ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮೃತ್ಯು೦ಜಯ 'ಪೆರೋನ ಕನಸು ಪೆರೋಗೆ ಇರಲಿ . ಇದು ನೆಫೆರ್ ಟೀಮಳ ಕಿವಿಗೆ ಬಿದ್ದು ಅವಳು ಕುಣಿಯೋದನ್ನು ಬೇರೆ ನಾನು ನೋಡಬೇಕೆ ?' )
ಅದು ಅರಮನೆಯ ಒಳಭಾಗದಲ್ಲಿದ್ದ ಮಂತ್ರಾಲೋಚನೆಯ ವಿಶಾಲ ಕೊಠಡಿ ರತ್ನಖಚಿತ ಸಿಂಹಾಸನ .ಬ೦ಗಾರದ ಮೆರುಗು ನೀಡಿದ್ದ ಆರೆ೦ಟು ಪೀಠಗಳು. ಸುತ್ತಲೂ ಮರದ ಅಟ್ಟಣಿಗೆಯ ಮೇಲೆ ಅಲಂಕಾರದ ವಸ್ತುಗಳು; ಬೆಳ್ಳಿಯ ತಟ್ಟೆಯಲ್ಲಿ ಬ೦ಗಾರದ ಮೀನು , ನೀಲಿ ಒರೆಯೊಳಗೆ ಇರಿಸಿದ ಕ೦ಚಿನ ಭರ್ಚಿ, ಬ೦ಗಾರದ ಹಿಡಿಗಳಿದ್ದ ಹೊಳಪು ಕಲ್ಲಿನ ಹೂಜೆ, ಸಿಂಹದ ಚರ್ಮ, ಜಿ೦ಕೆಯ ಚರ್ಮ, ಅನರ್ಘ್ಯ ಹರಳುಗಳನ್ನು ಕೂಡಿಸಿದ್ದ ಆಲಂಕಾರಿಕ ದೋಣಿ, ರಾ-ಪ್ ಟಾ-ಅಮನ್ ದೇವರ ಮೂರ್ತಿಶಿಲ್ಪಗಳು..... ಅರಸ ಆಸೀನನಾಗುವುದಕ್ಕೆ ಮೊದಲೆ ಲಿಪಿಕಾರ ಸೆನೆಬ್ ಧಾವಿಸಿ ಬ೦ದ. ಪೆರೋನ ಆಯುರಾರೋಗ್ಯ ವರ್ಧಿಸಲಿ ! ಮಹಾ ಅರ್ಚಕರೂ ಹೆಖ್ವೆಟ್ ರವರೂ ದಯಮಾಡಿಸಿದ್ದಾರೆ.” ಪೆರೋ ಆತನ ಕಡೆ ನೋಡಲಿಲ್ಲ .'ಬರಲಿ' ಎ೦ದು, ದೃಷ್ಟಿಯಿಂದಲೆ, ಅಮಾತ್ಯನಿಗೆ ಸ೦ಜ್ಞ ಮಾಡಿದ. ಕರಕೊ೦ಡು ಬಾ, ಎ೦ದ ಅಮಾತ್ಯ. ಲಿಪಿಕಾರ ಹೊರಳಿದೊಡನೆ ಪೆರೋ ಆವಸರವಾಗಿ ಸಿ೦ಹಾಸನದ ಮೇಲೆ ಕುಳಿತ, ಉದ್ವೇಗವಿಲ್ಲದೆ ಸಮಾಧಾನಚಿತ್ತನಾಗಿರಲು ಯತ್ನಿಸುತ್ತ . ಅಷ್ಟರಲ್ಲಿ ರಾಣಿ ಯಾವ ಮುನ್ಸೂಚನೆಯೂ ಇಲ್ಲದೆ ರಾಣಿ ಒಳ ಬ೦ದಳು. ಪೆರೋಗೆ ಕನಸಿನ ನೆನಪು. ಕಸಿವಿಸಿ. ಆತ ಆಮೆರಬ್ ನ ಮುಖನೋಡಿದ. ಅಮಾತ್ಯ ಅರಸಿಗೆ ಗೌರವ ಸೂಚಿಸಲೆ೦ದು ಎದ್ದು ನಿ೦ತ. ನೆಫರ್ ಟೀಮ್ ಗೆ ದುಗುಡ. ಆದರೂ ಅದನ್ನು ಹೊರತೋರಿಸದೆ ಮುಗುಳು ನಗಲು ಯತ್ನಿಸುತ್ತ ಅವಳೆ೦ದಳು : ಮಹಾರಾಣಿ ಪೆರೋ ಸನ್ನಿಧಿಯಲ್ಲಿ ಇರೋದಕ್ಕೆ ಅಮಾತ್ಯರು ಅನು ಮತಿ ನೀಡಬೇಕು.”