ಪುಟ:Mrutyunjaya.pdf/೪೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ

೪೩೭

ಬಟಾನೆಂದ :
“ಜೇನು ತೊಟ್ಟಿ ನೋಡಿದೆ. ಉದ್ಯಾನ ತುಂಬ್ಕೊಂಡಿದೆ."
ಸೆಬೆಕ್ಖು ಬೆಳೆಸಿದ ಉದ್ಯಾನ. ಮಂದಹಾಸ ಬೀರುತ್ತ ಅವನೆಂದ:
“ಮುಚ್ಚಂಜೆ ಹೊತ್ತಿಗೆ ಊರಿನ ಜನ ಬಂದು ಮುಕುರ್.”
ಬಳ್ಳಿ ಮಾಡದ ಕೆಳಗೆ ಯಾರನ್ನೋ ನೋಡಿದ ಹಾಗಾಯ್ತು.”
“ಮುದುಕನೆ ?” ಎಂದು ಕೇಳಿದ ಥಾನಿಸ್.
"ಹ್ಞ್.”
"ಶಿಲ್ಪಿ ನೆಖೆನ್, ಈ ಊರಿಗೆ ಬಂದು ತಿಂಗಳಾಯ್ತು. 'ಆಳೆತ್ತರದ
ಮೂರ್ತಿ ಮಾಡ್ತೇನೆ; ಆರಾಳು ಎತ್ತರದ್ದು ಬೇಕಾದರೂ ಮಾಡ್ತೇನೆ'-
ಅನ್ತಾನೆ. 'ಎಲ್ಲಿಯೋ ಹುಟ್ಟಿದೆ, ಎಲ್ಲಿಯೋ ಬೆಳೆದೆ; ಹೊಟ್ಟೆಪಾಡಿಗಾಗಿ
ಯಾರು ಯಾರದೋ ರೂಪಶಿಲ್ಪ ಮಾಡ್ದೆ; ಎಪ್ಪತ್ತು ವರ್ಷ ಅಯ್ತು; ಇನ್ನೂ
ಹತ್ತಿಪ್ಪತ್ತು ವರ್ಷ ಚಾಣ ಹಿಡಿದೇನು; ಐಗುಪ್ತ ದೇಶವೇ ಬೇಡ ಅಂತ
ದಕ್ಷಿಣ ಹೋಗಿದ್ದೆ; ಬಂಡಾಯದ ಸುದ್ದಿ ಬಂದಾಗ ಅದೇನು ಮಾಡಿದಾರೋ
ನೋಡಿ ಬರಬೇಕು ಅನಿಸ್ತು; ಬಂದೆ; ಇದು ನನ್ನ ಕನಸಿನ ರಾಜ್ಯ. ಇಲ್ಲಿಯೇ
ಇರ್ತೇನೆ-ಅನ್ತಾನೆ. ಅಗೋ ಬಂದ."
ಎಲ್ಲರ ಕಣ್ಣುಗಳೂ ಉದ್ಯಾನದತ್ತ್ ಹೊರಳಿದುವು.
ನೀಳ ತೋಳುಗಳ ಎತ್ತರದ ದೇಹ, ನಡೆಯುವಾಗ ಹಾರಾಡುತ್ತಿದ್ದ
ನರೆತ ತಲೆಕೂದಲು. ಉದ್ದನೆಯ ಮೂಗು.ಆಳದಿಂದ ನೇರವಾಗಿ ದಿಟ್ಟಿಸುತ್ತಿದ
ಕಣ್ಣುಗಳು. ಆಳುವ ಸಂತತಿಯವನೇನೋ ಎಂದು ಭ್ರಮೆ ಹುಟ್ಟಿಸುವ ಗೋದಿ ಗೆಂಪು ಮೈ ಬಣ್ಣ.
ಆತನನ್ನು ಉದೇಶಿಸಿ ಬಟಾ ಅಂದ:
“ಬನ್ನಿ,"
ಅವನ ಬಳಿ ಸಾರಿ ಕುಳಿತ್ತುಕೊಳ್ಳುತ್ತ ಆತ ಕೇಳಿದ:
“ನೀವು ಬಟಾ ಅಲ್ಲವಾ ?”
"ಹೌದು ”
“ನೀವು ಬರ್ತಿದ್ದಾಗಲೆ ಊಹಿಸಿಕೊಂಡೆ. ಆಮೇಲೆ ಇಲ್ಲಿಂದ ಹೊರಟ
ಕಾವಲು ಭಟನೂ ಹೇಳ್ದ: ಅವರೇ ಬಟಾ:ಮಾತಾಡೋದಿದ್ದರೆ ಈಗಲೇ
ಹೋಗಿ; ಆಮೇಲೆ ಸಭೆ ಇದೆ ಅಂದ. ನೀವು ಬಂದ ಸಂಗತಿ ಮಧಾಹ್ನವಷ್ಟೇ