ಪುಟ:Mrutyunjaya.pdf/೩೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೮೨ ಮೃತ್ಯುಂಜಯ ಅಂಗೈಗಳು ಅವಳ ತೋಳುಗಳನ್ನು ಸೋಂಕಿದುವು, ನೆಫರಟೀಮ್ ಎದ್ದಳು. “ಐಗುಪ್ತದ ಮಹಾರಾಣಿಗೆ ಒಂದು ಪೀಠ ತಂದೊಡು.”

ದೇವಸೇವಕನಿಗೆ ಹೇಪಾಟ್ ಆಜ್ಞಾಪಿಸಿದ:
ಅರ್ಚಕನ  ಆಸನಕ್ಕಿಂತಲೂ ತಗ್ಗಾದ ಒಂದು ಮುಗ್ಗಾಲು ಪೀಠವನ್ನು ಆ ದೇವಸೇವಕ ತಂದಿರಿಸಿದ, ಉಡುಪಿನ ನೆರಿಗೆಗಳು ಕೆಡದಂತೆ, ಹಿಂಭಾರದಿಂದ  ತಾನು ಹಿಂದಕ್ಕೆ ಕುಸಿಯದಂತೆ, ಎಚ್ಚರ ವಹಿಸುತ್ತ ನೆಫರ್ ಟೀಮ್ ಅದರ ಮೇಲೆ ಕುಳಿತಳು. ಮಹಾ ಅರ್ಚಕನ ಕಣ್ಣುಗಳಲ್ಲಿ ಲಜ್ಜೆ ಇರಲಿಲ್ಲ, ಆದರೆ ಸಿಟ್ಟನ್ನು ಬಿಟ್ಟುಕೊಡಲಾರದ ಅವನ ದವಡೆಯ ಸಾಯುಗಳು ಮಿಸುಕಿದುವು.

ಮಹಾರಾಣಿಯೇ ಮಾತು ಆರಂಭಿಸಿದಳು; ನೀವು ಬಯಸುವ ಬಲಿ ಯಾವುದೂ ಅಂತ ತಿಳಿಯೋದಕ್ಕೆ ಬಂದಿದ್ದೇನೆ.” ಅವಳ ಮೈಮೇಲೆ ದೃಷ್ಟಿಯನ್ನು ಹರಿಯಬಿಡುತ್ತ, ಸ್ವರವನ್ನು ಏರಿಸ ದೆಯೇ, ಹೇಪಾಟ್ ಕೇಳಿದ: "ಎಂಥ ಬಲಿ? ಯಾವುದಕ್ಕೆ? ಆ ಪ್ರಶ್ನೆಗಳನ್ನು ಉತ್ತರಿಸದೆ ನೆಫರ್ ಟೀಮ್ ಮುಂದುವರಿಸಿದಳು: “ಆಶ್ರಿತರಿಂದ ತಪ್ಪುಗಳಾಗಿದ್ದರೆ ತೋರಿಸಿಕೊಟ್ಟು, ತಿದ್ದಬೇಕೇ ಹೊರತು ಪರತಾಪದಿಂದ ದಹಿಸಿ ಬೂದಿಯಾಗೋ ಹಾಗೆ ಮಾಡೋದೆ?” ಮನಸ್ಸಿಲ್ಲದ ಮನಸ್ಸಿನಿಂದ ಹೇಪಾಟ್ ನಕ್ಕ. "ರಾಜನೀತಿಯಲ್ಲಿ ಮಹಾರಣಿ ಪಾರಂಗತರಾದಂತಿದೆ. ರಾಜ ಕುಮಾರನ ಶಿಕ್ಷಣದ ಹೊಣೆಯನ್ನು ನೀವೇ ಹೊತ್ತಿದ್ದೀರೊ?” “ಆಳುವ ಮಹಾಪ್ರಭುವಿಗೆ ಅಂತಃಪುರವೇ ಜಗತ್ತು. ಪಿತೃಸಮಾನ ರಾದ ಧರ್ಮಗುರುವಿಗೆ ನಿರಾಸಕ್ತಿ, ನಾನೇ ಶಿಕ್ಷಣ ನೀಡದೆ ಇನ್ನೇನು ಮಾಡಲಿ?” “ಸಿಂಹಾಸನದ ಉತ್ತರಾಧಿಕಾರಿ ಸಿದ್ಧನಾಗುತ್ತಿದ್ದಾನೆಂದೆ ಇದರ ಅರ್ಥ ?” “ಅಲ್ಲವೆ?....ಆದರೆ, ಸಲಹಬೇಕಾದ ನೀವು-ತಂದೆ-ಸಿಂಹಾಸನದ ಮೇಲೆಯೇ ಯುದ್ಧ ಸಾರಿದ್ಧೀರಿ !”