ಪುಟ:Mrutyunjaya.pdf/೩೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೭೮ ಮೃತ್ಯುಂಜಯ

          ಬಾಡುತ್ತಲಿದ್ದುದನ್ನು ಕಂಡಳು. ರಾಜಕುಮಾರನನ್ನು ನೋಡುವ ಬಯಕೆ ಯಾಯಿತು.
             ಕೈ ತಟ್ಟಿ ಪರಿಚಾರಿಕೆಯನ್ನು ಕರೆದು, “ರಾಜಕುಮರನನ್ನು ಕರಕೊಂಡು
ಬರಬೇಕೂಂತನ ಬೆಂಟ್  ರಷ್ಟ್ ಗೆ ಹೇಳು,"ಎಂದಳು.  ಮಹಾರಾಣಿಯ ದೃಷ್ಟಿ ಎಡಗಡೆ ಮರದ ಅಟ್ಟಣಿಗೆಯ ಮೇಲೆ ಹಾಸಿದ್ದ ಚಿರತೆಯ ಚರ್ಮದತ್ತ ಹರಿಯಿತು,
      ತಕ್ಷಣವೇ ಅವಳಿಗೆ ಅನಿಸಿತು : ಮಹಾ ಅರ್ಚಕನನ್ನು ತಾನು ಕಾಣ ಬೇಕು. ಈ ದಿನವೇ, ಈಗಲೇ.' ರಾಜಕುಮಾರನನ್ನೂ ಕರೆದುಕೊಂಡು?

ರಾಜಕುಮಾರನನ್ನು ಶೈಶವದಿಂದಲೂ ಲಾಲಿಸಿ ಪಾಲಿಸಿದ್ದ ವೃದ್ದೆ ಪರಿ ಚಾರಿಕೆ ಬೆಂಟ್ ರಷ್ಟ್ ಬಂದು ಆಂದಳು :

      “ನದೀ ವಿಹಾರದಿಂದ ರಾಜಕುಮಾರ ಇನ್ನೂ ವಾಪಸಾಗಿಲ್ಲ, ಮಹಾ ರಾಣಿ.”
      "ಬಂದ ತಕ್ಷಣ ನನ್ನನ್ನು ಕಾಣೋದಕ್ಕೆ ಹೇಳು."
       "ಹೂಂ.ಮಹಾರಾಣಿ."

ನೆಫರ್ ಟೀಮ್ ತನ್ನ ತಲೆಗೂದಲ ಮೇಲೆ ಕೄ ಆಡಿಸಿದಳು. ಸೆಡ್ ಉತ್ಸವದ ತನಕ ಅದರ ಆಯುಸ್ಸು. ಮುಂದೆ ತನ್ನ ತಲೆಗೆ ಕೃತ್ರಿಮ ಕೇಶ ಕವಚ. ಹೊಸದಾಗಿ ಮಾಡಿಸಿದ ದೊಡ್ಡ ಕಿರೀಟ ಆದರ ಮೇಲೆ....

    ಮಹಾರಾಣಿ ಕೈ ತಟ್ಟಿದಳು. ಮುಖ ತೋರಿಸಿದ ಪರಿಚಾರಿಕೆಯೊಡನೆ ಅವಳೆಂದಳು :
       “ಹೊರಗೆ ಹೋಗ್ತಿದ್ದೇನೆ.”
       ನೆಫರ್ ಟೀಮ್ ಸಿಂಗರಿಸಿಕೊಳ್ಳುವ ಕೊಠಡಿಗೆ ತೆರಳಿ, ಕಂಚಿನ ಸ್ವರೂಪ ದರ್ಶಕದಲ್ಲಿ ತನ್ನ ಪ್ರತಿಬಿಂಬವನ್ನು ದಿಟ್ಟಿಸುತ್ತಿದ್ದಂತೆ,ಆಲಂಕಾರದ ದಾಸಿ  ಯರು ಓಡಿ ಬಂದರು. (ಹೊರಗೆ ಅಂಗರಕ್ಷ ಕರಿಗೂ ಬೋಯಿಗಳಿಗೂ ಸುದ್ದಿ ಮುಟ್ಟಿತು.)
       ಸ್ವರೂಪದರ್ಶಕದೆದುರು ವಿಶಾಲ ಪೀಠದ ಮೇಲೆ ಏಳು ಬಗೆಯ ಮುಖ ಚೂರ್ಣಗಳೂ ಎರಡು ಬಗೆಯ ಕೆಂಪು ವರ್ಣಗಳೂ ಇದುವು. ಕೂದಲನ್ನು ಗುಂಗುರುಗೊಳಿಸುವ ತಾಮ್ರದ ಉಪಕರಣ. ಹುಬ್ಬು ತೀಡುವ ತೀಕ್ಷ್ಣ