ಪುಟ:Mrutyunjaya.pdf/೪೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯು೦ಜಯ ಕಿರಿದುಗೊಳಿಸಿ ಅ೦ದ :

        ' ತು೦ಬಾ ಸ೦ತೋಷದ ಸುದ್ದಿ ಮಹಾರಾಣಿ. ಹೇ.ಪಾಟರನ್ನು ಕರ ಕೊಂಡು ಬರೋದಕ್ಕೆ ನಾಳೆ ಬೆಳಿಗ್ಗೆ ಮಹಾಮಂದಿರಕ್ಕೆ ಹೋಗಬೇಕೂಂತ ಹೆರೆವಟ'ಗೆ ನಿರ್ದೇಶ  ನೀಡಿದ್ದೇನೆ. ಮಹಾ ಅರ್ಚಕರು ಇನ್ನೇನಾದರೂ ಹೇಳಿದರೆ?"

ಮಾತುಕತೆಯ ವಿವರವನ್ನು ಇವರಿಗೆ ತಿಳಿಸುವುದು ಅಗತ್ಯವೆಂದು ನೆಫರ್ ಟೀಮಗೆ ಅನ್ನಿಸಲ್ಲಿಲ ಅವಳೆ೦ದಳು  : “ಏನೂ ಇಲ್ಲ, ಹೇಗೂ ನಾಳೆ ಬರ್ತ್ತಾರಲ್ಲ.....” “ಒಟ್ಟಿನಲ್ಲಿ, ಸಿಟ್ಟು ಇಳಿದು ಹೇಪಾಟ್ " ಶಾಂತಚಿತ್ತರಾಗಿದ್ದಾರೇಂತ ಆಯ್ತು." “ಅದನ್ನು ನಾನು ಹೇಳಲಾರೆ . ಮೊಂಡಾಟಕ್ಕೆ ಪ್ರತಿಮೊಂಡಾಟ ಇದ್ದೇ ಇರುತದೆ.” ಪೆರೋ ಮಧ್ಯೆ ಪ್ರವೇಶಿಸಿ ಅ೦ದ ; “ನೆಫರ್, ಚರ್ಚೆ ಬೇಡ.” ಮಹಾರಾಣಿ :ಸ್ವರವೇರಿಸಿದಳು. “ಬೇಡವಪ್ಪಾ ಬೇಡ, ಅರಮನೆ-ಗುರುಮನೆ ವಿರಸ ದೇಶಕ್ಕೂ ರಾಜ ವಂಶಕ್ಕೂ ಗ೦ಡಾ೦ತರಕಾರಿ. ಮರೀಬೇಡಿ !" ಅಷ್ಟು ಹೇಳಿ ಸರಸರನೆ ಆಕೆ ಅಂತಃಪುರದತ್ತ ನಡೆದಳು. ಅಮಾತ್ಯ ಮತ್ತೆ, ಆಸೀನನಾದ . ಪೆರೋ ಮತ್ತು ಆತ ಪರಸ್ಪರ ನೋಡುತ್ತ ಕುಳಿತರು, ಸ್ವಲ್ಪ ಹೊತ್ತು, ಮೌನವಾಗಿ ಬಳಿಕ ಪೆರೋ ನಿಟ್ಟುಸಿರು ಬಿಟ್ಟು చి, ಬಲ ಮುಷ್ಟಿಯಿಂದ ತನ್ನ ತೊಡೆಯನ್ನು ಮೆಲ್ಲನೆ ಗುದ್ದಿದ , ಅಮಾತ್ಯ ಪುನಃ ಮಾತು ಆರ೦ಭಿಸಿದ : 'ಕಹಿಯಾದದ್ದೇನೂ ನಡೆದೇ ಇಲ್ಲ ಅನ್ನೋ ಹಾಗೆ ಹೇಪಾಟನನ್ನು ನಾವು ಬರಮಾಡಿಕೊಳ್ಬೇಕು .”

ಅರಸನೆ೦ದು : 

“ಮಹಾರಾಣಿ ಹೇಳಿದ್ದು ಕೇಳಿದಿರಲ್ಲ? ಅವನೇ ತಪ್ಪು ನಾವೇ ಸರಿ ಅ೦ತ ವಾದಿಸಿ ಪ್ರಯೋಜನವಿಲ್ಲ.”