ಪುಟ:Mrutyunjaya.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೩೦

ಮೃತ್ಯುಂಜಯ

ಸಹಸ್ರಾರು ವರ್ಷ ಕಳೆದರೂ ಜನ ಮನವನ್ನು ಕದಡಿದ ಶೋಕ ಅದು.
ಆತನದು ಎಲ್ಲ ಸಜ್ಜನರ ಮರಣ; ಆಕೆಯದು ಗಂಡಂದಿರನ್ನು ಕಳೆದುಕೊಂಡ
ಸತೀಮಣಿಯರೆಲ್ಲರ ಆರ್ತನಾದ. ಮುಂದೆ ಅನ್ಯಾಯಕ್ಕಿದುರು ಆಕೆಯೂ
ಮಗನೂ ನಡೆಸಿದ ಹೋರಾಟ ಲೋಕದೆಲ್ಲ ಸಂತ್ರಸ್ತರ ಹೋರಾಟ.
ಒಸೈರಿಸ್ ಮೃತ್ಯುವನ್ನು ಜಯಿಸಿದ. ಮತ್ತೆ ಐಗುಪ್ತವನ್ನು ಆಳದೆ ಇದ್ದರೂ
ಮೃತರ ಲೋಕದ ಅಧಿಪತಿಯಾದ.
ವರ್ಷ ವರ್ಷ ಆ ನೆನಪು; ನೆನಪು ಹಸುರಾಗಿರಲೆಂದೇ ಒಸೈರಿಸ್ ಕಥೆಯ
ಪುನರಭಿನಯ.

****

ಐಸಿಸ್ ಪಾತ್ರಧಾರಿಣಿ ಅಬ್ಬುವಿನ ದೇವಸೇವಕಿ . ರೂಪಸಿ. ಯುವತಿ.
ಅವಳು ಮಡಿಯುಟ್ಟು ಬಂದಳು. (ಪವಿತ್ರ ಕೊಳದಲ್ಲಿ ಮುಳುಗು ಎದೆಯಿಂದ
ಪಾದಗಳವರೆಗೂ ಮೈಗಂಟಿದ బಟ್ಟೆ.) ಬಿರು ನೋಟ ಬೀರುತ್ತಿದ್ದ ಆಕೆಯ
ಕಣ್ಣುಗಳಲ್ಲಿ ಪತಿವಿಯೋಗದ ಸರ್ವಕಾಲಗಳ ಯಾತನೆ. ನಿದ್ದೆಯಲ್ಲಿ ಚಲಿ
ಸುವವರಂತೆ ನಡಿಗೆ. ಅವಳ ಹಿಂದೆ ಐವರು ಐವರಾಗಿ ಧ್ವನಿ ತೆಗೆದು ರೋದಿ
ಸುವ ಸ್ತ್ರೀಯರು . ಎಲ್ಲರೂ ನಿಧಾನ; ಬಹಳ ನಿಧಾನ. ("ಪೆರೋ ಮತ್ತು
ಮಹಾ ಅರ್ಚಕ ರಾಜಧಾನಿಯಿಂದ ಬರಬೇಕಲ್ಲ.")
ಮುಖ್ಯ ದೇವಸೇವಕ ಗರ್ಭಗುಡಿಯ ಮಗ್ಗುಲು ಕೊಠಡಿಯ ಬಾಗಿಲು
ತೆರೆದ. ದೇವಸೇವಕಿ ದೇವತಾಮೂರ್ತಿಗೆ ಸಾಷ್ಟಾಂಗ ಪ್ರಣಾಮ ಮಾಡಿದಳು.
ದೇವಸೇವಕರು ಕೊಠಡಿಯ ಒಳಹೊಕ್ಕು, ಒಸೈರಿಸನ ಆಭರಣಗಳೂ
ಉಡುಪೂ ಇದ್ದ ಮರದ ಪೆಠಾರಿಗಳನ್ನು ಹೊರತಂದರು. ಒಸೈರಿಸನ ಮೆದುಳು,
ಶ್ವಾಸಕೋಶ, ಕರುಳು, ಇಷ್ಟನ್ನು ಇರಿಸಿದ್ದ ಜಾಡಿಗಳನ್ನು ಹೊರಗಿಟ್ಟರು.
ಕೊನೆಯದಾಗಿ ಕೊಠಡಿಯಿಂದ ತಂದುದು ಮಂಚವನ್ನು. ಆ ಮಂಚದ
ಮೇಲೆ ಮುಚ್ಚಳವಿಲ್ಲದ ಶವ ಪೆಟ್ಟಿಗೆ. ಪೆಟ್ಟಿಗೆಯಲ್ಲಿ ಒಸೈರಿಸ್ ಮೂರ್ತಿ.
ನಿಜ ಆಕಾರ.
ಮಂಚವೂ ಶವದ ಪೆಟ್ಟಿಗೆಯೂ ಕಣ್ಣಿಗೆ ಬಿದ್ದುದೇ ತಡ ಐಸಿಸ್
ಪಾತ್ರಧಾರಿಣಿ ಶೋಕಾರ್ತೆಯಾಗಿ ಕಿರುಚಿದಳು. ಪೆಟ್ಟಿಗೆಯ ಮೇಲೆ ಬೀಳಲು