ಪುಟ:Mrutyunjaya.pdf/೩೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೩೭೭

       “ಮಹಾರಾಣಿ ನಿಮಗೆ ಗೊತ್ತೇ ಇದೆ. ನಾನು ಮಹಾ ಅರ್ಚಕರಿಗೆ ಹತ್ತಿರದವನಾದರೂ ಅವರ ಮನಸ್ಸಿನಲ್ಲಿ ಏನಿದೆ ಅಂತ ತಿಳಿಯೋದು ನನಗೆ ಪೂರ್ತಿ ಶಕ್ಯವಾಗಿಲ್ಲ."
    “ಆಶ್ಚರ್ಯ.”
         “ಊಹಿಸಿಕೊಂಡು ಇಷ್ಟು ಹೇಳಬಲ್ಲೆ : ದೇಶದ ಆಡಳಿತದಲ್ಲಿ ಬಿಗಿ ಇಲ್ಲ ಅಂತ ಮಹಾ  ಅರ್ಚಕರಿಗೆ ಬೇಸರ.”
     “ಅದಕ್ಕೆ ಯಾರು ಕಾರಣ-ಮಹಾಪ್ರಭುಗಳೆ ? ಅಮಾತ್ಯರೆ ? ಫಲ ಸಾಲದು ಅಂತ ಅಂಜೂರ ಮರವನ್ನೇ ಕಡಿಯೋದೆ ? ನಮಗೆಲ್ಲ ಇನ್ನು 'ಶಾಶ್ವತ ಮನೆಯ ಯೋಚನೆ. ಹಿರಿಯರಾದ ಮೇಲೆ ಕಿರಿಯರು ಪರಂಪರೇನ ಮುಂದುವರಿಸೋದಿಲ್ಲವಾ ? ಏನೆ ಇರಲಿ,ಮಹಾ ಅರ್ಚಕರು ನನ್ನ ಮೇಲೆ ಮುನಿಸು ತೋರೋದು ಸರ್ವಥಾ ಸರಿಯಲ್ಲ. ಅಯ್ಯ,ನೀವು ಈ ವಿಷಯ  ಮಹಾ ಅರ್ಚಕರಿಗೆ ತಿಳಿಸ್ಬೇಕು.”
    “ಆಗಲಿ, ಮಹಾರಾಣಿ.”
    “ಇವತ್ತೇ ಅವರನ್ನು ಭೇಟಿ ಮಾಡ್ತೀರಾ ?”
    “ಹೌದು. ರಾತ್ರೆ ಮಹಾಮಂದಿರಕ್ಕೆ ಹೋಗ್ತೇನೆ.”
    ಅರಸಿಯ ಮನಸ್ಸು ಹಿಗ್ಗಿತು. ಆಕೆ ಒಳಹೋಗಿ ಸೆಣಬಿನ ಅತ್ಯುತ್ತಮ ವಸ್ತ್ರವನ್ನೂ ಒಂದು ಸ್ವರ್ಣಹಾರವನ್ನೂ ತಂದು ಇನೇನಿಗೆ ಉಡುಗೊರೆ ಇತ್ತಳು.
    ಎಲ್ಲ ಹಲ್ಲುಗಳನ್ನೂ ತೋರ್ಪಡಿಸುತ್ತ ಅವನೆಂದ :
    “ಮಹಾರಾಣಿ, ಬಡ ದೇವಸೇವಕನಿಗೆ ಯಾಕೆ ಈ ಬಂಗಾರದ ಸರ ?”
     ನೆಫರ್ ಟೀಮ್ ನಸುನಕ್ಕಳು.
     "ಇರಲಿ, ಅಯ್ಯ ಯಾವುದಕ್ಕಾದರೂ ಆಗ್ತದೆ.”
     "ಮಹಾರಣಿ ಕೈ ಎತ್ತಿಕೊಟ್ಟಾಗ ಹೇಗೆ ತಾನೆ ಬೇಡ ಅನ್ನಲಿ ?”
      ಇನೇನಿ ಎದ್ದು, ಸ್ವರ್ಣಹಾರ ಹೊರಗೆ ಕಾಣಿಸದಂತೆ ವಸ್ತ್ರದಲ್ಲಿಟ್ಟು, ಮಡಚಿ, ತನ್ನ ನಿವಾಸಕ್ಕೆ ತೆರಳಿದ.
     ನೆಫರ್ ಟೀಮ್ ಗಲ್ಲಕ್ಕೆ ಅಂಗೈ ಆನಿಸಿ ಕುಳಿತು, ಕಿಟಕಿಯ ಆಚೆ ಬಿಸಿಲು