ಪುಟ:Mrutyunjaya.pdf/೪೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೪೧೨ ಮ್ರುತ್ಯುಂಜಯ

ಬಹುದು. ಆತ ತನ್ನನ್ನು ಭೇಟಿ ಮಾಡುವುದು ಕೂಡಾ ಸಾಧ್ಯವಾಗುತ್ತದೋ ಇಲ್ಲವೋ ?)
  ಹತ್ತಾರು ಭಟರು ಕೈಗಳಲ್ಲಿ ಈಟಿ ಹಿಡಿದು ಅತ್ತಿತ್ತ ಚಲಿಸುವುದು ಮೆನೆಪ್ ಟಾಗೆ ಕಾಣಿಸಿತು.ಎದೆಗುಂಡಿಗೆಯ ಬಡಿತ ತೀವ್ರಗೊಂಡಿತು, ಒಂದು ಕ್ಷಣ. ಶಾಂತ ಚಿತ್ತನಾಗಿರಲು ಅವನು ಯತ್ನಿಸಿದ.
  ಅತಿಥಿಗೃಹದಿಂದ ಹೊರಟು ಸೆನೆಬ್ ನೀರಾನೆ ಪ್ರಾಂತದ ಭೂಮಾಲಿಕ ನುಟ್ ಮೋಸ್ ನಲ್ಲಿಗೆ ಧಾವಿಸಿದ. ಮಧ್ಯಾಹ್ನದ ಭೋಜನದಲ್ಲಿ ದೊಡ್ಡವರು ಎಷ್ಟು ವರ್ಷ ಹಿಂದಿನ ದ್ರಾಕ್ಷಾಸುರೆಯನ್ನು ಕುಡಿದರೊ ? ರಾಜಕುಮಾರ ಬೇಟಿಯಾಡಿದ ಬಾತುಕೋಳಿಯ ಆಡುಗೆ. ಅದೇನೂ ತನಗೆ ಬೇಕಿರಲಿಲ್ಲ.ಆದರೆ ಒಂದಿಷ್ಟು ಒಳ್ಳೆಯ ಸುರೆ....ಅರಮನೆಯ ದಳಪತಿಗೆ ಅಮಾತ್ಯ ನೀಡಿದ ಅನುಜ್ಞೆಗೆ ಉಪ್ಪುಖಾರ ಹಚ್ಚಿ ನುಟ್ ಮೋಸ್ ಗೆ ತಿಳಿಸಬೇಕು. ಆಗ ಆತ ಸಂತುಷ್ಟನಾಗುತ್ತಾನೆ. ಹೊರಬರುತ್ತವೆ ಮದಿರೆಯ ಬಟ್ಟಲುಗಳು.ಬ
   ಸೆನೆಬ್  ಸರಿಯಾಗಿಯೇ ತರ್ಕಿಸಿದ್ದ, ನುಟ್ ಮೋಸ್ ಹರ್ಷಾ ತಿರೇಕದಿಂದ ಕುಣಿದಾಡಿದ. “ಕಾರಾಗ ಹಕ್ಕೆ ತಳ್ಬೇಕು ಕತ್ತೆಮಗನನ್ನು,” ಎಂದ.
   ಮದಿರೆಯ ಬಟ್ಟಲುಗಳು ಹೊಗ ಂದುವು.
   *                 *              *                   *
    ಕತ್ತಲಾದ ಮೇಲೆ ಇನೇನಿ  ಕೈಯಲ್ಲಿ ಬಟ್ಟೆಯ ಚಿಕ್ಕ ಗಂಟು ಹಿಡಿದು ಹೊರಟುದನ್ನು ಔಟ ನೋಡಿದ. ಮೆನೆಪ್ ಟಾನ ಸೂಚನೆಯಂತೆ ಆತ ಮೆನ್ನ ನನ್ನು ಕಾಣಲು ಮಂದಿರಕ್ಕೆ ಹೋದ.
   ಮೆನ್ನನ ನೆರವು ಪಡೆದ ನೀರಾನೆ ಪ್ರಾಂತಕ್ಕೆ ಸುದ್ದಿ ಮುಟ್ಟಿಸುವ ತವಕ ನಾಯಕನಿಗೆ.
   ಕತ್ತಲೆಯ ಮರೆಯ ಮೆನ್ನ, ಉದ್ವಿಗ್ನತೆಯನ್ನು ಪ್ರಯತ್ನಪೂರ್ವಕವಾಗಿ ಹತ್ತಿಕ್ಕುತ್ತ, ಪಿಸ ನುಡಿದ :
   “ರಕ್ಷಕರ ಕಣ್ಣು ತಪ್ಪಿಸಿ ಬರೋದಕ್ಕೆ ಎರಡು ಸల ನೋಡ್ದೆ.ಆಗಲಿಲ್ಲ. ಇನೇನಿ ಇಲ್ಲ. ಸೆಡ್ ಉತ್ಸವದವರೆಗೆ ಬೇರೆ ಅರ್ಚಕರು ಪೂಜೆ ಮಾಡ್ತಾರೆ.