ನೆಫರ್ಟೀಮ್ ಪಲ್ಲಕಿಯಲ್ಲಿ ಅರಮನೆಯ ೩೮೫ತ್ತ ಸಾಗುತ್ತ ಮಹಾ ಅರ್ಚಕ ನೊಡನೆ ತನ್ನ ಸಂವಾದವನ್ನು ಸ್ಮರಿಸಿಕೊಳ್ಳುತ್ತ, ಕತ್ತಲಿನ ರಕ್ಷಣೆಯಲ್ಲಿ ಆತ್ಮ ಸಂತೃಪ್ತಿಯಿಂದ ಮತ್ತೆ ಮತ್ತೆ ತನ್ನಷ್ಟಕ್ಕೆ ನಸುನಕ್ಕಳು.
* * * *
ಆ ರಾತ್ರೆ ಅಮಾತ್ಯ ತನ್ನ ಭೇಟಿಗೆ ಬರುವ ವೇಳೆಗೆ ಪೆರೋ, ಮೈ ದಣಿವು ನೀಗಲೆಂದು ನಸುಬಿಸಿ ಸಾನ ಮಾಡಿ, ಮೈಗೆ ಸುಗಂಧ ದ್ರನ್ಯ ಲೇಪಿಸಿ ಕೊಂಡು ಕುಳಿತಿದ್ದ, ಒಳಗೆ ಬಂದ ಆಮೆರಬ್ ನ ಹಸನ್ಮುಖ ಅವನ ಮನಸ್ಸಿಗೆ ಮುದ ನೀಡಿತು.
ಹೆಖ್ವೆಟ್ ನಡೆಸಿದ ಯಶಸ್ವಿ ರಾಯಭಾರದ ವಿವರ ತಿಳಿದಾಗ ಅವನು ಸಂತುಷ್ಟನಾದ.
“ಆಂತೂ ಪರವಾಗಿಲ್ಲ ಹೆಬ್ವೆಟ್.”
ಅಮಾತ್ಯನೆಂದ:
"ಆನ್ ನಗರಿಗೆ ಹೊರಡೋದಕ್ಕೆ ಮುಂಚೆಯೇ ಹೆಖ್ವೆಟ್ ಕೇಳಿದ್ದ- ಈ ರಾಯಭಾರದ ತನ್ನ ಕಥೇನ ಗೋರಿಯೊಳಗೆ ಚಿತ್ರಿಸೋದಕ್ಕೆ ಅವಕಾಶ ಕೊಡಬೇಕೊಂತ."
“ಆಗಲಿ, ಅದಕ್ಕೇನೀಗ?”
“ಮಹಾಪ್ರಭುಗಳ ಗೋರಿಯಲ್ಲೂ ಒಂದು ಕಡೆ ಆತನ ಚಿತ್ರ ಸೇರಿಸ್ಬೇಕಂತೆ.”
ಸೇರಿಸೋಣವೇ?
“ತಪ್ಪೇನೂ ಅಲ್ಲ.”
"ಸರಿ ಹಾಗಾದರೆ."
"ಒಪ್ಪಿಗೆ ನೀಡಿದ್ದೀರಿ- ಅಂತ ನಾಳೆ ಆತ ಬಂದಾಗ ಮಹಾಪ್ರಭುಗಳೇ ಒಂದು ಮಾತು ಹೇಳ್ಬೇಕು”
"ಹೂಂ. ಹೂಂ."
"ಅಂತೂ ಒಂದು ಘಟ್ಟ ಮುಟ್ಟಿದ ಹಾಗಾಯಿತು.” ೨೫