ಪುಟ:Mrutyunjaya.pdf/೪೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ಆನ್ ನಗರಿಯಿಂದ ರಾಜಧಾನಿಗೆ ಅವರು ಮರಳಿದ ಕ್ಷಣದಿಂದ ಶುಭವೇ ಆಗ್ತಿದೆ. ರಾಜಕುಮಾರ ನಿನ್ನೆ ತನ್ನ ಮೊದಲ್ನೇ ಕಾಡುಬಾತುಕೋಳಿಯನ್ನು ಬೇಟೆಯಾಡಿದ್ದನ್ನು ನಾನು ನಿಮ್ಮ ಗಮನಕ್ಕೆ ತರಬೇಕು. (ಪೆರೋನ ಹುಬ್ಬುಗಳು ಗಂಟಿಕ್ಕಲು ಯತ್ನಿಸಿ ಸುಮ್ಮನಾದವು. 'ನಿನ್ನೆಯೇ ಈ ಸಂಗತಿಯನ್ನು ನನಗೆ ತಿಳಿಸಲಿಲ್ಲವಲ್ಲ ಈಕೆ?') ಮಹಾ ಅರ್ಚಕರು ಅರಮನೆಗೆ ಭೋಜನಕ್ಕೆ ಬಂದಾಗಲೇ ಆ ಬಾತುಕೋಳೀನ ವಿಧ್ಯುಕ್ತವಾಗಿ ಅಡಿಗೆ ಮಾಡ್ತಿರೋದು ಅಪೂರ್ವ ಸಂಯೋಗ. ಧರ್ಮಗುರು ಅರಮನೆಯ ಆತಿಥ್ಯ ಸ್ವೀಕರಿಸಿ ಎಷ್ಟೋ ಕಾಲವಾಯಿತು. ಇವತ್ತು ಇಲ್ಲಿ ಉಂಡು ನಮ್ಮನ್ನು ಧನ್ಯರಾಗಿ ಮಾಡ್ಬೇಕು." ರಾಣಿಯ ನಾದ ಮಾಧುರ್ಯಕ್ಕೆ ಭೇರಿಯ ಪಕ್ಕವಾದ್ಯವಾಯಿತು, ಪೆರೋನ ಮಾತು. " ಎಲ್ಲಿ ರಾಜಕುಮಾರ?" "ಬೇಟೆಯಾಡಿದ ಬಾತುಕೋಳಿಯ ಜತೆ ಅರಮನೆಯ ಮಂದಿರಕ್ಕೆ ಕಳಿಸಿದ್ದೇನೆ- ಪೂಜೆಗೋಸ್ಕರ." ಪೆರೋ ಒಬ್ಬನಿಗೇ ಅಲ್ಲ. ಉಳಿದವರಿಗೂ ಕೇಳಿಸಲೆಂದು ಹೇಳಿದ ಉತ್ತರ ಅದು. ಅಷ್ಟು ಹೇಳಿ, "ನಾನು ಬರಲೇ? ಒಳಗಿನ ಉಸ್ತುವಾರಿಗೆ ಹೋಗ್ಬೇಕು" ಎನ್ನುತ್ತಾ ನೆಫರ್ ಟೀಮ್ ನಿರ್ಗಮಿಸಿದಳು. ಮೌನ ನೆಲೆಸಲು ಅವಕಾಶ ನೀಡದೆ ಹೆಖ್ವೆಟ್ನನ್ನು ಕುರಿತು ಅರಸನೆಂದ: "ಸಿಂಹಾಸನಕ್ಕೆ ನೀವು ಸಲ್ಲಿಸಿದ ಸೇವೆಯನ್ನು ಐಗುಪ್ತ ದೇಶ ಮರಿಬಾರದು. ನಮ್ಮ ಗೋರಿಯಲ್ಲಿ ನಿಮ್ಮ ಚಿತ್ರವನ್ನೂ ಬರಸಲು ಆಗಲೇ ಒಪ್ಪಿಗೆ ನೀಡಿದ್ದೇನೆ. (ಕುಳಿತಲ್ಲಿಂದಲೇ ಧನ್ಯವಾದ ಸೂಚಕವಾಗಿ ಪೆರೋಗೆ ಹೆಖ್ವೆಟ್ ವಂದಿಸಿದ. ಅರಸ ಅಮಾತ್ಯನತ್ತ ಹೊರಳಿದ.) ಮಹಾ ಅರ್ಚಕರು ಅರಮನೆ ಮಂದಿರಕ್ಕೆ ಸಂದರ್ಶನ ನೀಡಬಹುದು. ಅರಮನೆಯ ವಿಸ್ತರಣದಲ್ಲಿ ನಾವು ಮಾಡಿರೋ ಸುಧಾರಣೆಗಳನ್ನು ಅವರು ನೋಡಲಿ. (ಸಿಂಹಾಸನದಿಂದ