ಪುಟ:Mrutyunjaya.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಮೃತ್ಯುಂಜಯ

೨೯

ಪಠಿಸುತ್ತಾನೆ. ಸುಗಂಧ ದ್ರವ್ಯಗಳ ಧೂಪ ಹಾಕುತ್ತಾನೆ. ಮೂರ್ತಿಯನ್ನು
ಪೀಠದಿಂದ ಹೊರತೆಗೆದು, ("ಸುಲಭವಾಗಿ ಎತ್ತಿದ. ಹೆಚ್ಚು ಭಾರವಿಲ್ಲ.
ಮರದ ಮೂರ್ತಿ") ಅದಕ್ಕೆ ಸುತ್ತಿದ್ದ బಟ್ಟೆಯನ್ನು ಬಿಚ್ಚುತ್ತಾನೆ. ತೊಳೆದು,
ಹೊಸ బಟ್ಟೆ ಸುತ್ತುತ್ತಾನೆ. ಪುನಃ ಪೀಠದ ಮೇಲಿಡುತ್ತಾನೆ. ಆಮೇಲೆ
ದೇವರಿಗೆ ಆಹಾರ ಪಾನೀಯ ಸಮರ್ಪಿಸುತ್ತಾನೆ. (" ದೇವರು ನಮ್ಮ
ಹಾಗೆಯೇ. ಅವರಿಗೂ ಆಹಾರ ಬೇಕು, ವಿನೋದ ಬೇಕು, ವಿಶ್ರಾಂತಿ
ಬೇಕು. ದೇವರು ತಿನ್ತಾನಾ ಕುಡೀತಾನಾ ಅಂತ ಕೇಳ್ಬೇಡಿ, ಅದು ಬೇರೆ
విಷ್ಯ.ಉತ್ಸವದ ದಿವಸ ಅಂಥ ಮಾತು ಯಾಕೆ?") ಸಾಮಾನ್ಯ ದಿನ
ಗಳಲ್ಲಾದರೆ ವಿಧಿಗಳು ಮುಗಿದ ಮೇಲೆ ಮುಖ್ಯ ದೇವಸೇವಕ ಗರ್ಭಗುಡಿಯ
ಬಾಗಿಲು ಮುಚ್ಚಿ, ಅದಕ್ಕೆ ಪುನಃ ಆವೆಮಣ್ಣಿನ ಮುದ್ರೆ ಒತ್ತಿ, ತನ್ನ
ಹೆಜ್ಜೆ ಗುರುತುಗಳನ್ನೆಲ್ಲ ಒರೆಸಿ ತಾನು ಅಲ್ಲಿಗೆ ಬಂದುದರ ಯಾವ ಕುರುಹೂ
ఇల్లದಂತೆ ಮಾಡಿ, అల్లింದ ಹೊರಡುತ್ತಾನೆ. ಕಿರಿಯ ದೇವಸೇವಕರು ಮಂತ್ರ
ಪಠಣ ಮಾಡುತ್ತ ಅಲ್ಲಿಯೇ ಇರುತ್ತಾರೆ. ಇವತ್ತು ಹಾಗಲ್ಲ. ಯಾಕೆ
అంದರೆ___
ಜಾತ್ರೆ ಈ దిನ. ಪ್ರತಿ ವರ್ಷ ಕುಯಿಲಿನ ಬಳಿಕ ನಡೆಯುವ ಭಾರೀ
ಉತ್ಸವ. ಯಾವ ಆರೈಕೆಯೂ ಇಲ್ಲದೆ ಬೆಳೆಯುತ್ತಿದ್ದ ಗೋಧಿಯನ್ನೂ
ಯವೆಯನ್ನೂ ಕಂಡು ಹಿಡಿದವಳು, ರಾಣಿ ಐಸಿಸ್ . ಅವನ್ನು ಆಕೆ ಅರಸ
ಒಸೈರಿಸ್ಗೆ ತೋರಿಸಿದಳು. ಆತ ಪ್ರಜೆಗಳಿಗೆ ಆ ಧಾನ್ಯಗಳ ಪರಿಚಯ
ಮಾಡಿಕೊಟ್ಟ. ಅವರು ಆ ಸಸ್ಯಗಳನ್ನು ಕೃಷಿಮಾಡಿದರು. ಸತ್ಯಸಂಧ
ದೊರೆ ತನ್ನ ದುಷ್ಟ ಸೋದರನಿಂದ ಹತನಾದ. ಮೋಸದ ಕೊಲೆ. ಶವವನ್ನು
ಆತ ಮರೆ ಮಾಡಿದ. ಆಗ ಐಸಿಸ್ ತುಂಬಿದ ಗರ್ಭಿಣಿ. ಹುಟ್ಟಿದ ಮಗ
ನನ್ನು ಬುಟೋ ದೇವತೆಯ ಆರೈಕೆಯಲ್ಲಿ ಬಿಟ್ಟು, ಪತಿಯ ಶವವನ್ನು
ಅರಸುತ್ತ ಹೊರಟಳು. ನೀಲ ನದಿಯಂತೆ ಅಗಾಧ ಅವಳ ಅಳಲು....
(ದೇಶದ ಬೇರೆ ಬೇರೆ ಕಡೆ ಮೃತ ಶರೀರದ ಬೇರೆ ಬೇರೆ అంಗಗಳು.
ಅಬ್ಟುವಿನಲ್ಲಿ ತಲೆ....)
ಪತಿಯ ಮುಖ ಕಂಡು, ಕಿರೀಟ ಹೊತ್ತ ತಲೆ ನೋಡಿ ಎದೆಯೊಡೆಯು
ವಂತೆ ಕೂದಲು ಕಿತ್ತು ಕಿತ್ತು ಐಸಿಸ್ ಅತ್ತಳು.