ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮೃತ್ಯುಂಜಯ ೪೨
ಲಾಭದ ಆಸೆಯಿಂದ ಸದ್ಯದ ಪರಿಸ್ಥಿತಿಯಲ್ಲಿ ಏರುಪೇರಾಗಲು అವಕಾಶ ನೀಡಲೆ?
ನಾಳೆ ಲಭ್ಯವಾಗುವ ಲೋಹಕ್ಕಿಂತಲೂ ಈ ದಿನ ಸಾಧ್ಯವಿರುವ ಭದ್ರತೆಗೇ ಹೆಚ್ಚು ಬೆಲೆ. అల్లವೆ?
ಆದಷ್ಟು ఆತ್ಮೀಯವೆನಿಸುವ ಮುಗುಳುನಗೆ ಸೂಸುತ್ತ ಅಮಾತ್ಯ ಹೇಳಿದ: “ಪ್ರತಿ ಸಲವೂ ನೀವು ಐಗುಪ್ತದಲ್ಲಿರುವಷ್ಟು ಕಾಲ ರಾಜ ಅತಿಥಿ. ನೀವು ಇಷ್ಟಪಡೋದಾದರೆ, ನಮ್ಮ ವಿದೇಶೀ ವ್ಯಾಪಾರವನ್ನೆಲ್ಲ ಅಧಿಕೃತವಾಗಿ నిಮ್ಮ ಮೂಲಕವೇ ನಾವು ಮಾಡಬಹುದು. ನಿಮಗೆ ಈ ಮೆನೆಫ್ ಟಾನನ್ನು ಭೇಟಿ ಮಾಡುವಂಥ ಚಿಲ್ಲರೆ ವಿಷಯ ಮುಖ್ಯವೊ? ವಾಣಿಜ್ಯದಿಂದ ಬರುವ ಅಪಾರ ಲಾಭ ಮುಖ್ಯವೊ?" ಕೆಫ್ಟು ತಾನೂ ಮಂದಹಾಸ ಬೀರಿದ. “ಮೆನೆಪ್ ಟಾ ರಾಜಬಂದಿಯಾಗಿದ್ದಾನೆ ಅಂತ ಭಾವಿಸ್ಲೆ ?” “ಇನ್ನೂ ಆಗಿಲ್ಲ....ನನ್ನ ವೈಯಕ್ತಿಕ ಅಭಿಪ್ರಾಯ ಹೇಳಲಾ ? ಸಮರ್ಥನಾದ ಹಿರಿಯ
ಅಧಿಕಾರಿಯಾಗೋ ಯೋಗ್ಯತೆ ಅವನಿಗಿದೆ. ಆದರೆ...”
ಕೆಫ್ಟು, ಒಂದು ಕ್ಷಣ ಕಾದು ನೋಡಿದ. ಅಮಾತ್ಯನ ಮಾತು ಅಲ್ಲಿಗೇ ಕಡಿದುಹೋಯಿತು. ಸಣ್ಣನೆ ನಕ್ಕು ಕೆಫ್ಟು ಅಂದ: “ಅವನ ವಿಷಯ ಮರೆತುಬಿಡಿ. ಏನೋ ವಾದಕ್ಕೋಸ್ಕರ ಹೇಳ್ದೆ.ಜಗತ್ತಿನ ಬಲಾಢ್ಯ ರಾಷ್ಟ್ರ ಐಗುಪ್ತದ ಅಮಾತ್ಯ ಆಮೆರಬ್ ರ ಸ್ನೇಹಿತ ನಾನು—ಅಷ್ಟು ಸಾಲದೆ ?" ఆ ಮಾತುಗಳಿಂದ ಅಮಾತ್ಯ ಸಂತುಷ್ಟನಾದ. ಕಫ್ಟು ತನ್ನ ಮನಸ್ಸಿನ ಅಸಮಾಧಾನವನ್ನು ಒಂದು ಮೂಲೆಗೆ ತಳ್ಳಿ,“ಅಲ್ಲಿ ಇಲ್ಲಿ ಸಣ್ಣಪುಟ್ಟ ಪ್ರವಾಸ ಮಾಡಿ ಬರ್ತೇನೆ; ಉತ್ಸವದ ಹೊತ್ತಿಗೆ ಇಲ್ಲಿ ರೋದಕ್ಕೆ ಯತ್ನಿಸ್ತೇನೆ,” ಎಂದು ಹೇಳಿ, ದೋಣಿಕಟ್ಟೆಗೆ ಮರಳಿದ. * * * * ಮೆನೆಪ್ ಟಾ ದಿನವಿಡೀ ಕೆಫ್ಟುವಿನ ದಾರಿ ನೋಡಿದ. ಅಮಾತ್ಯನನ್ನುವರ್ತಕ ಭೇಟಿ ಮಾಡಿದ ಸಂಗತಿ ಸೆನೆಬ್ ನಿಂದ ತಿಳಿಯಿತು. (‘ನಾನು ಹೊರ