ಪುಟ:Mrutyunjaya.pdf/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೨

ಮೃತ್ಯುಂಜಯ

"ನಾವು ಹೆಮ್ಮೆ ಪಡುವಂಥ ದೇವರೂಪನೇ, ಪ್ರಶಂಸನೀಯ ಸಾರ್ವ
ಭೌಮನೇ, ಎಲ್ಲ ಜನರ ಕುರುಬನೇ, ನಿನಗೆ ಸ್ವಾಗತ. ಓ ದೀರ್ಘಯು
ದೊರೆಯೇ, ಸ್ವರ್ಣದೇವತೆ ಹಾಥೋರ್ ನಿನ್ನ ಮೂಗಿಗೆ ಬಲ
ಕೊಡಲಿ !...."
ಪೆರೋ ಶಿರಸ್ಸನ್ನು ತುಸು ಆಡಿಸಿ, ಗರ್ಭಗುಡಿಯ ದೇವತಾಮೂರ್ತಿಗೆ
ಸಾಷ್ಟಾಂಗ ನಮಿಸಿ, ಪ್ರಾರ್ಥಿಸಿದ :
"ದೇವಾ ! ನನಗೆ ಆರೋಗ್ಯ ಕೊಡು. ಆಯುಸ್ಸು ನೀಡು. ವೃದ್ಧಾಪ್ಯ
ವಿರುವಂತೆ ಮಾಡು. ನನ್ನ ರಾಜ್ಯಭಾರ ದೀರ್ಘವಾಗಲಿ. ನನ್ನೆಲ್ಲ ಅವ
ಯವಗಳಿಗೆ ಶಕ್ತಿ ದೊರೆಯಲಿ....ಮತ್ತು ನನಗೆ ಉಣ್ಣಲು ಕೊಡು,ಕುಡಿಯಲು
ಕೊಡು...."
ಹೊರಗೆ ಪ್ರಲಾಪ ಮುಂದುವರಿಯಿತು.
"ಓ ಒಸೈರಿಸ್, ಓ ಒಸೈರಿಸ್...."
ಪೆರೋನೊಡನೆ ಮಹಾ ಅರ್ಚಕ ನುಡಿದ :
"ಕ್ರಿಯಾವಿಧಿಗಳು ಆರಂಭವಾಗಿವೆ. ಮಹಾಪ್ರಭು ಹೋಗಿ ವಿರಮಿಸ
ಬಹುದು. ಬಿಸಿಲು ಬಾಡಿದೊಡನೆ ಯಾತ್ರೆ ಹೊರಡೋಣ."
ಪೆರೋ ಐಸಿಸ್ ಪಾತ್ರಧಾರಿಣಿಯ ಕಡೆಗೊಮ್ಮೆ ನೋಡಿದ; ಮಹಾ
ಅರ್ಚಕನನ್ನು ದಿಟ್ಟಿಸಿದ. ಮಾತಿಲ್ಲದೆ ದೊಡ್ಡ ದ್ವಾರದತ್ತ ಅಲ್ಲಿ ಕಾಯು
ತ್ತಿದ್ದ ಅಂಗರಕ್ಷಕರತ್ತ ತೆರಳಿದ.
"ದಾರಿ ಬಿಡಿ ! ದೂರ ಸರೀರಿ !" ಅಬ್ಬರ ಕೇಳಿಸಿದಂತೆ, ಜನ
ಅತ್ತಿತ್ತ ಚೆದರಿದರು, ನೆರಳಿಗೆ, ತಾವು ತಂದಿದ್ದ ಬುತ್ತಿ ಸೇವನೆಗೆ. ಇನ್ನು
ಕಟಕಟೆಯ ಬಳಿ ನಿಲ್ಲುವ ಅಗತ್ಯವಿಲ್ಲ. ಮೆರವಣಿಗೆಯಲ್ಲಿ ಅವರು ಪಾಲ್ಗೊಳ್ಳ
ಬೇಕು.
ಗರ್ಭಗುಡಿಯ ಬಾಗಿಲು ಹಾಕಿ ಮುದ್ರೆಯೊತ್ತುವಂತೆ ಮುಖ್ಯ ದೇವ
ಸೇವಕನಿಗೆ ಸೂಚಿಸಿ, ಮಹಾ ಅರ್ಚಕ ತನ್ನ ವಿಶ್ರಾಂತಿ ಕೊಠಡಿಯತ್ತ
ಸಾಗಿದ.
ಮೆರವಣಿಗೆ ಹೊರಡುವುದಕ್ಕೆ ಮುನ್ನ ಅವನು ಮತ್ತೊಮ್ಮೆ ಸ್ನಾನ
ಮಾಡಬೇಕು.

****