ಪುಟ:Mrutyunjaya.pdf/೪೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೪೩೫ ಹೋಗಿ, ಸೆಡ್ ಉತ್ಸವ ಮುಗಿದ ಮಾರನೆ ದಿನವೇ ಕರಕೊಂಡ್ಬರ್ತೇನೆ.” “ಬಹಳ ಜನ ಹೋಗ್ತೀರಾ ?” "ದೋಣಿ ತುಂಬುವಷ್ಟು." ಕತ್ತು ಕೊಂಕಿಸಿ ನೆಫರುರಾ ಕೇಳಿದಳು : "ನಾನೂ ಬರಲಾ ?” “ಯಾರು ಯಾರು ಹೋಗೋದೂಂತ ಇವತ್ತು ತೀರ್ಮಾನ ಮಾಡ್ತಾರೆ." ನಿನ್ನ ಅಪೇಕ್ಷೇನ ಹಿರಿಯರ ಮುಂದೆ ಇಡ್ತೇನೆ ." “ಅಷ್ಟು ಮಾಡಪ್ಪ.” “ನೆಫರು, ರಾಜಧಾನಿಗೆ ಹೋಗ್ತಾ ನಿನ್ನ ಬುತ್ತಿ ಸವಿದದ್ದೇ ಸವಿದದ್ದು!” “ಅಣ್ಣನವರಿಗೆ ಇಷ್ಟವಾಯ್ತಾ ” "ಹೂಂ. ಅಣ್ಣ ನವರಾದ ಅವರಿಗೂ ತಮ್ಮನವರಾದ ನಮಗೂ ! ಇದೇನು ಮಾಡಿದ್ದಾಳೆ ಈಕೆ,ಸ್ವಲ್ಪ ತಿಂದು ನೋಡು--ಅಂದ ನನಗೆ,ತಿಂದು ನೋಡಿ, ಇವಳು ಮನುಷ್ಯಳಲ್ಲ ಮಾಯಾವಿನಿ--ಅಂದೆ....ಒಂದು ವಿಚಾರ ಇದೆ, ನೆಫರು. ನಮ್ಮ ದೋಣಿಕಟ್ಟೆ ಉದ್ದಕ್ಕೂ ಎಡಗಡೆ ಬಲಗಡೆ ಅಂಗಡಿ ಸಾಲು ಕಟ್ಸೋದು. ಅಲ್ಲೊಂದು ಉಪಾಹಾರ ಮಂದಿರ--ನಿನ್ನದು !” “ಅಣ್ಣ ಒಪ್ತಾರಾ ?” “ಹೂಂ.. ಒಪ್ಪಿದ್ದಾರೆ. ಆಗ ನೀಲನದೀಲಿ ಸಂಚರಿಸೋ ಸಮಸ್ತ ದೋಣಿಗಳೂ ಇಲ್ಲಿ ಒಂದುಹೊತ್ತು ತಂಗ್ತವೆ.” ನೆಫರುರಾಳ ಮುಖಸೌಂದರ್ಯ ಮತ್ತಷ್ಟು ಕಾಂತಿಯುತವಾಗಿ ಬೆಳಗಿತು. ಆಗ ಅವಳೆಂದಳು : “ನನ್ನ ಬದುಕು ಸಾರ್ಥಕವಾಯ್ತು.” “ನಾನಿನ್ನು ಹೊರಡ್ತೇನೆ,” ಎಂದು ಹೇಳಿ ಬಟಾ ಹೊರಬಿದ್ದ. ರಾಜಗೃಹದತ್ತ ಬಿರಬಿರನೆ ಆತ ನಡೆದ. ನಾಯಕನ ಮೆಂಫಿಸ್ ವಾಸ್ತವ್ಯದ ಬಗೆಗೆ ಜನರೆದುರು ಬೆಳಗ್ಗೆ ಅವನು ಹೇಳಿದ್ದುದು ಊರಿನ ಕೇರಿಗಳಲ್ಲಿ ಸುತ್ತಾಡಿತ್ತು. ನಡೆಯುವ ಬಟಾನನ್ನು ಜಾಲಂದ್ರದ ಮೂಲಕವೋ ತೆರೆದ ಬಾಗಿಲೆಡೆಯಿಂದಲೋ ಎಲ್ಲರೂ ನೋಡುವವರೇ. ಕೆಲವರು ಹೊಸ್ತಿಲು