ಪುಟ:Mrutyunjaya.pdf/೪೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯು೦ಜಯ ಅಕ್ಕಂದಿರೊಡನೆ ತಿ೦ಡಿ ಊಟಗಳ ವಿಷಯ ಪ್ರಸ್ತಾಪಿಸ್ತುವುದು ಅವಮಾನ. ಮಗುವಲ್ಲ, ಈಗೀಗ ತಾಯಿಯ ಮುತ್ತುಗಳೂ ಅವನಿಗೆ ಮುಜುಗರ ಉಂಟು ಮಾಡುತ್ತಿದ್ದುವು. ಪೆರೋ ಅವನನ್ನು ಮಾತನಾಡಿಸುತ್ತಿದ್ದುದು ಎಂದೋ ಒಮ್ಮೆ, ಸಲಿಗೆಯ ಸಂವಾದಕ್ಕೆ ಏನಿದ್ದರೂ ವೃದ್ದೆ ದಾಸಿ ಬೆ೦ಟರಷ್ಟೇ ಸರಿ. ಆಕೆ ಧಾವಿಸಿಬಂದು, ತನ್ನ ಅಳಲನ್ನು ತೋಡಿಕೊ೦ಡಳು : “ರಾಜಕುಮಾರ! ಎಷ್ಟು ಹೊತ್ತು ವಿಹಾರ! ನಿಮ್ಮನ್ನು ಮಂದಿರಕ್ಕೆ ಕರಕೊಂಡು ಹೋಗಬೇಕೂಂತ ಮಹಾರಾಣಿ ಬಹಳ ಹೊತ್ತು ಕಾದ್ರು.” “ಬೆ೦ಟ್ ,ಸದ್ಯಃ ಆ ಹಿ೦ಸೆ ತಪ್ಪಿತಲ್ಲ! ಇಲ್ಲಿ ಕೇಳು.ನಾನಿವತ್ತು ಕೈಕೋಲಿನಿಂದ ಕಾಡು ಬಾತುಕೋಳಿ ಹೊಡೆದೆ. ಇದು ಮೊದಲನೇದು !”

        ;ಓ ನನ್ನ ರಾಜಕುಮಾರ! ಹೌದೆ ? ಹೌದೆ ? ಅರಮನೆಯ ಸರ್ವಜನರಿಗೆ ಈ ಸ೦ತೋಷದ  ಸುದ್ದೀನ ತಿಳಿಸ್ತೇನೆ. ಎಲ್ಲಿದೆ ಬಾತುಕೋಳಿ?"
 'ಅ೦ಬಿಗರು ಅಡುಗೆ ಮನೆಗೆ  ತೆಗೆದುಕೊ೦ಡು ಹೋದರು. ನನಗೆ ಹಸಿವು. ಅದನ್ನು ಅಡುಗೆಮಾಡಿ ಬಡಿಸೋದಕ್ಕೆ ಎಷ್ಟು ಹೊತ್ತು ಬೇಕು, ಬೆಂಟ್ ?”

“ಅಷ್ಟು ಅವಸರ ಯಾಕೆ ರಾಜಕುಮಾರ? ನಾಳೆ ಮಧ್ಯಾಹ್ನಕ್ಕೆ ವಿಶೇಷ ಅಡುಗೆ ಮಾಡಿಸೋಣ . ಈಗ ನಡೀರಿ ಊಟಕ್ಕೆ” “ನಾನು ಬಾತುಕೋಳಿ ಬೇಟೆಯಾಡ್ಡೆ ಅಂತ ಎಲ್ಲರಿಗೂ ಸಂತೋಷ ವಾಗ್ತದೆ ಅಲ್ಲವಾ ?”

'ಓಹೋ.'

' ಅಕ್ಕ೦ದಿರಿಗೂ ಹೇಳ್ತೀಯಾ ?' ' ಹೇಳ್ತೇನೆ .'

ದೀಪಗಳನ್ನು ಬೆಳಗಿದ್ದರು. ಅರಮನೆಯಲ್ಲೀಗ ಇರುಳಿನ ಹಗಲು, ರಾಜಕುಮಾರ ಉಡುಗೆ ಬದಲಿಸಿ,ಮೈ ಕೈ ತೊಳೆದು, ಭೋಜನಶಾಲೆಗೆ ಬರಲು ಬೆಂಟ್ ರಷ್ಟು ನೆರವಾದಳು.
  ಬೇಟೆಯ ಸುದ್ದಿ  ತಲುಪಿದೊಡನೆ ರಾಜಕುಮಾರಿಯರು ತಮ್ಮ ವಸತಿ ವಿಭಾಗದಿ೦ದ ಒಬ್ಬೊಬ್ಬರಾಗಿ ಬ೦ದು ," ಹೌದೇನೋ ?' 

"ನಿಜವಾಗಿಯೂ ನೀನೇ ಬೇಟೆಯಾಡಿದೆಯೇನೋ ?' "ಎಷ್ಟು ಚೆನ್ನ !' ಎ೦ದೆಲ್ಲ ಉದ್ಗರಿಸಿ ಬಾತುಕೋಳಿಯನ್ನು ನೋಡಲು ಹೋದರು.