ಪುಟ:Mrutyunjaya.pdf/೪೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೧೦ ಮೃತ್ಯುಂಜಯ “ಹೊಂ."

“ಗೋರಿದರೋಡೆಗಾರ ಜಜಮಂಖ ಮತ್ತು ಅವನ ಇಬ್ಬರು ಸಂಗಡಿ ಗರನ್ನೂ ಸೇರಿಸಿ ಒಟ್ಟು ನೂರ ಎಂಬತ್ತೆಂಟು ಜನ ಇದಾರೆ, ಅಲ್ಲವಾ?”

“ಹೌದು. ಆದರೆ ಅವರಲ್ಲಿ ಹತ್ತಿಪ್ಪತ್ತು ಜನ ಹೋಗ್ತಾರೋ ಇಲ್ಲವೋ. ವಯಸ್ಸಾಗಿದೆ. ದುಡಿಯೋದಕ್ಕಾಗಲೀ ಮತ್ತೆ ಅಪರಾಧ ಎಸಗೋದಕ್ಕಾಗಲ್ಲಿ ಅವರಿಗೆ ಶಕ್ತಿ ಸಾಲದು.” “ನಾವು ಏನೂ ಮಾಡುವಂತಿಲ್ಲ, ಸೆಡ್ ಉತ್ಸವದ ನಿಮಿತ್ತ ಎಲ್ಲ ಕೈದಿಗಳ ಬಿಡುಗಡೆ ಆಗಲೇಬೇಕು, ಆ ಬೆಳಗ್ಗಿನಿಂದ ಕೈದಿಗಳ ಆಹಾರಕ್ಕಾಗಿ ಉಗ್ರಾಣದಿಂದ ಧಾನ್ಯ ಸರಬರಾಜು ಮಾಡೋದಿಲ್ಲ.” ಅಪ್ಪಣೆ ಎನ್ನುವಂತೆ ಆ ಅಧಿಕಾರಿ ಬಾಗಿ ವಂದಿಸಿದ :

ಇನೇನಿ ಅಮಾತ್ಯರನ್ನು ಕಾಣಲು ಬಂದ. 

“ಇವತ್ತು ಸಂಜೆಯ ಪೂಜೆ ಆದ್ಮೇಲೆ ನಾನು ಮಹಾಮಂದಿರಕ್ಕೆ ಹೋಗ್ತೇನೆ.ಬರಹೇಳಿದ್ದಾರೆ," ಎಂದ. "ಆಗಲಿ".

“ಸೆಡ್ ಉತ್ಸವದ ವರೆಗೂ ನಾನು ಅಲ್ಲಿಯೇ ಇರಬೇಕಂತೆ. ಮಹಾ ಅರ್ಚಕರಿಗೆ ಸಹಾಯ ಮಾಡ್ಬೇಕಂತೆ. ಅರಮನೆ ಮಂದಿರದಲ್ಲಿ ಪೂಜೆಗಾಗಿ ಹದಿನೈದು ದಿನಗಳ ಮಟ್ಟಿಗೆ ಬೇರೆ ದೇವಸೇವಕರನ್ನು ಕಳಿಸ್ತಾರಂತೆ.”

" ವೇದ್ಯವಾಯಿತು ಎನ್ನುವಂತೆ ಆಮೆರಬ್ ತಲೆ ಆಡಿಸಿದ.

ಬಳಿಕ ಅರಮನೆಯ ರಕ್ಷಕ ಭಟರ ದಳಪತಿಯೊಡನೆ ಅಮಾತ್ಯ ಮಾತನಾಡಿದ :

“ಕಿವಿ ಅಗಲಿಸಿ ಕೇಳು. ಸೆಡ್ ಉತ್ಸವದ ವರೆಗೆ ಆ ನೀರಾನೆ ಪ್ರಾಂತದ ನಾಯಕನನ್ನು ಹೊರಗಿನವರು ಯಾರೂ ಬಂದು ನೋಡಬಾರದು. ಆತ ಹೊರಗೆ ಹೋಗಲೂ ಬಾರದು. ಅಂಗರಕ್ಷಕರು ಬೇಕಾದರೆ ಓಡಾಡಲಿ. ಯಾಕೆ ಏನು ಅಂತ ಅವನು ಕೇಳಿದರೆ, ನಿಮ್ಮ ರಕ್ಷಣೆಗಾಗಿ ಅಮಾತ್ಯರು ಈ ಆ‍‍‍ಜ್ಘೆ ಮಾಡಿದ್ದಾರೆ ಅನ್ನು ಬಾಕಿ ವಿಷಯಗಳಲ್ಲಿ ಗೌರವದಿಂದಲೇ ವರ್ತಿಸು. ಆತ ನೇನಾದರೂ ಅತಿಥಿಗೃಹದಿಂದ ಅದೃಶ್ಯನಾದರೆ ನಿನ್ನನ್ನು ಕಾರಾಗೃಹಕ್ಕೆ ಕಳಿಸ್ತೇನೆ, ಕೇಳಿಸ್ತಾ ?”