ಧಾವಿಸಿದಳು. ಎದೆಗೆ ಹೊಡೆದುಕೊಂಡಳು. ಹಣೆಯನ್ನು ಮಂಚದ ಅಂಚಿಗೆ ಜಪ್ಪಿಸಿದಳು. ನೆಲದ ಮೇಲೆ ಬಿದ್ದು ಹೊರಳಾಡಿದಳು.
ದೇಗುಲದ ಮಹಾ ದ್ವಾರದ ಬಳಿ ಗಾಯಕರು ಶೋಕದ ಶ್ರುತಿ ಹಿಡಿ ದರು. ತಂತಿ ವಾದ್ಯಗಳನ್ನು ಮೀಟಿದರು.
ದೇವಸೇವಕಿಯ ಒಡನಿದ್ದ ಶೋಕಸ್ತ್ರೀಯರಲ್ಲದೆ ಕಟಾಂಜನದ ಆಚೆ ನೆರೆದಿದ್ದವರಿಂದಲೂ ಹಾಹಾಕಾರ ಹೊರಟಿತು.
ಪ್ರಲಾಪ ಕೇಳಿಸಿತು :
ಓ ಒಸೈರಿಸ್, ಓ ಒಸೈರಿಸ್..
ಮುಖ್ಯ ದೇವಸೇವಕನ ಹಿರಿತನದಲ್ಲಿ, ಒಸೈರಿಸನ ಪಾರ್ಥಿವ ಶರೀರ ದಿಂದ ಶವ ಪಟ್ಟಿಗಳನ್ನು ಬಿಚ್ಚಿದರು; ಸ್ನಾನ ಮಾಡಿಸಿದರು; ಸುಗಂಧ ದ್ರವ್ಯಗಳನ್ನು ಲೇಪಿಸಿದರು.ಹೊಸ ಬಟ್ಟೆಗಳನ್ನು ಸುತ್ತಿ ಮತ್ತೆ ಪೆಟ್ಟಿಗೆಯ ಇಟ್ಟರು. ಅಪರಾಹ್ನ ನಡೆಯುವ ಅಂತಿಮ ಯಾತ್ರೆಗೆ ಮಂಚವನ್ನು ಅಣಿ ಗೊಳಿಸಿದರು.
ಮುಂದೆ ತುಸುಹೊತ್ತಿನಲ್ಲಿ, ಮೆಂಫಿಸಿನಿಂದ ಆಗಮಿಸಿದ ಪೆರೋ ಪರಿ ವಾರವೂ ಮಹಾ ಅರ್ಚಕನ ಬಳಗವೂ ದೇಗುಲ ತಲಪಿದುವು. ಮಂದಿರದ ಮಗ್ಗುಲಿನ ವಿಶ್ರಾಂತಿ ಕೊಠಡಿಗಳಲ್ಲಿ ಅವರು ಸ್ವಲ್ಪ ಹೊತ್ತು ತಂಗಿದರು.
....ಮುಲು ಮುಲು ಅಳುತ್ತ ಮಂಚದ ಕಾಲಿಗೊರಗಿ ಕುಳಿತ ಐಸಿಸ್, ರೋದನದ ಹಿಮ್ಮೇಳವನ್ನು ಮುಂದುವರಿಸಿದ ಶೋಕಸ್ತ್ರೀಯರು ; ದುಃಖಾ ಲಾಪದ ಶ್ರುತಿ ಹಿಡಿದ ಗಾಯಕರು; ಬಿಸಿಲಿನ ಪರಿವೆ ಇಲ್ಲದೆ ಕಟಕಟೆಗೆ ಆತು ನಿಂತ ಜನರು.
ಪವಿತ್ರ ಕೊಳದಲ್ಲಿ ಮಿಂದು, ಬರತೊಡಗಿದ ಮಹಾ ಅರ್ಚಕ ಹೇಪಾಟ್ ಮತ್ತು ಪೆರೋ ಪೇಪಿ....
ಮಂದಿರವನ್ನು ಅವರು ಸಮಾಪಿಸಿದಂತೆ ಪ್ರಲಾಪ ತೀವ್ರಗೊಂಡಿತು :
“ಓ ಒಸೈರಿಸ್, ಓ ಒಸೈರಿಸ್....
ಗರ್ಭ ಗುಡಿಯ ದೇವತಾ ಮೂರ್ತಿಗೆ ಪ್ರಣಾಮ ಮಾಡಿ ಮಹಾ ಅರ್ಚಕ ಎದ್ದ. ಅದೇ ಆಗ ಮಹಾದ್ವಾರವನ್ನು ಹೊಕ್ಕ ಪೆರೋಗೆ ಉಚ್ಚ ಕಂಠದಲ್ಲಿ ಸ್ವಾಗತ ಬಯಸಿದ :