ಪುಟ:Mrutyunjaya.pdf/೩೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೮೪ ಮೃತ್ಯುಂಜಯ "ಯಾವ ಪ್ರಶ್ನೆ ಮಹಾರಾಣಿ ?” “ನೀವು ಬಯಸುವ ಬಲಿ...." ಹೇಪಾಟ್ ಎದ್ದು ನಿಂತ. ಮಹಾರಾಣಿಯೂ ಎದ್ದಳು. ವುಹಾ ಅರ್ಚಕನೆಂದ: “ನಿಮ್ಮ ಪ್ರಶೆಗೆ ನಾಳೆ ಉತ್ತರ ಕೊಡ್ತೇನೆ.” “ನಾಳೆ?” "........." “ಬೆಳಿಗ್ಗೆ ಪೂಜೆ ಮುಗಿಸಿ ಅರಮನೆಗೆ ಆಗಮಿಸಿ, ಮಧ್ಯಾಹ್ನ ಅಲ್ಲಿಯೇ ಭೋಜನ ಸ್ವೀಕರಿಸಬೇಕು. ಇದು ನನ್ನ ಪ್ರಾರ್ಥನೆ.” “ಮಹಾರಾಣಿ....” ನೆಫರ್ಟೀಮಳ ಕಿವಿಗೆ ಇಂಪಾಗಿ ಕೇಲಳಿಸಿದ ಸಂಬೋಧನೆ. “ಹೇಳೋಣವಾಗಲಿ." "ಬರಲಾ ? ನಾಳೆ ದಾರಿ ನೋಡ್ತೇನೆ " ಹೇಪಾಟ್ ಆಶೀರ್ವದಿಸಲು ಕೈ ಎತ್ತಿದ. ಮಹಾರಾಣಿ ನಡುಬಾಗಿಸಿ ನಮಿಸಿ ಹೊರಟಳು. ನಿರ್ಗಮಿಸುತ್ತಿದ್ದ ಆಕೆ ದಾಸಿಯೊಡಗೂಡಿ ಬಾಗಿಲನ್ನು ದಾಟುವವರೆಗೂ ಮಹಾಅರ್ಚಕನ ದೃಷ್ಟಿ ಅವಳನ್ನು ಹಿಂಬಾಲಿಸಿತು. ತನ್ನೆಡೆಗೆ ಬಂದ ದೇವಸೇವಕನಿಗೆ ಆತ ನುಡಿದ: “ಸುರುಳಿಯನ್ನು ಬಿಚ್ಚು.” ಐದು ಮೊಳ ಉದ್ದ. ದೇವಸೇವಕ ಅದನ್ನು ತನ್ ಮೈಗೆ ಅಡ್ಡವಾಗಿ ಹಿಡಿದ. ಹೇಪಾಟ್ ಒಂದು ಹೆಜ್ಜೆ ಮುಂದಿರಿಸಿ, ಚಿರತೆ ಚರ್ಮದ ಕತ್ತು ಬೆನ್ನುಗಳ ಮೇಲೆ ಕೈ ಆಡಿಸಿದ. ....ಪ್ಟಾ ದೇವನಿಗೆ ಪುಷ್ಪಗಳನ್ನರ್ಪಿಸಿ, ಪ್ರಸಾದ ಪಡೆದು, ನೆಫರ್ ಟೀಮ್ ಪಲ್ಲಕಿಯತ್ತ ಧಾವಿಸಿದಳು. ದೀವಟಿಗೆಯವರು ತಮ್ಮ ಪಂಜು ಗಳನ್ನು-ಸೆಣಬಿನ ಚಿಂದಿಗಳನ್ನು ಬಿಗಿದು ಕಟ್ಟಿ ನಾರಗಸೆ ಎಣ್ಣೆ ಯಿಂದ ತೋಯಿಸಿ ಮಾಡಿದ್ದ ಕಂಚಿನ ದೀಪಗಳನ್ನು-ಉರಿಸಿ ಈಗ ಮುಂಭಾ ಗದ ಅಂಗರಕ್ಷಕರ ಮುಂದುಗಡೆ ನಿಂತಿದ್ದರು.