ಪುಟ:Mrutyunjaya.pdf/೪೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೪೦೭. ಗಳಲ್ಲೊ ಮನೆಗಳಲ್ಲಾ ಅರ್ಚಿಸಲ್ಪಡುವ ಸಹಸ್ರಾರು ದೇವತಾ ಮೂರ್ತಿಗಳು, ಸಹಸ್ರ ಸಹಸ್ರ ದೇವಸೇವಕ, ದೇವಸೇವಕಿಯರು, ಎಷ್ಟೋ ಸಹಸ್ರ ದಾಸ ಜನ, ಅಪಾರ ಧನಕನಕ-ಇಷ್ಟೆಲ್ಲಕ್ಕೊ ಜವಾಬುದಾರ ಈತ. ಧರ್ಮಗುರು ಪ್ರಸನ್ನನಾಗಬೇಕೆಂದು ರಾಜವಂಶ ಹಾತೊರೆಯುತ್ತದೆ. ಅವನ ಆಶ್ರಯಕ್ಕಾಗಿ ಭೂಮಾಲಿಕರು ಬಾಯಿ ಬಿಡುತ್ತಾರೆ, ಹಾಗೆ ಯೋಚಿಸುತ್ತ ಮೆನೆಪ್ ಟಾಗೆ ಅನಿಸಿತು: ಸಮಾಜವನ್ನು ಬಿಗಿಯಾಗಿ ಹಿಡಿದಿರುವ ಶಕ್ತಿಗಳು ಮೂರು -ಸಮಿಾಪದಿಂದ ಭೂಮಾಲಿಕ ಗಣ, ದೂರದಿಂದ ಪೆರೋ ಮತ್ತು ಮಹಾ అರ್ಚಕ.... (ಅತಿಥಿಗೃಹವನ್ನು ಸವಿಾಪಿಸಿದಾಗ ಮಹಾ ಅರ್ಚಕನ ಹಿಂದಿದ್ದ ಇನೇನಿ ಮುಂದಕ್ಕೆ ಕತ್ತು ಚಾಚಿ ಹೇಪಾಟ್ ನ ಕಿವಿಯಲ್ಲಿ ಏನನ್ನೋ ಉಸುರಿದ್ದ. ಅದು ಕೇಳಿಸದವನಂತೆ ಮಹಾ ಅಚಕ ಸುಮ್ಮನಿದ್ದ.ಮಗ್ಗುಲು ಕಟ್ಟಡದಲ್ಲಿ ಮೆನೆಸ್ಟಾ ಇದ್ದಾನೆ ಅಂತ ಇನೇನಿ ಹೇಳಿರಬಹುದೆ? ಎನಿಸಿತು. ನೀರಾನೆ ಪ್ರಾಂತದ ನಾಯಕನಿಗೆ. ವಾಸ್ತವವಾಗಿ ಅದು ಸರಿಯಾಗಿದ್ದ ಊಹೆ. ಆದರೆ ಹೇಪಾಟ್ ಅತಿಥಿಗೃಹದತ್ತ ನೋಡಿರಲಿಲ್ಲ, ಏನೇ ಇರಲಿ, ಅಬ್ಟು ಜಾತ್ರೆಯಲ್ಲಿ ಕಂಡಷ್ಟು ಭೀಕರನಾಗಿ ಮಹಾ ಅರ್ಚಕ ಈಗ ಕಾಣಿಸಲಿಲ್ಲ, ಮೆನೆಸ್ಟಾಗೆ. ವಾತಾವರಣ ಕಾರಣವಿರಬೇಕು ಎಂದುಕೊಂಡ.) ಔಟ ಅತಿಥಿಗೃಹದ ಒಬ್ಬ ಪರಿಚಾರಕನನ್ನು ಕೇಳಿದ: “ಇವತ್ತು ಅರಮನೆ ಭೋಜನ ಆ ದೊಡ್ಡವರಿಗೆ ಮಾತ್ರ ಅಲ್ಲವಾ ?” “ಹೌದು ಹೌದು. ಬೇರೆಯವರಿಗೆಲ್ಲ ಸಾಮಾನ್ಯ ಅಡುಗೆ. ಆದರೆ ಅವರು ಹೊರಡೋವರೆಗೆ ನಾವು ಕಾಯ್ಬೇಕು,ಎಂದು ಉತ್ತರ ಬಂತು.

  • * * *

ಆರಸಿ ನೆಫರ್ ಟೀಮ್ ಭೋಜನಕ್ಕೆ ಮುನ್ನ ಮಹಾ ಅರ್ಚಕನನ್ನು ರಾಣೀವಾಸಕ್ಕೆ ಕರೆದೊಯ್ದು, ರಾಜಕುಮಾರನಿಗೆ ಆಶೀರ್ವಾದ ಕೊಡಿಸಿದಳು. “ಯುದ್ಧ ಶಿಕ್ಷಣ ಆರಂಭಿಸ್ಬೇಕು. ಇದರ ಜವಾಬ್ದಾರಿಯನ್ನು ಸೇನಾನಿ ಅಮೆನೊಮೆಪೆಟ್ಗೆ ವಹಿಸೋಣಾಂತಿದ್ದೀನಿ,” ಎಂದಳು ಮಹಾರಾಣಿ.