ಪುಟ:Mrutyunjaya.pdf/೪೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೩೬ ಮೃತುಂಜಯ ದಾಟಿ ಹೊರಬಂದು. ಸಲಿಗೆ ವಂದನೆ."ಹೇ ಬಟಾ!" "ಹೋ ಬಟಾ!" ನಿಂತೆನೆಂದರೆ ಕತ್ತಲಾದರೂ ರಾಜಗೃಹ ತಲಪಲಾರೆ ಎಂದುಕೊಂಡು, ಬಟಾ ನಡಿಗೆಯ ವೇಗವನ್ನು ಹೆಚ್ಚಿಸಿದ. ರಾಜಗೃಹಕ್ಕೆ ಹಸುರು ಕಳೆ, ಸುತ್ತಲಿನ ಉದ್ಯಾನದಲ್ಲಿ ಗಿಡಬಳ್ಳಿಗಳು ಸೊಂಪಾಗಿ ಬೆಳೆದು ಎಲ್ಲಿ ನೋಡಿದರಲ್ಲಿ ಹೂ. ವರ್ಣ ವೈವಿಧ್ಯ. ಆ ಸುಂದರ ಜಗತ್ತಿನೆಡಗೆ ತಾನೂ ಅರಳುತ್ತ ಬಟಾ ಅಲಂಕೃತ ಸ್ಮಾರಕ ಕಂಬವನ್ನು ಸಮಾಪಿಸಿದ. ಬಳ್ಳಿಯ ಬಳ್ಳಿ ಮಾಡದ ಕೆಳಗೆ ಯಾರೋ ವಯಸ್ಸಾದ ವ್ಯಕ್ತಿ ಕುಳಿತಿದ್ದುದು ಕಂಡಿತು. ಅಪರಿಚಿತ. ಆತ ಮುಗುಳು ನಕ್ಕು ಬಟಾನೊಡನೆ ಮಾತನಾಡಲು ಬಾಯಿ ತೆರೆದ. 'ನಿಂತರೆ ಕೆಟ್ಟೆ' ಎಂದುಕೊಂಡು ಬಟಾ ರಾಜಗೃಹದ ಮೆಟ್ಟಲುಗಳನ್ನೇರಿದ. ಮಹಡಿಯ ಮುಖಮಂಟಪದ ದಿಮ್ಮಿಯಿಂದ ಕೆಳಮುಖವಾಗಿ ಬೆಳೆಯುತ್ತಿದ್ದ ಜೇನು ತೊಟ್ಟಿ ಕಾಣಿಸಿತು. ಸಭಾಂಗಣದ ಮೂಲೆಯಲ್ಲಿ ಸೆಮ, ಥಾನಿಸ್, ಹೆಮೊನ್, ಹೆಮ್ ಟ ಹಾಗೂ ಸ್ನೊಫ್ರು-ಸೆಬೆಕ್ಖು ಮಾತನಾಡುತ್ತ ಕುಳಿತಿದ್ದರು. ಹೊರಗೆ ಇದ್ದ ಇಪ್ಯುವರ್ ತನ್ನೆಲ್ಲ ಹಲ್ಲುಗಳನ್ನೂ ತೋರಿಸುತ್ತ ಬಟಾನನ್ನು ಇರ್ದಿಗೊಂಡ. ಸಭಾಂಗಣ ಇನ್ನೊಂದು ಮೂಲೆಯಲ್ಲಿ ಒಬ್ಬ ಕಾವಲು ಭಟನೊಡನೆ ಮಾತನಾಡುತ್ತ್ ನಿಂತಿದ್ದ್ ಖ್ನೆಮ್ ಹೊಟೆಪ್, “ಆಗಲಿ, ನೀನೀಗ ಹೋಗು,” ಎಂದು ನುಡಿದು, ಆ ಯೋಧನನ್ನು ಬೀಳ್ಕೊಟ್ಟು ಬಟಾನೆಡೆಗೆ ಧಾವಿಸಿದ.

ಹಿರಿಯರ ಗುಂಪಿನ ಬಳಿ ಕುಳಿತುಕೊಳ್ಳುತ್ತ ಬಟಾನೆಂದ :

“ತಡವಾಯ್ತು.ಅಂಬಿಗ ಬಟಾನನ್ನು ಕಂಡರೆ ಜನರಿಗೆ ಇಷ್ಟೊಂದು ಪ್ರೀತಿ ಅಂತ ನನಗೆ ಗೊತ್ತಾದದ್ದೇ ಇವತ್ತು, ಎಲ್ಲರೂ ಮಾತನಾಡಿಸುವವರೇ. ಹೊರಡುವ ಹೊತ್ತಿಗೆ ಸರಿಯಾಗಿ ನೆಫರುರಾ ಬೇರೆ ಬಂದ್ಲು.” ಹೆಮ್ ಟ ಕೇಳಿದ: "ಅವಳಿಗೆ ಏನಂತೆ ?” “ಇನ್ನೇನಿದೆ? ಅಣ್ಣ ಚೆನಾಗಿದ್ದಾರಾ? ಕರಕೊಂಡು ಬರೋದಕ್ಕೆ ಬಹಳ ಜನ ಹೋಗ್ತೀರಾ ? ನಾನೂ ಬರಲಾ?” ಅಲ್ಲಿದ್ದವರು ಸದ್ದು ಮಾಡದೆ ಚುಟುಕಾಗಿ ನಕ್ಕರು.