ಪುಟ:Mrutyunjaya.pdf/೩೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯು೦ಜಯ “ಹೌದು, ಆದರೆ ಅವನ ಬತ್ತಳಿಕೇಲಿ ಇನ್ನೆಷ್ಟು ಬಾಣಗಳಿವೆಯೊ?” ಏನು ಉತ್ತರ ನೀಡಬೇಕೆಂದು ಅಮಾತ್ಯನಿಗೆ ಒಂದುಕ್ಷಣ ತೋಚಲಿಲ್ಲ. ತನ್ನ ಮೆದುಳು ಹೆಪ್ಪುಗಟ್ಟಿರಬೇಕು ಎ೦ದು ತನ್ನ ಮೇಲೆಯೇ ಸಿಟ್ಟಾದ. ಕತ್ತಿನ ಹಿಂಭಾಗವನ್ನು ತುರಿಸಿದ. ಅಷ್ಟರಲ್ಲಿ ಬಾಗಿಲಿನ ಹೂರಗೆ “ಅಮಾತ್ಯರು ಬಾ೦ದಿದ್ದಾರೆ ?” ಎ೦ದು ಮಹಾರಾಣಿ ಪ್ರಶ್ನಿಸುತ್ತಿದ್ದುದು ಆಮೆರಬ್ ಗೆ ಕೇಳಿಸಿತು. ಮರುಕ್ಷಣವೇ ಆಕೆ ಒಳಬಂದಳು, ಕೈಯಲ್ಲಿ ಮಂದಿರದ ಪ್ರಸಾದದ ತಟ್ಟೆ ಇತ್ತು. ಅಮಾತ್ಯ ಎದು ನಿಂತು ನಮಿಸಿದ. ಪೆರೋ ರಾಣಿಯ ಕಡೆಗಾಗಲೀ ರಾಣಿ ಪೆರೋನ ಕಡೆಗಾಗಲೀ ನೋಡಲಿಲ್ಲ ಕಡೆಗಣ್ಣಿನಿಂದ ಗಂಡನನ್ನು, ದಿಟ್ಟಿಸಿ ದಿನವೂ ಆ ದಾಸಿಯ ಸೇವೆಯನ್ನು ಈತ ಸ್ವೀಕರಿಸಿದರೆ ಸೆಡ್ ಆಚರಣೆ ಪ್ರತಿ ವರ್ಷವೂ ಬೇಕಾದೀತು ' ಎ೦ದು ತನ್ನ ಮನಸ್ಸಿನಲ್ಲೆ ಕಹಿನುದಡಿದಳು . ಗಟ್ಟಿಯಾಗಿ ಅವಳೆ೦ದಳು  : “ನೀವು ಕೂತ್ಕೋಳ್ಳಿ ಅಮಾತ್ಯರೇ. ಮ೦ತ್ರಾಲೋಚನೆ ಮು೦ದುವ ರೀಲಿ, ನಾನು ಅಡ್ಡಿಯಾಗೋದಿಲ್ಲ . ಒಂದೇ ಕ್ಷಣ.ಹೊರಡ್ತೇನೆ. ಇಗೊಳ್ಳಿ ಮಂದಿರದ ಪ್ರಸಾದ.” ಪೆರೋ ಕಣ್ಣೆ ವೆಗಳನ್ನು ಅರ್ಧಮುಚ್ಚಿ ಮಹಾರಾಣಿಯತ್ತ ಕತ್ತನ್ನು ತುಸು ಹೊರಳಿಸಿ, ರಾಣಿಯ ಸರಳ-ಆದರೂ ಸೊಬಗು ಸೂಸುವ-ಅಲಂಕಾರ ವನ್ನು ನೋಡಿದ. ಆತ ಮತ್ತು ಅಮಾತ್ಯ ಇಬ್ಬರೂ ತಟ್ಟೆಯಿಂದ ಹಣ್ಣಿ ನ ತುಣುಕುಗಳ ನ್ನೆತ್ತಿಕೊಂಡು ಬಾಯಿಗಿಟ್ಟರು. ಮಹಾರಾಣಿ ಮಾತು ಮು೦ದುವರಿಸಿದಳು  :

'ಇಲ್ಲಿ ಕೇಳಿ. ನಾನು ಇದೇ ಈಗ ಹೇಪಾಟರನ್ನು ಭೇಟಿ ಮಾಡಿ ಬರ್ತಿದ್ದೇನೆ. ಅವರು ನಾಳೆ ಬೆಳಿಗ್ಗೆ ಅರಮನೆಗೆ ಆಗಮಿಸ್ತಾರೆ, ಮಧಾಹ್ನ ನಮ್ಮ ಆತಿಥ್ಯ ಸ್ವೀಕರಿಸಬೇಕು ಅ೦ತ ಕೇಳ್ಕೊ೦ಡಿದ್ದೇನೆ."

ಪೆರೋನ ಕಣ್ಣಗಳು ಪೂರ್ತಿ ತೆರೆದುಕೊಂಡುವು ತ್ವೇಷ್, ತಿರಸ್ಕಾರ. (ಇದು ಅಧಿಕಪ್ರಸಂಗ, ಹೇಪಾಟ್ ಜತೆ ಇವಳಿಗೇನು ಕೆಲಸ?) ಆದರೆ, ಬಾಯಿ ತೆರೆದು ಏನನ್ನೂಆತ ಹೇಳಲ್ಲಿಲ . ಅಮಾತ್ಯ ವಿಸ್ಮಿತನಾಗಿ ಕಣ್ಣು ಗಳನ್ನು