ಪುಟ:Mrutyunjaya.pdf/೪೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦೦ ಮೃತ್ಯುಂಜಯ

ನಿಲ್ಲಿಸಿ, ಶಿಕ್ಷೆ ವಿಧಿಸಿ, ಐಗುಪ್ತಕ್ಕೆ ತಟ್ಟಿರೋ ಕಳಂಕವನ್ನು ತೊಡೆದು ಹಾಕ್ಬೇಕು.

   ಮೌನದ ಪ್ರತಿಕ್ರಿಯೆ. ಪೆರೋ ಆ ನೀರವತೆಯನ್ನು ಮುಕ್ತಾಯಗೊಳಿಸಿದ.                                                                                                  
   "ಸೆಡ್ ಉತ್ಸವಕ್ಕೇಂತ ಆತನನ್ನು ರಾಜಧಾನಿಗೆ ಕರೆಸಿದ್ದೇವೆ."
   ಮಹಾರಾಣಿ ಸಿಕ್ಕನ್ನು ಬಿಡಿಸಿದಳು: 
   "ಸೆಡ್ ಉತ್ಸವ ಮುಗಿಯಲಿ. ಆಮೇಲೆ ವಿಚಾರಣೆ ನಡೆಸಿದರಾಯ್ತು."
   ಹೇಪಾಟ್ ಏರುದನಿಯಲ್ಲೇ ನುಡಿದ:
   "ಉತ್ಸವದ ದಿವಸ ಅವನನ್ನು ಬಂಧಿಸ್ಬೇಕು ; ಮರುದಿನವೇ ವಿಚಾರಣೆ!"
   ಪೆರೋ ತನ್ನೆಡೆಗೆ ನೋಡುತ್ತಿದ್ದಂತೆ ಅಮಾತ್ಯನೆಂದ :
   "ಆಗಬಹುದು, ಆಗಬಹುದು."
   ಹೇಪಾಟ್‍ಗೆ ಜಯ ಈ ಸುತ್ತಿನಲ್ಲಿ. ಆದರೆ ಈ ಗೆಲುವು ಯಾವ ಶ್ರಮವೂ ಇಲ್ಲದೆ ಲಭಿಸಿತೆಂದು ಆತನಿಗೆ ಅಸಮಾಧಾನ. ಕಂಪಿಸುವ ಸ್ವರದಲ್ಲಿ ಅವನೆಂದ:
  "ಕೇಳಿ! ಹೇಳ್ತೇನೆ! ಮಾತು ಹೊರಗೆ ಹಬ್ಬಿ, ಆ ನೀರಾನೆ ಕ್ರಿಮಿ ಎಲ್ಲಾದರೂ ತಪ್ಪಿಸಿಕೊಂಡರೆ, ಅಮಾತ್ಯರ ಅಧಿಕಾರ ಉಳಿಯೋದಿಲ್ಲ! ದೇಶದಲ್ಲಿ ಕ್ಷೋಭೆ ಉಂಟಾಗ್ತದೆ!"
  ನೆಫರ್ ಟೀಮಳ ಗುಂಡಿಗೆ ಬಡಿತ ತೀವ್ರವಾಯಿತು. ಪೆರೋ ಗದ್ದುಗೆ ಬಿಟ್ಟು ಕೊಟ್ಟು ರಾಜಕುಮಾರ ಪಟ್ಟವನ್ನೇರುವ   ಸಾಧ್ಯತೆ ?.... ಆದರೆ ತನ್ನದೇ ಜಾಡು ಹಿಡಿಯಿತು ಮಹಾ ಅರ್ಚಕನ ಗಂಟಲು....
  "ನೀರಾನೆ ಪ್ರಾಂತದಲ್ಲಿ ದೈವಭೀತಿ ನಾಶವಾಗಿದೆ. ಅಜ್ಞ ಜನ ಸೆತ್‍ನ ಆರಾಧಕರಾಗಿದ್ದಾರೆ. ದೇಶದ ದೃಷ್ಟಿ ಆ ಪ್ರಾಂತದ ಮೇಲೆ ನೆಟ್ಟಿದೆ. అల్లి ನಮಗೆ ಸೋಲಾದರೆ ಇಡೀ ದೇಶ ಅರಾಜಕವಾಗ್ತದೆ. ಬಂಡಾಯ ನಾಯಕನ ವಿಚಾರಣೆ ಮುಗಿಯುತ್ಲೇ ಪ್‍ಟಾದೇವರ ಜತೆ ನಾನು ದಕ್ಷಿಣಕ್ಕೆ ಪ್ರವಾಸ