ಪುಟ:Mrutyunjaya.pdf/೪೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಮೃತ್ಯು೦ಜಯ

“ಮಾತುಕತೆ ನಡೆಯುವಾಗ ಮಹಾರಾಣಿಯವರೂ ಇರುವುದು ಮೇಲು ಅನಿಸ್ತಿದೆ." “ನಿಮಗೆ ಅನಿಸದೇ ಇದ್ದರೂ ನೆಫರ್ ಅಲ್ಲಿರ್ತಳೆ.” “ರೇಗಿಸೋದಕ್ಕೆ ನಾನು ಮತ್ತು ಹೆಋವ್ಟ್, ಸಾಂತ್ವನಗೊಳಿಸೋದಕ್ಕೆ ಅರಸಿ, ಹೇಪಾಟ್ನನ್ನು ಹಣ್ಣು ಮಾಡೋದು ಸುಲಭವಾಗ್ತದೆ.” ಅಮೆರಬ, ನಾಳೆ ನಿಮ್ಮ ಮುತ್ಸದ್ದಿ ತನದ ಮಹಾಪರೀಕ್ಷೆ.” ಅಮಾತ್ಯನಿಗೆ, ಪಕ್ಕೇಲುಬನ್ನು ಯಾರೋ ಚುಚ್ಚಿದ ಅನುಭವವಾಯಿತು. ತಾನು ಸೋತರೆ ಅಮಾತ್ಯಗಿರಿ ಅಂತ್ಯವಾಗುತ್ತದೆ ಎಂದಲ್ಲವೆ ಆ ಮಾತಿನ ಸೂಚ್ಯಾರ್ಥ? ಅವನೆ೦ದು : “ನಿಶ್ಚಿಂತೆಯಾಗಿರಬೇಕು, ಮಹಾಪ್ರಭು, ದುರ್ಬಲನಾದ ಅಮಾತ್ಯ ದೊರೆತರೆ ತನ್ನ ಕೆಲಸ ಸುಗಮವಾಗ್ರದೆ ಅಂತ ಹೇಪಾಟ್ ಭಾವಿಸಿದ್ದಾನೆ. ಅವನ ಆ ಆಸೆ ಕೈಗೂಡೋದು ಅಷ್ಟು ಸುಲಭವಲ್ಲ.” ಪೆರೋ ಅಮಾತ್ಯನ ಮುಖವನ್ನು ದಿಟ್ಟಿಸಿದ. “ಸರಿ ಆಮೆರಬ್, ಮಹಾಪರೀಕ್ಷೇಲಿ ನೀವು ಯಶಸ್ವಿಯಾಗ್ಬೇಕು ಅನ್ನೋದೇ ನನ್ನ ಅಪೇಕ್ಷೆ.” “ಮಹಾಪ್ರಭು ನನ್ನಲ್ಲಿ ವಿಶ್ವಾಸವಿಟ್ಟಿದ್ದೀರಿ-ನನಗೆ ಅಷ್ಟು ಸಾಕು.” “ಆನ್ ನಗರಿಯಲ್ಲಿ ಅಷ್ಟು ದೀರ್ಘಕಾಲ ಧಾರ್ಮಿಕ ಜಿಜ್ಞಾ ಸೆ ನಡೆಸಿದ ನಲ್ಲ? ಅದೇನು ಅಂತ ಅವನನ್ನು ಕೇಳ್ಬೇಕು. -> “ಮಾತು ಆರಂಭಿಸೋದಕ್ಕೆ ಒಳ್ಳೇ ವಿಷಯ, ಮಹಾಪ್ರಭು.” ಪೆರೋ 'ಹ್ಜ್ನ ಹ್ಜ್ನ " ಎ೦ದ; ಆಕಳಿಸಿದ. ಹಸಿವು ನಿದ್ದೆ. ಅಮಾತ್ಯ ಎದ್ದು , ಬೆಳಿಗ್ಗೆ ಹೆಖೆಟ್ಗೆ ಪಲ್ಲಕಿ ಕಳುಹಿಸಲು ವಾಹನಗಳ ಆಧಿಕಾರಿಗೆ ಆದೇಶವೀಯಬೇಕೆ೦ಬುದನ್ನು ನೆನೆಯುತ್ತ, ರಾಜಸನ್ನಿಧಿಯಿ೦ದ ನಿರ್ಗಮಿಸಿದ.

                    *               *                *                  *

ವಿಹಾರದಿ೦ದ ಮರಳಿದ ರಾಜಕುಮಾರನ ಹೊಟ್ಟೆ ಚುರುಗುಟ್ಟುತ್ತಿತ್ತು