ಪುಟ:Mrutyunjaya.pdf/೩೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೮೦ ಮೃತ್ಯುಂಜಯ ಸೂರ್ಯಾಸ್ತವಾಗುತ್ತಿದ್ದಂತೆ ಮಹಾರಾಣಿಯ ಪರಿವಾರ ಮಹಾ ಮಂದಿರವನ್ನು ತಲಸಿತು. ರಕ್ಷಕಭಟರು, ಪಲ್ಲಕಿಗಳು, ಮತ್ತೆ ರಕ್ಷಕ ಭಟರು, ಅವರ ಹಿಂದೆ ಉರಿಸದ ಪಂಜುಗಳೊಡನೆ ಇಬ್ಬರು. ಪವಿತ್ರ ಕೊಳದಲ್ಲಿ ಮಿಂದು, ಒದ್ದೆವಸ್ತ್ರದಲ್ಲೇ, ಅಸ್ತಮಿಸುತ್ತಿದ್ದ ರಾ ನಿಗೆ ವಂದಿಸಲಂದೆ ಕೊಳದ ಬಳಿಯ ದಿಬ್ಬವನ್ನು ಮಹಾ ಅರ್ಚಕ ಏರಿದ್ದ. ಮಹಾಮಂದಿರವನ್ನು ಸಮೀಪಿಸುವ ಏರುದಾರಿ ಅವನು ನಿಂತಲ್ಲಿಗೆ ಕಾಣಿಸುತ್ತಿತ್ತು. ಅಂಗರಕ್ಷಕರನ್ನೂ ಪಲ್ಲಕಿಗಳನ್ನೂ ಕಂಡಾಗ, ಸ್ವತಃ ಪೆರೋ ಬಂದನೆ ? ಎನಿಸಿತು. ಆದರೆ ಮರುಕ್ಷಣ ಪಲ್ಲಕಿ ಪೀಠದ ಮೇಲಿಂದ ಸ್ತ್ರೀ ಲಾವಣ್ಯ ಮೆರೆದಂತಾಯಿತು. ನಿಸ್ಸಂದೇಹವಾಗಿಯೂ ಮಹಾರಾಣಿಯೇ. ಹೇಪಾಟ ಎರಡು ತೊಳುಗಳನ್ನೂ ಸೂರ್ಯನತ್ತ ಚಾಚಿ, “ರಾ, ರಾ, ರಾ," ಎಂದ.ಮೈ ಸಡಿಲಬಿಟ್ಟು ನಿಂತು, ಗಾಳಿ ಸೇವಿಸಿದ. ಸುವಾಸನೆ ಯೇನೂ ತಟ್ಟಲಿಲ್ಲ.ದೂರದಲ್ಲಿಯೇ ಇದ್ದಾಳೆ_ಎನಿಸಿತು. ಓಲಾಡತೊಡಗಿದ್ದ ತನ್ನ ಮನಸ್ಸನ್ನು ಕಂಡು ಹೇಪಾಟ್ ಕ್ರುದ್ಧನಾದ. ತನ್ನ ಸಂದರ್ಶನಕ್ಕೆ ಆಕೆ ಬರುತ್ತಿರಬೇಕು. ಇವತ್ತೆ ಯಾಕೆ? ಯಾರು ಹೂಡಿರುವ ಹಂಚಿಕೆ ಇದು ? ಸ್ವತಃ ಪೆರೋ ? ಅಮಾತ್ಯ? ಗೂಬೆ ಹೆಖ್ವೆಟ್ ? 'ಮಾಯಾವಿನಿ ! ನೀನು ಯಾವ ಬಲೆ ನೇಯಬಲ್ಲೆ ಅಂತ ನನಗೆ ತಿಳೀದೆ?” ತಾನು ಏಕಾಂತ ಕೊಠಡಿಗೆ ಸೇರುವುದಲ್ಲವೆ ಮೇಲು? ಪೂಜಾನಿರತರಾಗಿದ್ದಾರೆ ಎಂದರಾಯಿತು. ಸಪ್ಪೆಮೋರೆ ಹಾಕಿಕೊಂಡು. ಹೇಪಾಟನ ಹಾವುಗೆಗಳು ಟಕ್ ಟೆಕ್ ಸದ್ದು ಮಾಡಿದವು, ವಸತಿಯತ್ತ ನಡಿಗೆ. ಮಹಾರಾಣಿಗೆ ಹೆದರಲೆ ತಾನು ?ಸ್ತ್ರೀ ಜಾತಿಯೊಡನೆ ಮಾತನಾಡಿ ಎಷ್ಟು ಕಾಲವಾಯಿತು? ಮಹಾರಾಣಿಯನ್ನು ವರ್ಷಕ್ಕೆ ಒಂದೆರಡು ಬಾರಿ ಆಕೆ ದೇವದರ್ಶನಕ್ಕೆಂದು ಮಹಾಮಂದಿರಕ್ಕೆ ಬಂದಾಗಲೋ ಭರತ ಹಬ್ಬದ ವೇಳೆಯಲ್ಲೋ ಹತ್ತಿರದಿಂದ ನೋಡುತ್ತಿದ್ದ.ಒಂದು ಬಗೆಯ ಆಕರ್ಷಣೆಗೆ ಒಳಗಾಗುತ್ತಿದ್ದ. ತುಟಿಗಳೊ, ಸ್ತನಗಳೊ,ಮೈಕಟ್ಟೊ-ಆಕರ್ಷಣೆಯ ಕೇಂದ್ರ ಇಂಥದೇ ಎಂದು