ಪುಟ:Mrutyunjaya.pdf/೪೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ಏಳುತ್ತ ಮಹಾ ಅರ್ಚಕನತ್ತ ತಿರುಗಿ) ಭೋಜನದ ವೇಳೆ ಭೇಟಿಯಾಗೋಣ." ಆಮೆರಬ್, ಹೇಪಾಟ್, ಹೆಖ್ವೆಟ್- ಮೂವರೂ ಎದ್ದರು. ಮಹಾರಾಣಿ ಹೋದ ದಿಕ್ಕನ್ನು ಅನುಸರಿಸಿ ಅರಸ ಹೊರನಡೆದ. ಹೆಖ್ವೆಟ್ ಸಂತುಷ್ಟ, ತಾನು ಅಮಾತ್ಯನಾಗದಿದ್ದರೇನಾಯಿತು? ಅಮಾತ್ಯನ ಸಮಾನ- ಅಥವಾ ಆತನಿಗಿಂತಲೂ ದೊಡ್ಡವನು- ಎನ್ನುವ ರೀತಿಯಲ್ಲಿ ನಡೆದುಕೊಳ್ಳಲು ಅವಕಾಶ ದೊರೆಯಿತಲ್ಲ? ಸದಾ ಕಾಲವೂ ಜನ ನೆನಪಿಡಲು ಯೋಗ್ಯವಾದ ಮಾತುಗಳನ್ನು ತಾನು ಆಡಿದ್ದೆ.... ಆಮೆರಬ್ ಗೆ ಸಾಕಷ್ಟು ಸಮಾಧಾನ. ಪರಿಸ್ಥಿತಿ ಇನ್ನಷ್ಟು ಬಿಟ್ಟಿದ್ದರೆ ದೇಶಕ್ಕೆ ಘೋರ ವಿಪತ್ತು ಒದಗುತ್ತಿತ್ತು. ವೈಯಕ್ತಿಕವಾಗಿ ತಾನೂ ಸಂಕಷ್ಟಕ್ಕೆ ಸಿಲುಕುತ್ತಿದ್ದೆ... ಮಹಾ ಅರ್ಚಕನಿಗೆ ತಕ್ಕಮಟ್ಟಿನ ತೃಪ್ತಿ. ಆತ ಯೋಚಿಸಿದ: ತಾನು ಬಲಶಾಲಿ ಎಂಬುದನ್ನು ತೋರಿಸಿಕೊಟ್ಟಿದ್ದಾಯಿತು; ನೀರಾನೆ ಪ್ರಾಂತವನ್ನು ಬಗ್ಗು ಬಡಿದಮೇಲೆ ತನ್ನ ಹಿರಿಮೆ ಅಬಾಧಿತ; ಟೆಹುಟಿಗೆ ನಿರಾಶೆಯಾಗಬಹುದು; ಇನ್ನೂ ಸ್ವಲ್ಪ ಕಾಲ ಆತ ಕಾಯಲಿ.... ಹತ್ತು ಸಹಸ್ರ ದಾಸದಾಸಿಯರನ್ನೂ ಹತ್ತು ಸಹಸ್ರ ದೆಬೆನ್ ಬಂಗಾರವನ್ನೂ ಮಹಾಮಂದಿರಕ್ಕೆ ಅರಮನೆ ನೀಡಬೇಕು; ಸೆಡ್ ಉತ್ಸವದ ಸಂಬಂಧದ ಕಾಣಿಕೆ ಅಂತ ಕೊಡಲಿ.... ಅಮಾತ್ಯ ಹೇಪಾಟ್ ಗೆ ಹೇಳಿದ: "ಉತ್ಸವದ ಸಿದ್ಧತೆಯ ಬಗ್ಗೆ ಚರ್ಚಿಸಬೇಕಲ್ಲ? ಅಮಾತ್ಯ ಭವನಕ್ಕೆ ಹೋಗೋಣ. ಅರ್ಚಕ ಇನೇನಿಯನ್ನು ಕರೆಸ್ತೇನೆ. ಆಮೇಲೆ ಅವರೊಂದಿಗೆ ಮಂದಿರಕ್ಕೆ ಭೇಟಿ ನೀಡುವಿರಂತೆ." "ಸರಿ," ಎಂದ ಮಹಾ ಅರ್ಚಕ. ಅಮಾತ್ಯ ಹೆಖ್ವೆಟ್ ನನ್ನು ಕರೆಯದಿದ್ದರೂ ಈತ ಅವರನ್ನು ಹಿಂಬಾಲಿಸಿದ. ೦ ೦ ೦ ೦ ಅಮಾತ್ಯ ಭವನದ ಲಿಪಿಕಾರ ಸೆನೆಬ್ ಬೆಳಿಗ್ಗೆ ಒಮ್ಮೆ ಅತಿಥಿ ಗೃಹಕ್ಕೆ