ಪುಟ:Mrutyunjaya.pdf/೪೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಮ್ರುತ್ಯುಂಜಯ ೪೧೧

   ಅಮಾತ್ಯನ ಮುಂದೆ ದಳಪತಿ ಮಂಡಿಯೂರಿ ನಮಿಸಿದ.
   ಸಂಜೆ ಆಮೆರಬ್ ಅರಮನೆಯಿಂದ ಹೊರಟ ಮೇಲೆ ಸೆನೆಬ್ ಇನೇನಿಯ ಬಳಿಗೆ ಧಾವಿಸಿದ. 
   ದಳಪತಿಗೆ ಅಮಾತ್ಯ ಮಾಡಿದ ಆಜ್ಞೆಯನ್ನು ತಿಳಿಸಿ, “ಏನು ಹಾಗಂದರೆ?”

ಎಂದು ಕೇಳಿದ.

    ಇನೇನಿ ತಲೆಯಾಡಿಸಿದ.
   "ಬಹಳ ಗೋಷ್ಯ. ಬಹಳ ಗೋಷ್ಯ. ಮಹಾ ಅರ್ಚಕರು ನನಗೂ ಹೇಳಿಲ್ಲ. ಏನೋ ಇರಬೇಕು. ಗೆದ್ದದ್ದಂತೂ ಗುರುಮನೆಯೇ. ಸಂಶಯವಿಲ್ಲ."
  "ಟೆಹುಟಿ ಅಮಾತ್ಯರಾಗ್ತಾರಾ?"
  “ಹ್ಯಾಗೆ ಹೇಳೋಕಾಗ್ತದೆ? ನೀನು ಇಲ್ಲದ್ದೆಲ್ಲ ತಲೇಲಿ ಹಾಕ್ಕೊಂಡು ಇರೋ ಹುದ್ದೇನೂ ಕಳಕೋಬೇಡ."
  ಸೆನೆಬ್ ಸಣ್ಣನೆ ನಕ್ಕು. ಸಿಕ್ಕುಗಳು ಹಾಗೆಯೇ ಉಳಿದು ತಲೆ ನೋಯ ತೊಡಗಿತು. ಆತ ರಾಣೀವಾಸದತ್ತ ಸುಳಿದ ನೆಫರ್ ಟೀಮ್ ಅಮಾತ್ಯನ ಆಜ್ಞೆಯ ವಿಷಯ ಕೇಳಿ."ಸಾಮಾನ್ಯ ಆದೇಶ. ರಕ್ಷಣೆಗೆ ಮೊದಲೇ ಏರ್ಪಾಟು ಮಾಡ್ಬೇಕಾಗಿತ್ತು . ಆ ನಾಯಕನಿಗೆ ಏನಾದರೂ ಆದರೆ ಅಮಾತ್ಯರಿಗೆ ಅಪಾಯ ಅಲ್ಲವಾ?” ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿ, ಸೆನೆಬ್ ನನ್ನು ಕಳುಹಿಸಿಬಿಟ್ಟಳು.
  ಲಿಪಿಕಾರ ಅತಿಥಿಗೃಹಕ್ಕೆ ಹೋದ. ಬಳಸಿ,ಬಳಸಿ ನೀರಾನೆ ಪ್ರಾಂತದ ನಾಯಕನಿಗೆ ವಿಷಯ ತಿಳಿಸಿದ. ಮನೆ ಟಾ ಮುಗುಳುನಕ್ಕ. ಏನನ್ನೂ ಹೇಳಲಿಲ್ಲ.
  (ಎದೆಗುದಿ ನಾಯಕನಿಗೆ. ಸೆಡ್ ಉತ್ಸವ ನಡೆಯುತ್ತದೆನ್ನುವುದು ಸಮಾಧಾನದ ವಿಷಯ. ಇನ್ನು ಹದಿನೈದು ದಿನ. ఆ ಬಳಿಕ ಹಕ್ಕಿಯ ವೇಗದಲ್ಲಿ ನೀರಾನೆ ಪ್ರಾಂತಕ್ಕೆ ನಾನು ಹಾರಿ ಹೋಗಬೇಕು. ಆದರೆ ಈ ರಕ್ಷಣೆಯ ಮಾತು ? ಒಂದು ಬಗೆಯದಿಗ್ಬಂಧನ? ಬೆಳಿಗ್ಗೆ ಅರಮನೆಯಲ್ಲಿ ನಡೆದ ಸಂಧಾನದ ನಿಜವಿವರಗಳು ಸೆನೆಬ್ ಗೆ ತಿಳಿದಂತಿದೆ ಅಥವಾ,ರಹಸ್ಯದ್ದು ಮಹತ್ವದ್ದು ಏನೂ ಇಲ್ಲ ಎಂದೆ?ಹಾಗಾದರೆ ತನ್ನ  ತ್ತಲೂ ಮುಳ್ಳು ಬೇಲಿ ಯಾಕೆ ? ಇದಕ್ಕೆ ಹೆದರಬೇಕೆ ತಾನು ? ಮೆನ್ನನಿ ನಾದರೂ ಗೊತ್ತಿರ