ಪುಟ:Mrutyunjaya.pdf/೪೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦೮ ಮೃತ್ಯುಂಜಯ “ಒಳ್ಳೆ ವಿಚಾರ” ಎಂದು ಹೇಪಾಟ್ ಸಮ್ಮತಿ ಸೂಚಿಸಿದ: “ಸೆಡ್ ಉತ್ಸವಕ್ಕೆ ಅವನು ಹೇಗೂ ಬರ್ತಾನಲ್ಲ . ಆಗ ಹೇಳಬಹುದು,” ಎಂದು ಮಾತು ಸೇರಿಸಿದ. ಆರು ಜನರ ಊಟ ಸುಸೂತ್ರವಾಗಲು ನೂರು ಜನ ಓಡಾಡಿದರು. ದೊಡ್ಡವರ ಜತೆ ಕುಳಿತವನು ರಾಜಕುಮಾರನೊಬ್ಬನೇ.ಅವನ ಅಕ್ಕಂದಿರು ತಮ್ಮ ವಸತಿ ಭಾಗದಲ್ಲೇ ಭೋಜನ ಸ್ವೀಕರಿಸಿದರು. ಬಂಗಾರದ ತಟ್ಟೆ ಬಟ್ಟಲು. ಬಂಗಾರದ ಮಧು ಪಾತ್ರೆಗಳು. ತ್ರಿಕೋನ ತಂತೀ ವಾದ್ಯ ಹೊರಡಿಸುತ್ತಿದ್ದ ಸ್ವರ ತರಂಗದ ಹಿನ್ನೆಲೆ. ಹೊಟ್ಟೆ ತುಂಬಾ ಉಂಡವರು ಹೇಪಾಟ್ ಮತ್ತು ಹೆಬ್ಸೈಟ್ ಇಬ್ಬರೇ. ರಾಜಕುಮಾರ ಬೇಟೆಯಾಡಿದ ಬಾತುಕೋಳಿಯ ಅಡುಗೆ ರುಚಿಕರವಾಗಿತ್ತು. ಇವರಿಗೆಲ್ಲ ಬಡಿಸಿದ ಮೇಲೆ ತನಗೆ ಸಿಗುವುದು ಸ್ವಲ್ಪ ಮಾತ್ರಾ ಎಂದು ರಾಜಕುಮಾರ ಭಾವಿಸಿದ್ದ. ವಾಸ್ತವವಾಗಿ ಆತನಿಗೆ ಇತರರಿಗಿಂತ ತುಸು ಹೆಚ್ಚೆ ಬಡಿಸಿದ್ದರು. ಆದರೆ ಒಂದು ತುತ್ತು ಸವಿದಮೇಲೆ, ಇಷ್ಟೇ ಸಾಕು ಎನಿಸಿತು. ಭೋಜನದ ವೇಳೆ ಅರಮನೆ-ಗುರುಮನೆ ಸಂಬಂಧದ ಮಾತು ಹೊರಡ ಲಿಲ್ಲ ಎಂದು ಮಹಾರಾಣಿಗೆ ಸಮಾಧಾನ. ಮುಂದುವರಿಯುತ್ತಿದ್ದ ಗೋರಿ ನಿರ್ಮಾಣ ಕಾರ್ಯ, ರಚಿತವಾಗಿದ್ದ ಭಿತ್ತಿಚಿತ್ರಗಳು, ತಗಡು ತಾಮ್ರಗಳ ಮಿಶ್ರಣದಲ್ಲಿ ಪ್ರಯೋಗಗಳನ್ನು ನಡೆಸಿ ಬಲಿಷ್ಟ ಲೋಹವನ್ನು ಪಡೆಯುವ ವಿಧಾನ, ಬಂಗಾರದ ಆಭರಣಗಳ ತಯಾರಿಯಲ್ಲಿ ಅಸ್ಸೀರಿಯದ ಅಕ್ಕಸಾಲಿಗರ ಕೌಶಲ-ಇವನ್ನು ಕುರಿತು, ಉಣ್ಣುವುದರ ಜತೆಗೆ ಚೊರುಪಾರು ಸಂಭಾಷಣೆ ನೆಡೆಯಿತು. ಆಭರಣಗಳ ಮಾತು ಬಂದಾಗ ನೆಫರ್ ಟೀಮ್ ಅಂದಳು: “ಅಸ್ಸೀರಿಯದ ಅಕ್ಕಸಾಲಿಗರು ನಿರ್ಮಿಸಿರೋ ಹೊಸ ನಮೂನೆಗಳನ್ನು ತರುತ್ತೇನೆ ಅಂತ ವರ್ತಕ ಕೆಫ್ಟು ಹೇಳಿದ್ದಾನೆ.” ಬರಿದಾಗಿದ ಪಾತ್ರೆಗೆ ಸೇವಕರು ಮಧು ಸುರಿಯುತ್ತಿದ್ದಂತೆ,ಹೆಖ್ವೆಟ್ ತೊದಲುತ್ತ ನುಡಿದ: “ಕೆಫ್ಟೂನ ಸಹಾಯದಿಂದಲೇ ನೀರಾನೆ ಬೇಟೆ ಸಾಧ್ಯವಾಗಿರೋದು.” ಮಹಾ ಅರ್ಚಕನೆಂದ: “ಈ ಮಾತೆಲ್ಲ ನನಗೆ ಇಷ್ಟವಾಗೋದಿಲ್ಲ. ಬೆಳಿಗ್ಗೆಯೇ ಹೇಳಿದ್ದೇನೆ.ಆ