ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೪೩೨ ಮೃತ್ಯುಂಜಯ
“ಅಲ್ಲಿ ದಾಸಿಯರಿಲ್ವಾ?"
"ಅರಮನೇಲಿ ದಾಸಿಯರಿಗೇನು ಬರಗಾಲ? ಆದರೆ ಆತಿಥಿಗೃಹಕ್ಕೆ
ನಾವು ಯಾರನ್ನು ಸೇರಿಸ್ತಿರ್ಲಿಲ್ಲ. ಪೆರೋ ಔತಣಕ್ಕಾಗಿ ಮೆನೆಪ್ಟಾ ಅಣ್ಣನನ್ನು
ಅಲಂಕರಿಸೋದಕ್ಕೆ ದಾಸಿಯರನ್ನು ಕಳಿಸ್ತೇವೆ ಅಂದ್ರು, ಬೇಡ--ಅಂದೆ.
ನಾನೇ ಅಣ್ಣನನ್ನು ಅಲಂಕರಿಸ್ದೆ !”
ಸಂತೋಷದಿಂದಲೂ ಸಮಾಧಾನದಿಂದಲೂ ನೆಫಿಸ್ ನಕ್ಕಳು.
"ಎಂಥ ಅಲಂಕಾರ?"
“ಅದೇ ಕವಡೆಸರ, ಬೆಂಡಿನ ಪಾದರಕ್ಷೆ, ಬೆಳ್ಳಿ ಉಂಗುರ...”
“ಹೊಹ್ಹೋ !“
“ಔತಣದಲ್ಲಿ ಅಣ್ಣನಿಗೆ ಒಂದು ಉಡುಗೊರೆ ಕೊಟ್ರು-ಮಣಿಕಟ್ಟಿನ ಪಟ್ಟಿ."
“ಬಂಗಾರದ್ದಾ ?”
“ಹೂಂ. ರತ್ನಖಚಿತ.” “ಅದನ್ನು ಕಟ್ಕೋತಾನಾ?”
"ಯಾರು ಮೆನೆಪ್ಟಾ ಅಣ್ಣನೆ? ಸರಿ, ಸರಿ..."
ನಿಟ್ಟುಸಿರಿನೊಂದಿಗೆ ನೆಫಿಸ್ ಅಂದಳು :
“ಅವನಿಗೆ ಯಾವುದೂ ಬೇಡ.”
ಕುಳಿತಿದ್ದ ಬಟಾನ ಹಿಂಬದಿಯಲ್ಲಿ, ಬಾಗಿಲ ಬಳಿ, ಚಿಲಿಪಿಲಿ ಸದ್ದಾಯಿತು.
ಆತನ ಗುಬ್ಬಚ್ಚಿಗಳೇ.
“ಅರೇ !” ಎಂದ ಬಟಾ, ಕೊರಳು ಹೊರಳಿಸಿ, ಎರಡು ತೋಳುಗಳನ್ನೂ ಚಾಚಿದ.
ಅವನ ಮಕ್ಕಳಲ್ಲಿ ನಾಲ್ವರು--ಚಿಕ್ಕವರು--ಓಡಿಬಂದು ತಂದೆಯ
ಕತ್ತಿಗೆ ಆತು ಬಿದ್ದರು.
"ಏಯ್! ಹೇರು ಜಾಸ್ತಿಯಾಯ್ತು ! ದೋಣಿ ಮಗುಚೀತು!
ಹುಷಾರ್ !" ಎಂದ ಆತ.
ಆ ಸಡಗರದ ಕಾವು ಇಳಿಯುತ್ತಿದ್ದಂತೆ, ನೆಫಿಸ್ ನುಡಿದಳು:
"ಖ್ನೆಮು ಹೆಂಡತಿ ಈ ತಿಂಗಳು ಅಸ್ವಸ್ಥಳಾಗಿಲ್ಲ .”
" ಹೌದೆ ? ಒಂದು ಥೊಎರಿಸ್ ಮೂರ್ತಿ ಕೊಂಡ್ಕೊಡು ಅಂತ