ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮೃತ್ಯುಂಜಯ
“ಆಗಲಿ, ನಾಳೆ ಅರಮನೆಗೆ ಬರ್ತೇನೆ; ಅಮಾತ್ಯರನ್ನು ಭೇಟಿಯಾಗ್ತೇನೆ. ಹಾಗೆಯೇ ಮೆನೆಪ್ ಟಾರನ್ನೂ ಕಾಣ್ತೇನೆ. ಅವರಿಗೆ ತಿಳಿಸಿಬಿಡಿ.”
“ನೀರಾನೆ ಪ್ರಾಂತಕ್ಕೆ ಯಾರ ಕೈಲಾದರೂ ಸಂದೇಶ ಕಳಿಸ್ಬೇಕು ಅಂದ್ಕೊಂಡು ಕಟ್ಟೆಗೆ ಬಂದೆ. ನೀವೇ ಸಿಕ್ಕಿದಿರಿ. ನೆಮ್ಮದಿಯಿಂದ ವಾಪಸು ಹೋಗ್ತೇನೆ.”
“ಕಳ್ಳಬಾಗಿಲಿನ ಮೂಲಕ ಹೊರಗೆ ಬಂದಿರಾ?” “ಹೂಂ !”
“ನೀರಾನೆ ಪ್ರಾಂತಕ್ಕೆ ಸುದ್ದಿ ಮುಟ್ಟಿಸೋ ವಿಷಯ ಚಿಂತೆ ಬೇಡ. ನಾಳೆ ರಾತ್ರೆಯೇ ನಾವು ಆ ದಿಕ್ಕಿಗೆ ಹೊರಡ್ತೇವೆ.”
ಮೆನ್ನ ಕುಪ್ಪಳಿಸುತ್ತ ಕಟ್ಟೆಗೆ ಬಂದು, ದಂಡೆಯುದ್ದಕ್ಕೂ ಸಾಗಿದ. ಪ್ರಾಕಾರದ ತೂಬಿನತ್ತ,
ಕಟ್ಟೆಯ ಮೇಲಿದ್ದ ಕೆಪ್ಪುವಿನ ಅಂಬಿಗರು ತಮ್ಮ ಯಜಮಾನ ಏನಾದರೂ ಹೇಳಬಹುದೆಂದು ಕಾದರು. ಹುಚ್ಚ ಮೆನ್ನ ಮಹತ್ವದ ಸಂಗತಿಯನ್ನು ತಿಳಿಸಿದಂತಿತ್ತು.
ಅಂಬಿಗರ ಮುಖ್ಯಸ್ಥನನ್ನು ಕರೆದು ಕೆಫ್ಟು ನುಡಿದ :
“ಇಲ್ಲಿ ಹೇರು ಇಳಿಸುವುದೂ ತುಂಬಿಕೊಳ್ಳುವುದೂ ಒಂದೇ ಹಗಲಿನಲ್ಲಿ ಆಗ್ಬೇಕು. ನಾಳೆ ರಾತ್ರಿಯೇ ಇಲ್ಲಿಂದ ಪ್ರಯಾಣ.
ಆತ ತಲೆ ತುರಿಸಿದ :
“ಮೆಂಫಿಸ್ ನಲ್ಲಿ ಒಂದು ದಿವಸದ ವಿಹಾರ ಅಂತ ಹೇಳಿದ್ದಿರಿ..."
“ಹೌದು. ಆದರೆ ಇದು ಅಸಾಧಾರಣ ಪರಿಸ್ಥಿತಿ, ವಾಪಸು ಬರ್ತಾ ಒಂದು ದಿವಸವಲ್ಲ ಒಂದು ವಾರ ತಂಗೋಣ. ಅಂಬಿಗರಿಗೆಲ್ಲ ಹೇಳು. ಆ ವಾರ ವಿಡೀ ಕುಡಿತದ ಖರ್ಚೆಲ್ಲ ನನ್ನದೇ...”
* * * *
ಕೆಪ್ಪುವಿನ ನಾವೆ ಬಂದಾಗ ಮೆಂಫಿಸಿನ ವಣಿಕಪ್ರಮುಖರಿಗೆ ಸಡಗರ . ಆದರೆ ಈ ದಿನ ಕೆಫ್ಟು ವರ್ತಕರೊಡನೆ ಮೌಲ್ಯಮಾಪನದ ಮಾತುಕತೆಯನ್ನು ಬೇಗನೆ ಮುಗಿಸಿ, ಕೊಡುವ ಕೊಳ್ಳುವ ಹೊಣೆಯನ್ನು ನಾವೆಯ ಲೆಕ್ಕಿಗನಿಗೆ ಒಪ್ಪಿಸಿ, ಕಾಣಿಕೆಯೊಡನೆ ಹಾಗೂ ವಿಕ್ರಯಕ್ಕೆಂದು ತಂದ ಆಭರಣಗಳೊಡನೆ