ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮೃತ್ಯು೦ಜಯ ಆಮೆರಬ್ ನುಡಿದ :
“ಛೆ! ಛೆ! ಎಂಥ ಮಾತು ! ಈ ಸಂದುಕಟ್ಟಿನ ಸಮಯದಲ್ಲಿ ಮಹಾರಾಣಿಯವರು ಪೆರೋ ಸನ್ನಿಧಿಯಲ್ಲಿರೋದು ಅತ್ಯಗತ್ಯ.” ಸಿಂಹಾಸನದ ಎಡಗಡೆ ತುಸು ದೂರದಲ್ಲಿದ್ದ, ಅಮಾತ್ಯ .ಅದರ ಬಲ ಗಡೆಯಲ್ಲಿದ್ದ ಪೀಠದತ್ತ ಮಹಾರಾಣಿ ಸರಿದಳು. ಆ ಕ್ಷಣ ದ್ವಾರದ ಬಳಿ ಹೆಖ್ವೆಟ್ ಕಾಣಿಸಿಕೊ೦ಡ. “ಪೆರೋನ ಆಯುರಾರೋಗ್ಯ ವರ್ಧಿಸಲಿ! ಆ ವಂದನೆ ಮುಗಿಯುತ್ತಿದ್ದ೦ತೆ ಬೆಳ್ಳಿಯ ಪದವಿ ದಂಡದೊಡನೆ ಮಹಾ ಅರ್ಚಕ ಒಳಕ್ಕೆ ಕಾಲಿರಿಸಿದ, (ಪಾದಗಳಲ್ಲಿ ರತ್ನಗಂಬಳಿಯ ಮೇಲೆ ಸಪ್ಪಳ ಮಾಡಲಾರದ ಹಾವುಗೆಗಳು.) ಮಹಾರಾಣಿಯೂ ಅಮಾತ್ಯನೂ ಬಾಗಿ ನಮಿಸುತ್ತಿದ್ದ೦ತೆ ಹೇಪಾಟ್ ಆ೦ದ: “ಸ್ವರ್ಣದೇವತೆ ಹಾಥೊರ್ ಪೆರೋನ ಮೂಗಿಗೆ ಬಲ ಕೊಡಲಿ.” "ಮಹಾ ಅರ್ಚಕರಿಗೆ ಸ್ವಾಗತ, ಆಸೀನರಾಗಬೇಕು,ಎ೦ದ ಅರಸ , ಕುಳಿತಲ್ಲಿಂದಲೇ. ಹೆಖ್ವೆಟ್ ಆಗಲೇ ಅಮಾತ್ಯನ ಮಗ್ಗುಲಿಗೆ ಸರಿದಿದ್ದ, ನೆಫರ್ ಟೀಮ್ ಅರಸನ ಬಲಗಡೆಯಲ್ಲಿ ಕುಳಿತಳು. ಮಹಾರಾಣಿಯ ಬಲಕ್ಕೆ ತುಸು ದೂರದಲ್ಲಿದ್ದ ಆಸನವನ್ನು ಹೇಪಾಟ್ ಆರಿಸಿಕೊಂಡ. ಮಹಾ ಅರ್ಚಕನ ಮೈಯ ಕೂದಲೆಲ್ಲ ಆ ಬೆಳಗ್ಗೆ ಕಿರಿಯ ದೇವಸೇವಕನೊಬ್ಬನ ಕ್ಷೌರದ ಕತ್ತಿಗೆ ಆಹುತಿಯಾಗಿತ್ತು . ಛಾವಣಿಯ ಬೆಳಕಿ೦ಡಿಯಿ೦ದ ಬರುತ್ತಿದ್ದ ಸೂರ್ಯಪ್ರಭೆಯಲ್ಲಿ ಅವನ ಮ೦ಡೆ ಹೊಳೆಯಿತು. ಮುಖದ ಮೂಳೆಗಳು ಎದ್ದು ಕಾಣಿಸಿದುವು . ಅವರೆಲ್ಲ ಆಸೀನರಾದ ಮೇಲೆ ಪೆರೋ ಮಹಾ ಅರ್ಚಕನತ್ತ ನೋಡುತ್ತ, ಮಾತು ಆರ೦ಭಿಸಿದ : ಪ್ರಯಾಣ ಸುಖಕರವಾಗಿತ್ತೆ ?” ಶಿಷ್ಟಾಚಾರದ ನಾಟಕದಲ್ಲಿ ಮಹಾ ಅರ್ಚಕನೂ ಭಾಗಿಯಾಗಿ “ಹೂಂ.” ಎ೦ದ. ಧಾರ್ಮಿಕ ಜಿಜ್ಞಾಸೆಯಲ್ಲಿ ನಿರತರಾಗಿದ್ದರಂತಲ್ಲ?”