ಪುಟ:Mrutyunjaya.pdf/೪೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

(ಇನ್ನೊಬ್ಬ: "ಅದೇನು ನಿನ್ನ ಎಡಗೈಲಿ?") ಥೊಎರಿಸ್ ಮೂರ್ತಿ ನೆಫಿಸ್ ಅತ್ತಿಗೆಗೆ. (ಮತ್ತೊಬ್ಬ : "ಹೌದು. ಅವಳಿಗೆ ಇದು ಒಂಭತ್ನೇ ತಿಂಗಳು.") ಮೆನೆಪ್‍ಟಾ ಅಣ್ಣನಿಗೆ ಅಲ್ಲಿರೋದಕ್ಕೆ ಬೇಸರ. ಆದರೂ ಆಮಂತ್ರಣ ಸ್ವೀಕರಿಸಿ ಹೋದ್ಮೇಲೆ ಉತ್ಸವ ಮುಗಿಯೋ ನಕ ಇರಬೇಕಲ್ಲ? (ಒಂದು ಧ್ವನಿ : "ನಮ್ಮ ಭೂಮಾಲಿಕರು ಸಿಕ್ಕಿದ್ರಾ?") ಮಾತಾಡೋಕೆ ಸಿಗಲಿಲ್ಲ. ಅಲ್ಲೇ ಇದ್ದಾರೆ. ರಾಜಧಾನಿ ಬಲು ದೊಡ್ಡ ಊರು. ಒಂದು ಮೂಲೇಲಿ ಸೇರ್ಕೊಂಡಿದ್ದಾರೆ. ಅವರ ಖರ್ಚು ಅರಮನೆ ನೋಡ್ಕೊಳ್ತದೆ. (ಒಬ್ಬ : "ಒಳ್ಳೇ ಅರಮನೆ." ಸುತ್ತಲೂ ನಗೆ.) ಚುಟುಕಾಗಿ ಹೇಳಿದ್ರೂ ಇಷ್ಟೆ, ಉದ್ದವಾಗಿ ಎಳೆದ್ರೂ ಇಷ್ಟೆ, ಕಣ್ರಪೋ...."

   ಜನ ನಗುತ್ತ ಅದೂ ಇದೂ ಮಾತನಾಡುತ್ತ ಚೆದರತೊಡಗಿದರು.
   "ಸೊಗಸಾಗಿ ಮಾತಾಡ್ದೆ, ಬಟಾ ಅಣ್ಣ," ಎಂದ ಖ್ನೆಮ್‍ಹೊಟೆಪ್.
   "ಹೋಗಲಿ ಬಿಡಪ್ಪ!” ಎಂದು ಬಟಾ ಹೇಳುತ್ತಿದ್ದಂತೆ ರಾಮೆರಿಪ್‍ಟಾ ಕಾಣಿಸಿಕೊಂಡ.
   "ಅಮ್ಮ ಕರೀತಾಳೆ. ಬರ್ತೀರಾ?" ಎಂದ.
   "ನೆಫಿಸ್‍ ಅತ್ತಿಗೇನ ನೋಡಿ ಬರ್ತೇನೆ." ಎಂದು ಬಟಾ ಸ್ನೊಫ್ರುಗೆ ಹೇಳಿ ಮಗ್ಗುಲು  ಮನೆಗೆ ಹೋದ.
   ಸ್ನೊಫ್ರುವಿನ ಪತ್ನಿ ನೆಜಮುಟ್ ತಲೆ ಹೊರಹಾಕಿ, "ನಿನ್ನ ಮನೆಗೂ ಹೋಗೋದಕ್ಕೆ ಮರೀಬೇಡ!" ಎಂದಳು.
   ಸ್ನೊಫ್ರುವೆಂದ:
   "ಅವಸರ ಬೇಡ. ನಾಯಕರ ಮನೆಯಿಂದ ನಿನ್ನಲ್ಲಿಗೆ ಹೋಗಿ ಊಟ ಮಾಡ್ಕೊಂಡು  ಬಾ. ಸಾಯಂಕಾಲ ಹಿರಿಯರ ಸಮಿತಿ ಸಭೆ ಕರೆಯೋಣ. ಎಲ್ಲ ವಿಷಯ ಅಲ್ಲಿಯೇ ಮಾತಾಡಿದರಾಯ್ತು."
   "ಹೂಂ ಹೂಂ."
          *           *           *           *
    ತುಂಬು ಗರ್ಭಿಣಿ ನೆಫಿಸ್ ಬಟಾ ತಂದಿತ್ತ ಥೊಎರಿಸ್ ಮೂರ್ತಿಯನ್ನು