ಪುಟ:Mrutyunjaya.pdf/೪೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಮ್ರುತ್ಯುಂಜಯ ೪೧೩ ನೀವು ದಿನವೂ ಬೆಳಿಗ್ಗೆ ಒಮ್ಮೆ ರಾತ್ರೆ ಒಮ್ಮೆ ಇಲ್ಲಿಗೆ ಬರ್ತಿರಿ. ಪ್ರತಿಬಂಧ ನಿಮ್ಮ ನಾಯಕರಿಗೆ ಮಾತ್ರ.”

    “ಸೆಡ್ ಉತ್ಸವ ಗೊತ್ತಾಗಿರೋ ಸಂಗತಿ ನಮ್ಮ ಪ್ರಾಂತದವರಿಗೆ ತಿಳಿಸಬೇಕಲ್ಲ....” 
    “ಹೌದು. ಅದು ನನ್ನ ಜವಾಬ್ದಾರಿ. ಬಟಾ ಬೇಗ್ನೆ ಇಲ್ಲಿಗೆ ವಾಪಸಾಗ್ಬೇಕು. ಆ ಕಡೆ ಹೋಗೋ ದೋಣಿಗಳಿರಬಹುದು. ಕಟ್ಟೆಗೆ ಹೋಗಿ ನೋಡ್ತೇನೆ.”
    "ನಾಳೆ ಬೆಳಿಗ್ಗೆ ಬರ್ತೇನೆ, ಹಾಗಾದರೆ.”
    “ಹ್ಞ. ದೇವರ ದರ್ಶನಕ್ಕೆ ಬನ್ನಿ”
  *                        *                 *                     *
     ನದಿಯ ಅಂಚಿಗೆ ಹೋಗಬೇಕು. ದ್ವಾರಪಾಲಕರು. ಬಿಡಲಾರರು. ತಾನು ಲಬೊ ಲಬೊ ಎಂದು ಗೋಳಾಡಿದರೂ ಬಾಗಿಲು ತೆರೆಯದಿದ್ದರೆ ? ಮೆನ್ನನಿಗೆ ಕಸಿವಿಸಿ.
    ಮಂದಿರದ ಬಲದಿಕ್ಕಿಗೆ ಮುಂದಕ್ಕೆ ಮೇಲಟ್ಟಣಿಗೆಯ ಕೊಳಗಳಿರುವಲ್ಲಿ, ಒಂದು ಮನುಷ್ಯ ಸುಲಭವಾಗಿ ತೂರಿಹೋಗಲು ಸಾಕಾಗುವಷ್ಟು ತೂಬು ಇತ್ತು . ಅದು ಆಗೊಮ್ಮೆ ಈಗೊಮ್ಮೆ ಅರಮನೆಯ ಅ೦ಗಳವನ್ನು ಸ್ವಚ್ಛಗೊಳಿಸಿ, ಕೊಳಕು ನೀರು ಹರಿದು ನದಿ ಸೇರಲು ನಿರ್ಮಿಸಿದ್ದ ದ್ವಾರ. ಅದಕ್ಕೆ ಅಡ್ಡವಾಗಿ ಒಂದು ಕಲ್ಲನ್ನು ಇಡುತ್ತಿದ್ದರು. ಆ ಕಲ್ಲನ್ನು ಸರಿಸುವುದು ಸಾಧ್ಯವಾದರೆ_ಎಂದುಕೊಂಡ ಮೆನ್ನ....
   ಇನೇನಿಯ ಬದಲು ಪೂಜೆಗೆಂದು ನಿಯೋಜಿತನಾದ ದೇವಸೇವಕ ಬಂದ.
   "ಈಗ ನಿನ್ನದೇನೂ ಗಲಾಟೆ ಇಲ್ಲವಾ ಮೆನ್ನ ?" ಎಂದು ಕೇಳಿದ.
   “ಗಲಾಟೆ ಎಲ್ಲ ಮುಗೀತಲ್ಲ,” ಎಂದ ಈತ.
   “ಒಳ್ಳೇದಪ್ಪ ಇನ್ನು ಮಲಕೋ.”
    ಮೆನ್ನನ ಮೇಲೆ ಲಕ್ಷ್ಯವಿಡಬೇಕೆಂದು ಇನೇನಿ ಆ ದೇವಸೇವಕನಿಗೆ ಹೇಳಿದ್ದ. ಮೆನ್ನ ಅಪಾಯಕಾರಿಯಾಗಿ ಬದಲಿ ಬಂದವನಿಗೆ ತೋರಲಿಲ್ಲ. ತುಂಬ ಸಾಧುವಾಗಿದ್ದಾನೆ ಎನಿಸಿತು.