ಪುಟ:Mrutyunjaya.pdf/೩೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ ೩೮೧ ಹೇಳಲುಆವನು ಆಸಮರ್ಥ. ವಸತಿಯನ್ನು ಪ್ರವೇಶಿಸಿದವನು ಏಕಾಂತ ಕೊಠಡಿಗೆ ಹೋಗದೆ ಪಡಸಾಲೆ ಯಲ್ಲಿ ಆಸೀನನಾದ. ದೀಪಗಳನ್ನು ಹಚ್ಚಿದ್ದರು. ಕಣ್ಣೆವೆಗಳನ್ನು ಅರೆಮುಚ್ಚಿ ಕೊಂಡು ಹೇಪಾಟ್ ಧ್ಯನಮಗ್ನನಂತೆ ನಟಸಿದ. ಆಪ್ತಸಹಾಯಕ ಓಡಿಬಂದು ಮಹಾರಾಣಿ ಇಲ್ಲಿಗೆ ಬರ್ತಿದ್ದಾರೆ, ಎಂದ. ಮಹಾ ಅರ್ಚಕನ ಗೋಣು ತುಸು ಆಡಿದಂತೆ ಅವನಿಗೆ ಕಂಡಿತು.

ನೆಫರ್ಟೇಮ್ ಬಂ ದೇಬಿಟ್ಟಳು. ಅವಳನ್ನು ಹಿಂಬಾಲಿಸಿ ಬಂದು ದೂರ ನಿಂತಳು ಚಿರತೆಯ ಚರ್ಮದ ಸುರುಳಿ ಹೊತ್ತಿದ್ದ ದಾಸಿ.

ಬಂಗಾರದ ಸರಿಗೆಗಳಿಂದ ಬಂಧಿಸಿದ್ದ ಜೊಂಡಿನ ಮೆದು ಪಾದರಕ್ಷೆಯನ್ನು ಮಹಾರಾಣಿ ಕಳಚಿದಳು.ಚಿರತೆಯ ಚರ್ಮದ ಸುರುಳಿಯನ್ನು ತಾನು ಎತ್ತಿ ಕೊಂಡು, ಸದ್ದಾಗದಂತೆ ಹೆಜ್ಜೆ ಇಡುತ್ತ, ಮಹಾ ಅರ್ಚಕನನ್ನು ಸಮೀಪಿಸಿ ಸುರುಳಿಯನ್ನು ಕೆಳಗಿರಿಸಿ ಅವನೆದುರು ಮಂಡಿಯೂರಿದಳು. (ಮಹಾ ಅರ್ಚಕನ ಆಪ್ತಸಹಾಯಕ ವಿಸ್ಮಿತ. ಅಷ್ಟು ಹತ್ತಿರಕ್ಕೆ ಮಹಾರಾಣಿ ಹಿಂದೆಂದೂ ಹೋಗಿ ರಲಿಲ್ಲ ! ) ಬಾಹ್ಯನೋಟಕೆo ಮುಚ್ಚಿ ದಂತಿದ್ದರೂ ಧರ್ಮಗುರುವಿನ ಕಣ್ಣುಗಳು ಅರ್ಧ ತೆರೆದೇ ಇದುವು.. (ಅಸ್ತಮಿಸುತ್ತಿದ್ದ ರಾನಿಗೆ ಹೇಪಾಟ್ ವಂದನೆ ಸಲ್ಲಿಸುತ್ತಿದ್ದುದನ್ನು ಪೀಠಪಲ್ಲಕಿಯಿಂದ ಇಳಿಯುವುದಕ್ಕೆ ಮೊದಲೇ ನೆಫರ್ ಟೀಮ್ ಕಂಡಿದ್ದಳು. ಅಷ್ಟುಬೇಗನೆ ಧ್ಯನದಲ್ಲಿ ತಲ್ಲೀನನಾಗುವುದು ಸುಳ್ಳು ಅಲ್ಲಿ ನಿಂತಿದ್ದ ದೇವಸೇವಕ ಸುದ್ದಿ ತಿಳಿಸದೆ ಇರುತ್ತಾನೆಯೆ ?) ರಾಣಿ ಕಣ್ಣು ಮುಚ್ಚಿ; ಅದೇ ಭಂಗಿಯಲ್ಲಿ ಕಾದಳು.

ಹೇಪಾಟ್ ಎವೆಗಳ ಸಂದಿಯಿಂದಲೇ ಮಂಡಿ ಊರಿದ್ದವಳ ಸೊಬಗನ್ನು ಸವಿದ. ಪುನಃ ಕರಗುತ್ತಿದ್ದೇನೆ ಎಂದು ಕಸಿವಿಸಿ. “ಯಾರು ?” ಎನ್ನುತ್ತ ಕಣ್ಣು ತೆರೆದ.

ಕಣ್ಣು ಮುಚ್ಚಿಕೊಂಡೇ ಮಹಾರಾಣಿ ಅಂದಳು : “ನಾನು ನೆಫರ್ಟೀಮ್.ಐಗುಪ್ತದ ರಾಜಕುಮಾರನ ತಶಯಿ.” ಏಳಿ.' ಅರಸಿ, ಧರ್ಮಗುರುವಿನ ಹಾವುಗೆಗಳನ್ನು ಚುಂಬಿಸುವವಳಂತೆ ಅವು ಗಳ ಮೇಲೆ ಬಾಗಿದಳು. ಹೇಪಾಟ್ ಮತ್ತೊಮ್ಮೆ ಎಳಿ ಎಂದ. ಅವನ