಅಂತ ದೇವರಿಗೆ ನಿತ್ಯಪ್ರಾರ್ಥನೆ ಸಲ್ಲಿಸ್ತಾ ಇದ್ದೇನೆ.”
  ಆತ ಹಾಗೆ ಹೇಳುತ್ತಿದ್ದಂತೆಯೇ ಒಬ್ಬ ಪರಿಚಾರಿಕೆ ಅಲ್ಲಿಗೆ ಬಂದಳು.
  ಮಹಾರಾಣಿಗೆ ನಮಿಸಿ, “ ಪೆರೋನ ಆಯುರಾರೋಗ್ಯ ವರ್ಧಿಸಲಿ.

ಮಹಾ ಅರ್ಚಕರು ರಾಜಧಾನಿಗೆ ಇದೇ ತಾನೇ ವಾಪಸಾದರೊಂತ ಹಿರಿಯ ಲಿಪಿ ಕಾರಯ್ಯ ಹೇಳಿ ಕಳಿಸಿದ್ದಾರೆ," ಎಂದಳು.

  ಇನೇನಿಗೆ ಆಶ್ಚರ್ಯ. ಅವರು ಬೇಗನೆ ಬರಲಿ ಅಂತ ದೇವರಿಗೆ ನಿತ್ಯ ದೇವರಿಗೆ ಪ್ರಾರ್ಥನೆ ಸಲ್ಲಿಸ್ತಾ ಇದ್ದೇನೆ' ಎಂದು ತಾನು ಸುಳ್ಳು ಹೇಳಿದಾಗಲೇ ಮಹಾ ಅರ್ಚಕರ ಆಗಮನದ ಸುದ್ದಿ ಬರಬೇಕೆ?
  ಮಹಾರಾಣಿಗೆ ಹರ್ಷ.
 " ನಿಮ್ಮ ಪ್ರಾರ್ಥನೆಯನ್ನು ದೇವರು ಈಡೇರಿಸಿಯೇ ಬಿಟ್ಟಿದಾನೆ ಅಯ್ಯ! " ಎಂದಳು, ಆಕೆ.
ಇನೇನಿ ನಕ್ಕು ಅಂದ:
 " ಇನ್ನು, ಸೆಡ್ ಉತ್ಸವ ಬೇಗನೆ ನೆರವೇರುವಂತೆ ಮಾಡು-ಅಂತ ದೇವರನ್ನು ಕೇಳಿಕೋತೇನೆ!"
 "ಅದಾದ ಮೇಲೆ ಇದಾಗದೆ ಇರತದಾ? ಆದರೂ ಅಯ್ಯ, ಮಹಾ ಅರ್ಚಕರು ಬಲು ಕೋಪಿಷ್ಟ ಅಲ್ಲವಾ?”
 "ಹ ಮಹಾರಾಣಿ. ಅದು ನಿಜ."
 "ಧರ್ಮರಕ್ಷೆ ಇಲ್ಲದೆ ಐಗುಪ್ತ ಉಳಿದೀತಾ. ಅಯ್ಯ? ಧರ್ಮಗುರುವಿನ ಕೋಪ ಶಮನಕ್ಕೆ ಏನು ಬಲಿ ಬೇಕಾಗ್ತದೊ?”