ಪುಟ:Mrutyunjaya.pdf/೪೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೩೪ ಮೃತ್ಯುಂಜಯ ಭೂಮಾಲಿಕರ ದಾಸ್ಯವಿಮುಕ್ತರೂ ಚೆನ್ನಾಗಿ ನಾಟಿ ಮಾಡಿದ್ದರು. ಎಲ್ಲ ಹೊಲಗಳಲ್ಲೂ ಫಸಲು ಹುಲುಸಾಗಿ ಬಂದಿತ್ತು. ಅವರೆಲ್ಲರದೂ ಒಂದೇ ಅಭಿಪ್ರಾಯ : ' ಕುಯಿಲಿಗೆ ಮುಂಚೆ ನಾಯಕರನ್ನು ಕರಕೊಂಡು ಬಂದ್ಬಿಡ್ಬೇಕು." ಎಲ್ಲರ ಬಯಕೆಗೆ ಒಬ್ಬ ಧ್ವನಿ ನೀಡಿದ : “ಈ ಸಲ ನಾವೆಲ್ಲ ಬರ್ತೀವಪ್ಪೊ.” ಹೊರಗೆ ರಣರಣ ಬಿಸಿಲು. ಆದರೂ ಜನ ಮೆಲ್ಲಮೆಲ್ಲನೆ ಚೆದರಿ ತಮ್ಮ ಮನೆ ಗುಡಿಸಲುಗಳನ್ನು ಸೇರಿಕೊಂಡರು. ಕಡುಬಿಸಿಲಿನ ವೇಳೆ ಮನೆಯ ತಣುಪು ನೆಲದ ಮೇಲೆ ಮಲಗುವುದು ಬಟಾನಿಗೆ ಇಷ್ಟ. "ಬಿಸಿಲು ಬಾಡೋ ಹೊತ್ತಿಗೆ ಎಬ್ಬಿಸ್ಬಿಡ್ರಿ. ರಾಜಗೃಹಕ್ಕೆ ಹೋಗ್ಬೇಕು. ಹಿರಿಯರ ಸಮಿತಿ ಸಭೆ ಇದೆ,” ಎಂದು ಹೇಳಿ, ತೋಳನ್ನೇ ದಿಂಬಾಗಿ ಮಾಡಿ, ಬಟಾ ಪವಡಿಸಿದ. ಯಾವ ಬಿಸಿಲೂ ತಮಗೆ ನಾಟದೆಂದು ಮಕ್ಕಳೆಲ್ಲ ಆಡಲು ಹೊರ ಹೋದರು. ಬಟಾನ ಹೆಂಡತಿ ಗಂಡನ ಗೊರಕೆ ಸದ್ದಿಗೆ ಕಿವಿಗೊಡುತ್ತ, ಆತನ ಮುಖವನ್ನು ದಿಟ್ಟಿಸುತ್ತ, ಬಹಳ ಹೊತ್ತು ಗೋಡೆಗೊರಗಿ ಕುಳಿತಳು.

               *                    *                            *                                     *

ರಾಜಗೃಹಕ್ಕೆ ಹೊರಡಲು ಬಟಾ ಅಣಿಯಾಗುತ್ತಿದ್ದಾಗ, ನೆಫರುರಾ ಬಂದಳು: “ಸಭೆಯಂತೆ. ಹೊರಟಿದ್ದಾನೆ,” ಎಂದಳು ಬಟಾನ ಹೆಂಡತಿ. “ಹಾಗಾದರೆ ಆಮೇಲೆ ಬರ್ತೇನೆ,” ಎಂದಳು ನೆಫರುರಾ. ಧ್ವని ಕೇಳಿ ಬಟಾ ಒಳಗಿನಿಂದಲೇ, “ಇರು ನೆಫರು ನೀನು ಬಂದಿದ್ದೆ. ಅಂತ ತಿಳಿಸಿದರೆ ಹಿರಿಯರು ಸುಮ್ನಾಗ್ತಾರೆ . ಚೆನ್ನಾಗಿದ್ದೀಯಾ ?” “ಹೂಂ. ನೀನು ?” "ಓಹೋ." “ಅಣ್ಣನವರು ?" “ಚೆನಾಗಿದ್ದಾರೆ. ಆದರೆ ರಾಜಾತಿಥ್ಯದಿಂದ ಬೇಸರ ಬಂದಿದೆ. ವಾಪಸು